ವಿಜಯಪುರ : ಸಾರಿಗೆ ಸಂಸ್ಥೆಯ ಬಸ್ ಮತ್ತು ಫಾರ್ಚುನರ್ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ನಾಗಠಾಣ ಶಾಸಕ ದೇವಾನಂದ್ ಚವ್ಹಾಣ್ ಅವರ ಅಳಿಯ ಸೇರಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ. ವಿಜಯಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 52ರ ವಿಜಯಪುರ ಗ್ರಾಮೀಣ ಠಾಣಾ ವ್ಯಾಪ್ತಿಯ ಜುಮನಾಳ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದೆ.
ಮೃತರನ್ನು ಶಾಸಕ ದೇವಾನಂದ ಚವ್ಹಾಣ ಅವರ ಅಕ್ಕನ ಮಗ ವಿಜಯ ದೊಡಮನಿ (45), ಚಿದಾನಂದ ನಾಗೇಶ ಸೂರ್ಯವಂಶಿ (45), ಸೋಮನಾಥ ಕಾಳೆ (43) ಹಾಗೂ ಸಂದೀಪ ಪವಾರ (40) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆ ನಾಂದೇಡ ಮೂಲದವರು ಎಂದು ಗೊತ್ತಾಗಿದೆ.
ಕಾರಿನ ಅತಿವೇಗ ಹಾಗೂ ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಗೊತ್ತಾಗಿದೆ. ಅಪಘಾಕ್ಕೀಡಾದ KA 22 F 2198 ನೋಂದಣಿ ಸಂಖ್ಯೆಯ ಸಾರಿಗೆ ಬಸ್ ನಿಶ್ಚಿತಾರ್ಥ ಸಲುವಾಗಿ ನರಗುಂದದಿಂದ ವಿಜಯಪುರಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಬಂದಿತ್ತು. ನಿಶ್ಚಿತಾರ್ಥ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಎದುರಿನಿಂದ ಅತೀ ವೇಗದಿಂದ ಆಗಮಿಸಿದ ಕಾರು ಬಸ್ ಗೆ ಡಿಕ್ಕಿ ಹೊಡೆದಿದೆ.
ಇನ್ನು ಕಾರಿನಲ್ಲಿದ್ದವರು ಕೂಡಾ ವಿಜಯಪುರದ ಕೊಲ್ಹಾರ ಗ್ರಾಮದ ಮತ್ತೊಂದು ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಗಮಿಸಿದ್ದರು ಎಂದು ಗೊತ್ತಾಗಿದೆ.
ಸಂಸತ್ತಿನ ಚಳಿಗಾಲದ ಅಧಿವೇಶ : ಕೃಷಿ ಕಾಯ್ದೆಯತ್ತ ಎಲ್ಲರ ಚಿತ್ತ
ನವದೆಹಲಿ : ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ (monsoon session) ಪ್ರಾರಂಭವಾಗಲಿದ್ದು, ಕೃಷಿ ಕಾಯ್ದೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ರೈತರ ಏಳಿಗೆಗಾಗಿ ಎಂದು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಕಾಯ್ದೆಯನ್ನು ಅಧಿವೇಶನದ ಮೊದಲ ದಿನವೇ ರದ್ದುಪಡಿಸುವ ಮಸೂದೆ ಮಂಡನೆಯಾಗಲಿದೆ.ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ( narendra singh tomar) ಕಳೆದ ವರ್ಷ ಜಾರಿಗೆ ತಂದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಮಂಡಿಸಲಿದ್ದಾರೆ.
ಈ ನಡುವೆ ಕಾಂಗ್ರೆಸ್ ಈ ಕಾಯ್ದೆ ವಿಚಾರದಲ್ಲಿ ಚರ್ಚೆ ನಡೆಸಲು ಪಟ್ಟು ಹಿಡಿಯುವ ಸಾಧ್ಯತೆಗಳಿದ್ದು, ಈ ಮೂಲಕ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾರ್ಯತಂತ್ರ ರೂಪಿಸಿದೆ. ಇನ್ನುಳಿದಂತೆ ಚೀನಾ ಒಳನುಸುಳುವಿಕೆ, ರಫೇಲ್ ಒಪ್ಪಂದ, ಅಗತ್ಯ ವಸ್ತುಗಳ ಬೆಲೆಯೇರಿಕೆ ಬಗ್ಗೆಯೂ ವಾಗ್ದಾಳಿ ನಡೆಸಲು ಕಾಂಗ್ರೆಸ್ ಸಿದ್ದತೆ ಮಾಡಿಕೊಂಡಿದೆ.
ಇನ್ನುಳಿದಂತೆ ಈ ಬಾರಿಯ ಅದಿವೇಶನದಲ್ಲಿ ಒಟ್ಟು 26 ಮಸೂದೆಗಳು ಮಂಡನೆಯಾಗಲಿದೆ.
Discussion about this post