ತೆಲಂಗಾಣ : ಮಹಿಳೆಯರ ಸುರಕ್ಷತೆ ಸಲುವಾಗಿ ದೇಶದಲ್ಲಿ ಅನೇಕ ಕಾನೂನುಗಳನ್ನು ರಚಿಸಲಾಗಿದೆ. ಆದರೆ ಕೆಲವೊಮ್ಮೆ ಈ ಕಾನೂನುಗಳು ದುರ್ಬಳಕೆಯಾಗುತ್ತಿರುತ್ತದೆ. ಅದರಲ್ಲೂ ವರದಕ್ಷಿಣೆ ಕಿರುಕುಳ ಕಾನೂನು ಅನೇಕ ಸಲ ದುರುಪಯೋಗವಾದ ಬಗ್ಗೆ ವರದಿಯಾಗಿದೆ. ಅನ್ಯಾಯವಾಗಿ ಜೈಲು ಸೇರಿದ ಪುರುಷರ ಸಂಖ್ಯೆಯೂ ಕಡಿಮೆ ಇಲ್ಲ.
ಇದೀಗ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನನ್ನು ಮಹಿಳೆಯೊಬ್ಬಳು ದುರುಪಯೋಗಪಡಿಸಿಕೊಂಡ ಘಟನೆ ಹೈದರಾಬಾದ್ನ ಗೊಲ್ಕಂಡಾ ಏರಿಯಾದಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ತನ್ನ ನೆರೆಹೊರೆಯವರು ಹಾಗೂ ಸ್ನೇಹಿತರ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಳು.
ಆದರೆ ಆರೋಪ ಹೊತ್ತವರ ಅದೃಷ್ಟ ಚೆನ್ನಾಗಿತ್ತು, ಪೊಲೀಸರು ಬುದ್ದಿವಂತಿಕೆ ತೋರಿದ್ದಾರೆ. ಆರೋಪಿಗಳನ್ನು ಬಂಧಿಸುವ ಮುನ್ನ ದೂರಿನ ಅಸಲಿತ್ವ ಪರೀಕ್ಷೆಗೆ ಮುಂದಾಗಿದ್ದಾರೆ. ಆಗ ಗೊತ್ತಾಗಿದ್ದು ಇದೊಂದು ಸುಳ್ಳು ದೂರು ಅಂತಾ. ದೂರು ಕೊಟ್ಟವಳನ್ನೇ ಕರೆದು ವಿಚಾರಣೆ ನಡಸಿದ್ರೆ ನೆರೆಹೊರೆಯವರು 10 ಸಾವಿರ ರೂಪಾಯಿ ಸಾಲ ಕೊಡಲು ನಿರಾಕರಿಸಿದರು ಅಂತಾ ಮಹಿಳೆ ಅತ್ಯಾಚಾರದ ಆರೋಪ ಹೊರಿಸಿರುವುದು ಗೊತ್ತಾಗಿದೆ.
ಇದೀಗ ಸುಳ್ಳು ದೂರು ದಾಖಲಿಸಿದ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದು, ಕಾನೂನು ತಜ್ಞರ ಬಳಿ ಸಲಹೆ ಕೇಳಲಾಗಿದೆ.
Discussion about this post