ರಾಯಚೂರು : ಕಲಬೆರಕೆ ಅನ್ನುವುದು ಇದೀಗ ಎಲ್ಲಿಲ್ಲ ಹೇಳಿ. ಹಾಲು ಕೂಡಾ ಹಾಲಾಹಲವಾಗಿದೆ ಅಂದ ಮೇಲೆ ಕೇಳಬೇಕಾ. ಹೋಗ್ಲಿ ನಶೆ ಏರಿಸಿಕೊಳ್ಳುವ ಮದ್ಯವಾದರೂ ಸುಖಕೊಡಬಲ್ಲುದೇ ಖಂಡಿತಾ ಇಲ್ಲ. ಮದ್ಯ ಕುಡಿಯುವುದೇ ಅಪಾಯ ಇನ್ನು ಅದನ್ನೂ ಕಲಬೆರಕೆ ಮಾಡಿದ್ರೆ ಅದರ ವಿಷದ ಪ್ರಮಾಣ ಯಾವ ಮಟ್ಟಿಗೆ ಏರಬಹುದು ಊಹಿಸಿ.

ಹಿಂದೆಲ್ಲಾ ಶೇಂದಿ ಕುಡಿದ್ರೆ ಅಪಾಯವಿಲ್ಲ ಅನ್ನಲಾಗಿತ್ತು. ಆದರೆ ಇದೀಗ ಶುದ್ಧ ಪರಿಶುದ್ಧ ಅನ್ನುವ ಶೇಂದಿಯೂ ಕಲಬೆರಕೆಯಾಗಿ ಮಾರಾಟವಾಗುತ್ತಿದೆ. ಬೇಡಿಕೆಯನ್ನು ಪೂರೈಸುವಷ್ಟು ಶೇಂದಿ ಉತ್ಪಾದನೆಯಾಗದಿರುವ ಹಿನ್ನಲೆಯಲ್ಲಿ ಕಲಬೆರಕೆ ಶೇಂದಿ ಉತ್ಪಾದನೆ ಎಗ್ಗಿಲ್ಲದೆ ಸಾಗಿದೆ. ಹೀಗೆ ಕಲಬೆರೆಕೆ ಶೇಂದಿ ಕುಡಿದ ಮಂದಿಯ ಆಯಸ್ಸು ಕೂಡಾ ಕುಸಿಯುತ್ತಿದೆ.

ಅದರಲ್ಲೂ ಗಡಿ ಭಾಗ ರಾಯಚೂರಿನಲ್ಲಿ CH ಪೌಡರ್ ಮಿಶ್ರಿತ ಶೇಂಧಿ ಮಾರಾಟ ಜೋರಾಗಿದ್ದು, ಅನೇಕರ ಪ್ರಾಣಕ್ಕೆ ಮಾರಕವಾಗುತ್ತಿದೆ. ಆಂಧ್ರ ಹಾಗೂ ತೆಲಂಗಾಣದಿಂದ ಸಿಎಚ್ ಪೌಡರ್ ಗಳು ಜಿಲ್ಲೆಗೆ ಎಂಟ್ರಿಯಾಗುತ್ತಿದ್ದು, ಇದನ್ನು ತಡೆಯಲು ಅಬಕಾರಿ ಅಧಿಕಾರಿಗಳು ಹರ ಸಾಹಸಪಡುತ್ತಿದ್ದಾರೆ.

ಒಟ್ಟಿನಲ್ಲಿ ಶೇಂದಿ ಕುಡಿಯುವ ಮುನ್ನ ಅದು ಅಸಲಿಯೋ ಅನ್ನುವುದನ್ನು ಪರೀಕ್ಷಿಸುವುದು ಉತ್ತಮ.
Discussion about this post