2009ರಲ್ಲಿ ತೆರೆ ಕಂಡ ಪರಿಚಯ ಚಿತ್ರದ ಮೂಲಕ ಚಂದನವಕ್ಕೆ ನಟಿಯಾಗಿ ಬಂದವರು ಸಿಂಧೂ ಲೋಕನಾಥ್. ಆ ವೇಳೆ ಸಿಂಧೂ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಲಿಲ್ಲ. ಯಾವಾಗ 2011ರಲ್ಲಿ ಲೈಫು ಇಷ್ಟೇನೆ ಅನ್ನುವ ಸಿನಿಮಾದಲ್ಲಿ ದಿಗಂತ್ ಜೊತೆ ತೆರೆ ಹಂಚಿಕೊಂಡರೋ ಸಿಂಧೂ ಚಿತ್ರರಂಗದ ಮಂದಿಯ ಗಮನ ಸೆಳೆದರು.
ಇದಾದ ಬಳಿಕ ಡ್ರಾಮಾ, ಯಾರೇ ಕೂಗಾಡಲಿ, ಕಾಫಿ ವಿದ್ ಮೈ ವೈಫ್ , ಲವ್ ಇನ್ ಮಂಡ್ಯ ಹೀಗೆ ಅನೇಕ ಸಿನಿಮಾಗಳಲ್ಲಿ ನಟಿಸಿದರು. ಇದರ ಮಧ್ಯೆ ತಮಿಳು ಚಿತ್ರರಂಗದತ್ತ ಹೋಗಿ ಬಂದ ಸಿಂಧೂ ಕೆಲ ಸಿನಿಮಾಗಳಲ್ಲಿ ನಟಿಸಿದರು. ಆದರೆ ಯಾಕೋ ಅಲ್ಲಿ ಅವರು ಯಶ ಕಾಣಲಿಲ್ಲ.
Discussion about this post