ಬೆಂಗಳೂರು : ವಂಚನೆ ಪ್ರಕರಣವೊಂದರಲ್ಲಿ ನಟ ದರ್ಶನ್ ಹೆಸರು ಸಿಲುಕಿ ಹಾಕಿಕೊಂಡ ಬೆನ್ನಲ್ಲೇ, ನಿರ್ದೇಶಕ ಪ್ರೇಮ್ ಹೆಸರನ್ನು ದರ್ಶನ್ ಎಳೆದು ತಂದಿದ್ದರು. ಅದ್ಯಾಕೆ ಪ್ರೇಮ್ ಹೆಸರನ್ನು ಈ ವಿವಾದಕ್ಕೆ ತಂದರೋ ಅನ್ನುವುದು ಅವರಿಗೆ ಗೊತ್ತು. ಅಷ್ಟೇ ಅಲ್ಲದೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ದರ್ಶನ್ ಗೆಳೆಯರನ್ನು ಟಾರ್ಗೇಟ್ ಮಾಡಿದ ಬೆನ್ನಲ್ಲೇ ಪ್ರೇಮ್ ಹೆಸರು ಪ್ರಸ್ತಾಪವಾಗಿರೋದು ಹಲವು ಅನುಮಾನಕ್ಕೆ ಕಾರಣವಾಗಿತ್ತು.
ಅಷ್ಟೇ ಅಲ್ಲದೆ ಇಂದ್ರಜಿತ್ ಲಂಕೇಶ್ ವಿರುದ್ಧ ತನ್ನ ಘನತೆ ಗೌರವ ಮರೆತು ಗುಡುಗಿದ್ದ ದರ್ಶನ್, ಯಾವಾಗ ಬಿಪ್ ಸೌಂಡ್ ಆಡಿಯೋ ಬಿಡುಗಡೆಯಾಯ್ತೋ ಸೈಲೆಂಟ್ ಆಗಿದ್ದಾರೆ. ದರ್ಶನ್ ಅವರ ಮೌನ ನೋಡಿದ್ರೆ ಇದು ಅವರದ್ದೇ ಆಡಿಯೋ ಹೌದು ಅನ್ನುವ ಅನುಮಾನ ಬಲವಾಗಿದೆ.
ಈ ನಡುವೆ ಪ್ರೇಮ್ ಅವರನ್ನು ಪುಂಡಾಗ್ ಎಂದು ಕರೆದಿದ್ದ ದರ್ಶನ್ ಅವರಿಗೆ ಜೋಗಿ ಖ್ಯಾತಿಯ ಪ್ರೇಮ್ ಸರಿಯಾಗಿಯೇ ತಿರುಗೇಟು ಕೊಟ್ಟಿದ್ದರು. ಕರಿಯದ ದಿನಗಳನ್ನು ನೆನಪಿಸಿಕೊಳ್ಳುವ ಮೂಲಕ ಪುಡಾಂಗ್ ಪದ ಪ್ರಯೋಗಕ್ಕೆ ಚಾಟಿ ಬೀಸಿದ್ದರು.
ಈ ನಡುವೆ ದರ್ಶನ್ ನೀಡಿದ್ದ ಹೇಳಿಕೆಯಿಂದ ಬೇಸರಗೊಂಡಿದ್ದ ನಟಿ ರಕ್ಷಿತಾ, ಹಳೆಯ ಫೋಟೋ ಹಂಚಿಕೊಳ್ಳುವ ಮೂಲಕ ಮುನಿಸು ಮರೆತಿದ್ದೇವೆ ಅನ್ನುವ ಸಂದೇಶ ಕೊಟ್ಟಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ “ಕೆಲವೊಂದು ಸಂಬಂಧಗಳು ಶಾಶ್ವತವಾಗಿ ಉಳಿಯುತ್ತದೆ, ನೀನು ಯಾವಾಗ್ಲೂ ನನ್ನ ಜೊತೆ ಇರ್ತಿಯಾ ಎಂದು ಗೊತ್ತಿದೆ. ನಿನ್ನಂತ ಒಳ್ಳೆ ವ್ಯಕ್ತಿಯನ್ನ ಜೀವನದಲ್ಲಿ ಪಡೆದಿರುವುದಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಈ ಬೆಳವಣಿಗೆ ನೋಡಿದರೆ ದರ್ಶನ್ ಪ್ರೇಮ್ ನಡುವಿನ ಬಹಿರಂಗ ಕಿತ್ತಾಟ, ಸೈಲೆಂಟ್ ಆಗಿ ಸದ್ದಿಲ್ಲದೆ ಪರ್ಸನಲ್ ಆಗಿ ಸೆಟ್ಲ್ ಮೆಂಟ್ ಆಗಿರೋ ತರ ಇದೆ. ಹೌದೋ ಅಲ್ವೋ ಅನ್ನೋದನ್ನ ಪ್ರೇಮ್ ಅವರೇ ಹೇಳಬೇಕು.
Discussion about this post