ಬೆಂಗಳೂರು : ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ನಟ ಅಶೋಕ್ ರಾವ್ ವಿದ್ಯಾರಣ್ಯಪುರದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳಿದಿದ್ದಾರೆ. ಕ್ಯಾನ್ಸರ್ ಸಲುವಾಗಿ ಪ್ರತೀ ದಿನ ಚಿಕಿತ್ಸೆ ಪಡೆಯುತ್ತಿದ್ದ ಅವರು ಪ್ರತೀ ದಿನ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ಕೂಡಾ ಚಿಕಿತ್ಸೆ ಮುಗಿಸಿ ಬಂದಿದ್ದ ಅವರು ಆರೋಗ್ಯವಾಗಿಯೇ ಇದ್ದರು. ಪತ್ನಿ, ಮಗ ಮಗಳು ಹಾಗೂ ಸೊಸೆಯನ್ನು ಅಶೋಕ್ರಾವ್ ಅಗಲಿದ್ದಾರೆ.
ಕಾಸರಗೋಡಿನಲ್ಲಿ ಜನಿಸಿದ್ದ ಅಶೋಕ್ ರಾವ್, ತಮಿಳುನಾಡಿನ ಸೇಲಂನಲ್ಲಿ ಶಿಕ್ಷಣ ಪಡೆದಿದ್ದರು. ಇದೇ ವೇಳೆ ಅವರಿಗೆ ನಾಟಕಗಳಲ್ಲಿ ಆಸಕ್ತಿ ಮೂಡಿತ್ತು. ಹೀಗಾಗಿ ಶಾಲಾ ದಿನಗಳಲ್ಲೇ ಕಂಚಿನ ಕಂಠದ ಮೂಲಕ ನೋಡುಗರ ಮನ ಸೆಳೆದಿದ್ದರು. ಎಜುಕೇಶನ್ ಮುಗಿದ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದ ಅವರು ಇಂಗ್ಲೀಷ್ ನಾಟಕಗಳಲ್ಲಿ ಅಭಿನಯಿಸಿದ್ದರು. ಇದೇ ಕಾರಣಕ್ಕಾಗಿ ಸಿನಿಮಾಗಳಲ್ಲೂ ಅವರಿಗೆ ಅವಕಾಶ ಸಿಕ್ತು.
ಇಂಗ್ಲಿಷ್ ನಾಟಕ ಮಾಡುತ್ತಿದ್ದ ಅಶೋಕ್ ರಾವ್ ಅವರಿಗೆ ಡಾ ರಾಜ್‌ಕುಮಾರ್ ಅಭಿನಯದ ಪರಶುರಾಮ ಸಿನಿಮಾದಲ್ಲಿ ಖಳನಾಯಕ ಪಾತ್ರ ಸಿಕ್ತು. ಇದಾದ ಬಳಿಕ ನಾಟಕ ಮತ್ತು ಸಿನಿಮಾಗಳಲ್ಲಿ ಸಕ್ರಿಯರಾದ ಅಶೋಕ್ ರಾವ್ ಖಳನಾಯಕ, ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದರು,
ಆವೇಶ’, ಮತ್ತೆ ಹಾಡಿತು ಕೋಗಿಲೆ, ಕಾಲಚಕ್ರ, ಬಾ ನಲ್ಲೆ ಮಧುಚಂದ್ರಕೆ, ಹಬ್ಬ, ಸಿಕ್ಕಾಪಟ್ಟೆ ಇಷ್ಟಪಟ್ಟೆ, ಶಿವಂ, ವಸುಂಧರಾ, ಬ್ರಹ್ಮ, ಅತಿ ಅಪರೂಪ, ಪರಿಣಯ, ಮುಗಿಲ ಚುಂಬನ, ಬೊಂಬುಗಳು ಸಾರ್ ಬೊಂಬುಗಳು, ಆಪರೇಷನ್ ಅಂಕುಶ, ತವರಿನ ಸಿರಿ, ಶೃಂಗಾರ ಕಾವ್ಯ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಅಶೋಕ್ ರಾವ್ ನಟಿಸಿದ್ದಾರೆ
Discussion about this post