ಬೆಂಗಳೂರು : ದೊಡ್ಮನೆಯ ಕುಡಿಯೊಂದು ಇದೀಗ ಕಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ ಅನ್ನುವ ಸುದ್ದಿ ಬಂದಿದೆ. ಹೌದು ವರನಟ ಡಾ. ರಾಜ್ ಕುಮಾರ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಕಾಲಿವುಡ್ ಕಾಲಿಡಲಿದ್ದಾರೆ ಅನ್ನುವ ಸುದ್ದಿ ಚಂದನವನದಲ್ಲಿ ಹರಿದಾಡುತ್ತಿದೆ.
ಈಗಾಗಲೇ ನಿನ್ನ ಸನಿಹಕೆ ಅನ್ನುವ ಸಿನಿಮಾದ ಮೂಲಕ ಚಂದನವನಕ್ಕೆ ಎಂಟ್ರಿಯಾಗಿರುವ ಅವರು ಅಗಸ್ಟ್ 20ರ ವರ ಮಹಾಲಕ್ಷ್ಮಿ ಹಬ್ಬದಂದು ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಅಂದೇ ಸೂರಜ್ ಗೌಡ ಅಭಿನಯದ ಧನ್ಯಾ ನಾಯಕಿಯಾಗಿ ನಟಿಸಿರುವ ನಿನ್ನ ಸನಿಹಕೆ ಬಿಡುಗಡೆಯಾಗಲಿದೆ.
ಈ ನಡುವೆ ರಾಮ್ ಕುಮಾರ್ ಪುತ್ರಿ ತಮಿಳುನಾಡಿನಿಂದ ಆಫರ್ ಬಂದಿದೆ ಅನ್ನಲಾಗಿದೆ. ಸಾಕ್ಷಿ ಅನ್ನುವಂತೆ ತಮಿಳುನಾಡಿನ ಸಿನಿ ವೆಬ್ ಸೈಟ್ ಗಳು ಧನ್ಯಾ ರಾಮ್ ಕುಮಾರ್ ಹೆಸರನ್ನು ಉಲ್ಲೇಖಿಸಿವೆ. ಆದರೆ ಸಿನಿಮಾ ಯಾವುದು, ನಿರ್ದೇಶಕ ಯಾರು ಅನ್ನುವ ಗುಟ್ಟು ರಟ್ಟಾಗಿಲ್ಲ.
Discussion about this post