ಕೊಟ್ಟಿದ್ದ ಎಲ್ಲವನ್ನೂ ಗ್ರಾಹಕ ಸ್ವೀಕರಿಸುತ್ತಾನೆ ಅಂದುಕೊಂಡಿದ್ದ ಅಮೆಜಾನ್ (Amazon pressure cooker) ಈಗ ದಂಡ ಕಕ್ಕಬೇಕಾಗಿದೆ
ನವದೆಹಲಿ : ದೋಷ ಪೂರಿತ ಕುಕ್ಕರ್ ಮಾರಾಟ ಮಾಡಿದ್ದ ಅಮೆಜಾನ್ ಗೆ (Amazon pressure cooker) ಕೇಂದ್ರಿಯ ಗ್ರಾಹಕ ರಕ್ಷಣಾ ಪ್ರಾಧಿಕಾರ (Central Consumer Protection Authority (CCPA)) 1 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಅಮೆಜಾನ್ ಸಂಸ್ಥೆ (Amazon) 2,265 ಸಮಸ್ಯೆಯಿಂದ ಕೂಡಿದ ಕುಕ್ಕರ್ ಅನ್ನು ಗ್ರಾಹಕರಿಗೆ ಮಾರಿದ್ದು, ಗುಣಮಟ್ಟವಿಲ್ಲದ ಕುಕ್ಕರ್ (pressure cooker )ಮಾರಿದ ಕರ್ಮಕ್ಕೆ ದಂಡ ತೆರಬೇಕಾಗಿದೆ. ಈ ಬಗ್ಗೆ ಸ್ಪಷ್ಟ ಆದೇಶ ಕೊಟ್ಟಿರುವ ಕೇಂದ್ರಿಯ ಗ್ರಾಹಕ ರಕ್ಷಣಾ ಪ್ರಾಧಿಕಾರ ಗ್ರಾಹಕರ ಹಕ್ಕುಗಳನ್ನು ಅಮೆಜಾನ್ ಉಲ್ಲಂಘಿಸಿದೆ. ಜೊತೆಗೆ ಗುಣಮಟ್ಟದ ವಿಷಯದಲ್ಲೂ ರಾಜೀ ಮಾಡಿಕೊಂಡಿದೆ ಅಂದಿದೆ.
ಇದನ್ನು ಓದಿ : siddaramaiah birthday : ಸಿದ್ದರಾಮಯ್ಯ ಅವರಿಗೆ ಶುಭ ಕೋರಿದವರ ಮೇಲೆ ಕೇಸ್
ಕೇವಲ 1 ಲಕ್ಷ ರೂಪಾಯಿ ದಂಡ ಮಾತ್ರವಲ್ಲದೆ ಮಾರಾಟ ಮಾಡಿದ 2,265 ಕುಕ್ಕರ್ ಗಳನ್ನು ಸಂಸ್ಥೆ ವಾಪಾಸ್ ಪಡೆದು ಅವರಿಗೆ ಹಣವನ್ನು ಮರು ಪಾವತಿ ಮಾಡುವಂತೆ ಸಿಸಿಪಿಎ ಆದೇಶಿಸಿದೆ.
ಕೇವಲ 2265 ಕುಕ್ಕರ್ ಮಾರಿದ್ದ ಅಮೆಜಾನ್ 6,14,825 ರೂಪಾಯಿ ಹಣವನ್ನು ಸಂಪಾದಿಸಿತ್ತು.
Discussion about this post