ಬೆಂಗಳೂರು : ಗಿರಾಕಿಗಳನ್ನು ಮನೆಗೆ ಕರೆಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರು ಮಹಿಳೆಯರನ್ನು ಕೋಣಕುಂಟೆ ಪೊಲೀಸರು ಬಂಧಿಸಿದ್ದಾರೆ. ಮಾಹಿತಿದಾರರು ನೀಡಿದ ಮಾಹಿತಿಯ ಆಧಾರದಲ್ಲಿ ಈ ದಾಳಿ ನಡೆಸಲಾಗಿದ್ದು, ಬಂಧಿತರನ್ನು ಶ್ರೇಯಸ್ ಕಾಲೋನಿಯ ನಫೀಸಾ (35) ಹಾಗೂ ಮಹದೇಶ್ವರ ಬಡಾವಣೆಯ ಮೇರಿ ( 45) ಎಂದು ಗುರುತಿಸಲಾಗಿದೆ.
ಬಂಧಿತರಿಂದ 5 ಸಾವಿರ ಹಣ, ಕಾಂಡೋಮ್, ಗಿರಾಕಿಗಳ ಸೆಳೆಯಲು ಬಳಸುತ್ತಿದ್ದ ಎರಡು ಮೊಬೈಲ್ ಫೋನ್ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಪಶ್ಚಿಮ ಬಂಗಾಳ ಮೂಲದ ಯುವತಿಯೊಬ್ಬಳನ್ನು ರಕ್ಷಿಸಲಾಗಿದೆ.
ಮಾಹಿತಿ ಬಂದ ತಕ್ಷಣ ಕಾರ್ಯಾಚರಣೆ ಪ್ರಾರಂಭಿಸಿದ ಪೊಲೀಸರು, ಮೊದಲು ನಾಲ್ವರು ಕಾನ್ ಸ್ಟೇಬಲ್ ಗಳು ಗಿರಾಕಿಗಳ ಸೋಗಿನಲ್ಲಿ ನಫೀಸಾ ಮನೆಗೆ ಹೋಗಿದ್ದಾರೆ. 5 ಸಾವಿರಕ್ಕೆ ವ್ಯವಹಾರ ಕುದುರಿಸಿದ್ದಾರೆ. ವೇಶ್ಯಾವಾಟಿಕೆ ದಂಧೆ ಖಚಿತವಾಗುತ್ತಿದ್ದಂತೆ ಮಹಿಳಾ ಪೊಲೀಸರ ಜೊತೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ಆದರೆ ಬೆಂಗಳೂರಿನಲ್ಲಿ ಇಂತಹ ಅನೇಕ ಕಡೆ ವೇಶ್ಯಾವಾಟಿಕೆ ನಡೆಯುತ್ತಿದ್ದೆ. ಪೊಲೀಸ್ ಠಾಣೆಗಳು ಗೊತ್ತಿದ್ದರೂ ಸುಮ್ಮನಿವೆ. ಅದ್ಯಾಕೆ ಸುಮ್ಮನಿದೆ ಅನ್ನುವುದು ಕೂಡಾ ಹಿರಿಯ ಅಧಿಕಾರಿಗಳಿಗೆ, ಗೃಹ ಸಚಿವರಿಗೂ ಗೊತ್ತಿದೆ.
Discussion about this post