ಮಾನವ ಹಕ್ಕು ಸಂಘಟನೆ ಕಟ್ಟಿಕೊಂಡಿದ್ದ ಮಂಜುಳಾ ಮಾಡುತ್ತಿದ್ದ ವ್ಯವಹಾರ ಮಾತ್ರ ಬೇರೆಯದ್ದೇ ಆಗಿತ್ತು ( Police)
ಬೆಂಗಳೂರು : ಒಂದು ಕಾಲದಲ್ಲಿ ಹೋರಾಟಗಾರರು, ಸಂಘಟನೆ ಅಂದ್ರೆ ಗೌರವ ಇರುತ್ತಿತ್ತು. ಆದರೆ ಈಗ ನಾಯಿ ಕೊಡೆಗಳಂತೆ ಎದ್ದು ನಿಂತಿರುವ ಸಂಘಟನೆಗಳ ಅಸಲಿ ಮುಖವಾಡವೇ ಬೇರೆಯಾಗಿದೆ. ಸಾಮಾಜಿಕ ಸೇವೆಯ ಹೆಸರಿನಲ್ಲಿ ಮಾಡುವುದೆಲ್ಲಾವೂ ಕಾನೂನು ಬಾಹಿರ ಕೃತ್ಯಗಳಾಗಿದೆ. ( Police)
ಇದನ್ನು ಓದಿ : Prem Singh : ನಾಮ ಹಾಕಿದ್ದಕ್ಕೆ ಯುವಕನಿಗೆ ಚಾಕುವಿನಿಂದ ಇರಿತ :ಸ್ಫೋಟಕ ಮಾಹಿತಿ ಬಹಿರಂಗ
ಹೀಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಅಕ್ರಮ ಬಂಧನದಲ್ಲಿಟ್ಟು ಯುವತಿಯೊಬ್ಬಳನ್ನು ಲೈಂಗಿಕವಾಗಿ ಶೋಷಿಸಿದ ಆರೋಪದಲ್ಲಿ ಮಾನವ ಹಕ್ಕು ಸಂಘಟನೆಯ ಮುಖ್ಯಸ್ಥೆ ಸೇರಿ ಮೂವರನ್ನು ಬಂಧಿಸಲಾಗಿದೆ. ಹೈಗ್ರೌಂಡ್ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ಯುವತಿಯನ್ನು ರಕ್ಷಿಸಲಾಗಿದೆ.
ಬಂಧಿತರನ್ನು ರಾಜಾಜಿನಗರದ ಎಸ್ ಮಂಜುಳಾ ಆಲಿಯಾಸ್ ಸಂಗೀತ ಪ್ರಿಯ, ಆಕೆಯ ಬಲಗೈ ಭಂಟ ಬ್ರಹ್ಮೇಂದ್ರ ಹಾಗೂ ಲಾಡ್ಜ್ ಮಾಲೀಕ ಸಂತೋಷ್ ಎಂದು ಗುರುತಿಸಲಾಗಿದೆ.
ಕೆಲಸ ಕೊಡಿಸುವುದಾಗಿ ನಂಬಿಸಿ ಮಂಡ್ಯ ಜಿಲ್ಲೆಯಿಂದ 20 ವರ್ಷದ ಯುವತಿಯನ್ನು ಕರೆ ತಂದಿದ್ದ ಆರೋಪಿಗಳು ಶಿವಾನಂದ ಸರ್ಕಲ್ ನಲ್ಲಿ ಕೂಡಿ ಹಾಕಿದ್ದರು. ಈ ವೇಳೆ ಎಚ್ಚೆತ್ತುಕೊಂಡ ಯುವತಿ ತನ್ನ ಗೆಳೆಯನಿಗೆ ವಿಷಯ ತಿಳಿಸಿದ್ದಳು. ಈ ವೇಳೆ ಆಕೆಯ ಗೆಳೆಯ ಪೊಲೀಸರನ್ನು ಸಂಪರ್ಕಿಸಿದ್ದಾನೆ. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಲಾಡ್ಜ್ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಮಂಜುಳಾ ನವ ಭಾರತ ಅನ್ನುವ ಹೆಸರಿನಲ್ಲಿ ಸಂಘಟನೆ ಕಟ್ಟಿಕೊಂಡು ವ್ಯವಹಾರ ನಡೆಸುತ್ತಿದ್ದಳು ಅನ್ನಲಾಗಿದೆ.
Discussion about this post