ಹೆಜ್ಜೆ ಹೆಜ್ಜೆಗೂ ಪವಿತ್ರ ಲೋಕೇಶ್ ( Pavitra lokesh) ಅವರ ತಪ್ಪುಗಳೇ ಕಾಣಿಸುತ್ತಿದೆ. ಸಂಬಂಧಗಳಿಗೆ ಬೆಲೆಯೇ ಇಲ್ಲದಂತೆ ಅವರು ವರ್ತಿಸಿದ್ರ. ಸುಚೇಂದ್ರ ಪ್ರಸಾದ್ ಮೌನಕ್ಕೆ ಶರಣಾಗಿದ್ರು. ಇದೀಗ ಪವಿತ್ರ ಅವರನ್ನೂ ಕೆದಕ್ಕಿದ್ದಾರೆ
ಬೆಂಗಳೂರು : ತೆಲುಗು ನಟ ನರೇಶ್ ತೆಕ್ಕೆಗೆ ಜಾರಿರುವ ನಟಿ ಪವಿತ್ರಾ ಲೋಕೇಶ್ ( Pavitra lokesh ) ಸಾಕಷ್ಟು ವರ್ಷಗಳ ಹಿಂದೆ ತೆಲುಗು ವಾಹಿನಿಗಳಿಗೆ ಕೊಟ್ಟ ಸಂದರ್ಶನದಲ್ಲಿ ಸುಚೇಂದ್ರ ಪ್ರಸಾದ್ ( suchendra prasad ) ಜೊತೆಗಿನ ಲವ್ ಸ್ಟೋರಿಯನ್ನು ಹಂಚಿಕೊಂಡಿದ್ದರು. ತಮಗೆ ಹೇಗೆ ಪರಿಚಯವಾಯ್ತು, ತಮ್ಮ ಅಭಿರುಚಿಗಳೇನು ಅನ್ನುವುದನ್ನು ಹಂಚಿಕೊಂಡಿದ್ದರು. ಯಾವಾಗ ನರೇಶ್ ಜೊತೆಗೆ ಪವಿತ್ರಾ ಲೋಕೇಶ್ ಮದುವೆಯಾಗಿದೆ ಅನ್ನುವ ಸುದ್ದಿ ಹರಡಿತೋ, ಮೇಡಂ ಉಲ್ಟಾ ಹೊಡೆದಿದ್ದಾರೆ.
ನಾನ್ಯಾಕೆ ಸುಚೇಂದ್ರ ಪ್ರಸಾದ್ ( suchendra prasad) ಅವರಿಗೆ ಡಿವೋರ್ಸ್ ಕೊಡಲಿ, ನಾನು ಅವರನ್ನೂ ಮದುವೆಯೇ ಆಗಿಲ್ಲ, ಮದುವೆಯಾಗಿರುವುದಕ್ಕೆ ಸಾಕ್ಷಿ ಎಲ್ಲಿದೆ. ನಾನು ಸುಚೇಂದ್ರ ಪ್ರಸಾದ್ ( suchendra prasad) ಜೊತೆಗೆ ಲಿವಿಂಗ್ ಟುಗೆದರ್ ನಲ್ಲಿದ್ದೆ ಅಂದಿದ್ದರು.

ಇದೀಗ ಪವಿತ್ರಾ ಲೋಕೇಶ್ ಆಡಿದ ಮಾತಿಗೆ ತಿರುಗೇಟು ಕೊಟ್ಟಿರುವ ಸುಚೇಂದ್ರ ಪ್ರಸಾದ್ 16 ವರ್ಷಗಳ ಕಾಲ ನಡೆದ ದಾಂಪತ್ಯ ಜೀವನ, ಎರಡು ಮಕ್ಕಳನ್ನು ಪಡೆದ ಕಥೆಯನ್ನು ವಿವರಿಸಿದ್ದಾರೆ. ಇದೀಗ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಸುಚೇಂದ್ರ ಪ್ರಸಾದ್ ಪವಿತ್ರಾ ಲೋಕೇಶ್ ನನ್ನ ಪತ್ನಿ ಹೌದು ಅನ್ನುವುದಕ್ಕೆ ಸಾಕ್ಷಿ ಕೊಟ್ಟಿದ್ದಾರೆ.
ನಾನು ಪವಿತ್ರಾ ಲೋಕೇಶ್ ಅವರನ್ನು ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದೇನೆ. ನಾನೇ ಪವಿತ್ರಾ ಲೋಕೇಶ್ ಗಂಡ ಅನ್ನುವುದಕ್ಕೆ ಅವರ ಪಾಸ್ ಪೋರ್ಟ್ ಮತ್ತು ಆಧಾರ್ ಕಾರ್ಡ್ ನೋಡಿದರೆ ಗೊತ್ತಾಗುತ್ತದೆ. ನನ್ನ ಪಾಸ್ ಪೋರ್ಟ್ ನಲ್ಲೂ ಅವರೇ ಹೆಂಡತಿ ಎಂದು ದಾಖಲಾಗಿದೆ.
ನಾವಿಬ್ಬರೂ ಗಂಡ ಹೆಂಡತಿ ಅನ್ನುವ ಕಾರಣದಿಂದಲೇ ಅನೇಕ ಧಾರ್ಮಿಕ ಗುರುಗಳು ನಮ್ಮನ್ನು ಸನ್ಮಾನಿಸಿದ್ದಾರೆ. ಗಂಡ ಹೆಂಡತಿ ಅನ್ನುವ ಕಾರಣದಿಂದಲೇ ಸಾಕಷ್ಟು ಕಾರ್ಯಕ್ರಮಗಳಿಗೆ ಜೊತೆಯಾಗಿ ಹೋಗಿದ್ದೇವೆ ಇದಕ್ಕಿಂತ ಬೇರೆ ಪುರಾವೆ ಬೇಕಾ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : coronavirus bangalore : ಕೊರೋನಾ ಸೋಂಕಿಗೆ 16ರ ಬಾಲಕ ಬಲಿ : ಬೆಂಗಳೂರಿನಲ್ಲಿ ಇಳಿದ ಸೋಂಕಿನ ಅಬ್ಬರ
ಇನ್ನು ಮದುವೆ ನೋಂದಣಿ ಪತ್ರದ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಸುಚೇಂದ್ರ ಪ್ರಸಾದ್. ಇದೊಂದು ವಿದೇಶಿ ಸಂಸ್ಕೃತಿ, ಭಾರತದಲ್ಲಿ ಮದುವೆ ನೋಂದಣಿ ಕಡ್ಡಾಯವಲ್ಲ ಆ ಕಾರಣದಿಂದಲೇ ನಾವು ವಿವಾಹ ನೋಂದಣಿ ಮಾಡಿಲ್ಲ ಅಂದಿದ್ದಾರೆ.
Drone Prathap ಬಿಗ್ ಬಾಸ್ ಮನೆಗೆ : ಮಹಾಮನೆಯಲ್ಲಿ ಇನ್ನೇನು ಕಾದಿದೆಯೋ
ಈ ಬಾರಿ ಕನ್ನಡದಲ್ಲಿ ಎರಡೆರಡು Bigg Boss ಕಾರ್ಯಕ್ರಮ ಮೂಡಿಬರಲಿದೆ. ಮೊದಲು ಮಿನಿ ಸೀಸನ್ ( bigg boss mini season) ನಡೆದರೆ ಬಳಿಕ ಮಹಾ ಸೀಸನ್ ನಡೆಯಲಿದೆ. ಈ ಬಾರಿಯೂ ಕಿಚ್ಚ ಸುದೀಪ್ ( kiccha sudeep ) ಕಾರ್ಯಕ್ರಮ ನಡೆಸಿಕೊಡಲಿದ್ದಾರೆ
ಕಿರುತೆರೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿರುವ ಬಿಗ್ ಬಾಸ್ ( Bigg Boss kannada ) ಯಾವಾಗ ಅನ್ನುವ ಪ್ರಶ್ನೆ ಎಲ್ಲರಲ್ಲಿದೆ. ಮೊದಲು ಐಪಿಎಲ್ ಮುಗಿಯಲಿ ಆಮೇಲೆ ಬಿಗ್ ಬಾಸ್ ಶುರುವಾಗಲಿದೆ ಅನ್ನಲಾಗಿತ್ತು. ಆದಾದ ಬಳಿಕ ವಿಕ್ರಾಂತ್ ರೋಣ ( vikrant rona) ಬಿಡುಗಡೆಯ ಗಡಿಬಿಡಿಯಲ್ಲಿ ಸುದೀರ್ ( Sudeep ) ಇದ್ದಾರೆ. ಹೀಗಾಗಿ ವಿಕ್ರಾಂತ್ ರೋಣ ಬಿಡುಗಡೆಯ ನಂತರವೇ ಬಿಗ್ ಬಾಸ್ ಕನ್ನಡ ಶುರುವಾಗಲಿದೆ ಅನ್ನಲಾಗಿತ್ತು.
ಇದೀಗ ಹೊಸ ಸುದ್ದಿಯೊಂದು ಬಂದಿದ್ದು, ಬಿಗ್ ಬಾಸ್ ಕಾರ್ಯಕ್ರಮ ಆಗಸ್ಟ್ ತಿಂಗಳಲ್ಲಿ ಪ್ರಾರಂಭವಾಗಲಿದೆ. ಈ ಬಾರಿ ಎರಡು ಬಿಗ್ ಬಾಸ್ ಕಾರ್ಯಕ್ರಮ ನಡೆಯಲಿದೆ. ವೂಟ್ ( voot select ) ಸಲುವಾಗಿ ಮೊದಲು ಮಿನಿ ಸೀಸನ್ ನಡೆಯಲಿದೆ. ಕಿರುತೆರೆಯ ಕೆಲ ಮಂದಿ, ಸೋಶಿಯಲ್ ಮೀಡಿಯಾದ ಕಿರಿಕ್ ಸ್ಟಾರ್ ಗಳು ಸೇರಿದಂತೆ ಕೆಲ ಅರೆಬೆಂದ ಸೆಲೆಬ್ರೆಟಿಗಳು ಪಾಲ್ಗೊಳ್ಳಲಿದ್ದಾರೆ. ಎಂದಿನಂತೆ ಇಲ್ಲಿ ವಾರಾಂತ್ಯದ ಕಾರ್ಯಕ್ರಮವನ್ನು ( kiccha sudeep ) ನಡೆಸಿಕೊಡಲಿದ್ದಾರೆ.
ಇದಾದ ಬಳಿಕ ಕಲರ್ಸ್ ವಾಹಿನಿಗಾಗಿ ಬಿಗ್ ಬಾಸ್ ಕಾರ್ಯಕ್ರಮ ನಡೆಯಲಿದೆ. ಮಿನಿ ಸೀಸನ್ ನ ಟಾಪ್ 5 ಸ್ಪರ್ಧಿಗಳ ಜೊತೆಗೆ ಸೆಲೆಬ್ರೆಟಿಗಳು ಇಲ್ಲಿ ಪಾಲು ಪಡೆಯುತ್ತಾರೆ,
ಇದೀಗ ಬಂದಿರುವ ಮಾಹಿತಿ ಪ್ರಕಾರ ಶಿವ ಪುತ್ರ, ರೂರಲ್ ರಂಜನ್ ಹಾಗೂ ಡ್ರೋಣ್ ಪ್ರತಾಪ್ ಮಿನಿ ಸೀಸನ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.ಜೊತೆಗೆ ಸ್ವಯಂ ಘೋಷಿತ ಕೆಲ ಸೆಲೆಬ್ರೆಟಿ ಸ್ಟಾರ್ ಗಳ ಜೊತೆಗೆ ಮಾತುಕತೆ ಕೂಡಾ ನಡೆಯುತ್ತಿದೆ.
Discussion about this post