ನಾಲ್ಕನೇ ಅಲೆಯ ಭೀತಿಯ ನಡುವೆ ಜನ ಮಾಸ್ಕ್ ಮರೆತು ಓಡಾಡುತ್ತಿದ್ದಾರೆ. ಆರೋಗ್ಯ ಇಲಾಖೆ ಪದೇ ಪದೇ ಮಾಡುತ್ತಿರುವ ಮನವಿ ಆದ್ಯಾಕೆ ಜನ ಕ್ಯಾರೇ ಅನ್ನುತ್ತಿಲ್ಲ ( coronavirus bangalore)
ಬೆಂಗಳೂರು : ನಗರದಲ್ಲಿ ಕೊರೋನಾ ಸೋಂಕಿನ ( coronavirus bangalore ) ಸ್ವಲ್ಪ ಕಡಿಮೆಯಾಗಿದೆ. ಶುಕ್ರವಾರ 932 ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಪಾಸಿಟಿವಿಟಿ ದರ ಶೇ 4.97ಕ್ಕೆ ಇಳಿದಿದೆ. 902 ಮಂದಿ ಕೊರೋನಾ ಗೆದ್ದಿದ್ದಾರೆ.
ಪ್ರಸ್ತುತ ನಗರದಲ್ಲಿ 6,062 ಕೊರೋನಾ ಸೋಂಕಿನ ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ 93 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಮಂದಿ ಐಸಿಯುನಲ್ಲಿದ್ದು, ಉಳಿದವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಶುಕ್ರವಾರ ಕೂಡಾ ಲಸಿಕಾ ವಿತರಣಾ ಕಾರ್ಯ ಮುಂದುವರಿದಿದ್ದು, 829 ಮಂದಿ ಮೊದಲ ಡೋಸ್ ಹಾಗೂ 2119 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 3375 ಮಂದಿ ಮೂರನೇ ಡೋಸ್ ಲಸಿಕೆ ಪಡೆದಿದ್ದಾರೆ.
ಇದನ್ನೂ ಓದಿ : Mangalore Accident : ಓಮ್ನಿ ಮೇಲೆ ಉರುಳಿ ಬಿದ್ದ ಲಾರಿ : ಕಾರಿನೊಳಗೆ ಅಪ್ಪಚ್ಚಿಯಾದ ವ್ಯಕ್ತಿ
ಶುಕ್ರವಾರ ನಗರದಲ್ಲಿ ಯಾವುದೇ ಕಂಟೈನ್ಮೆಂಟ್ ಝೋನ್ ನಿರ್ಮಾಣವಾಗಿಲ್ಲ. ಆರ್ ಆರ್ ನಗರ ವಲಯದಲ್ಲಿದ್ದ ಒಂದು ಕಂಟೈನ್ಮೆಂಟ್ ಪ್ರದೇಶ ಮುಕ್ತವಾಗಿದೆ. ಈ ಮೂಲಕ ಕಂಟ್ಮೈನ್ಮೆಂಟ್ ಪ್ರದೇಶದ ಸಂಖ್ಯೆ 21ಕ್ಕೆ ಇಳಿದಿದೆ.ರಾಜಧಾನಿಯಲ್ಲಿ ಶುಕ್ರವಾರ 17030 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿತ್ತು.
ಇನ್ನು ಶುಕ್ರವಾರ ಇಡೀ ರಾಜ್ಯದಲ್ಲಿ 1037 ಹೊಸ ಕೊರೋನಾ ಸೋಂಕಿತರು ಪತ್ತೆಯಾಗಿದ್ದು, 24 ಜಿಲ್ಲೆಗಳಲ್ಲಿ ಹೊಸ ಪ್ರಕರಣ ಕಾಣಿಸಿಕೊಂಡಿದೆ. 984 ಮಂದಿ ಸೋಂಕಿನ ಗುಣಮುಖರಾಗಿದ್ದು, 6506 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿದೆ. ಒಟ್ಟು 24 ಸಾವಿರ ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದ್ದು, ಪಾಸಿಟಿವಿಟಿ ದರ ಶೇ 4.2ರಷ್ಟು ದಾಖಲಾಗಿದೆ. ಗುರುವಾರಕ್ಕೆ ಹೋಲಿಸಿದರೆ ಮೂರು ಸಾವಿರದಷ್ಟು ಕಡಿಮೆ ಸೋಂಕು ಪರೀಕ್ಷೆ ನಡೆಸಲಾಗಿದೆ.
ಇದನ್ನೂ ಓದಿ : Crime news Aparna Singh : ಅಪ್ಪ ಗಿಫ್ಟ್ ಕೊಟ್ಟ ವಜ್ರದುಂಗರವೇ ಸುಪಾರಿ : ಪ್ರೀತಿಗೆ ಅಡ್ಡ ಬಂದ ತಂದೆಯನ್ನೇ ಮುಗಿಸಿದ ಮಗಳು
ಬೆಂಗಳೂರಿನಲ್ಲಿ ಕೂತು ವಿಶ್ವದ ದೊಡ್ಡಣ್ಣನಿಗೆ ವಂಚನೆ : ನಕಲಿ ಕಾಲ್ ಸೆಂಟರ್ ನ ಅಸಲಿ ಕಹಾನಿ
ಅಮೆರಿಕಾದ ಪ್ರಜೆಗಳಿಗೆ ದೋಖಾ ಮಾಡುತ್ತಿದ್ದ ನಕಲಿ ಕಾಲ್ ಸೆಂಟರ್ ( fake call center in bangalore ) ಜಾಲವನ್ನು ಬೆಂಗಳೂರು ಪೊಲೀಸರು ಬೇಧಿಸಿದ್ದಾರೆ
ಬೆಂಗಳೂರು : ನಕಲಿ ಅನ್ನುವುದು ಎಲ್ಲಿಲ್ಲ ಹೇಳಿ. ಅಸಲಿಯ ತಲೆ ಮೇಲೆ ಹೊಡದಂತೆ ನಕಲಿ ಜಾಲ ಕಾರ್ಯಾಚರಿಸುತ್ತಿದೆ. ಇದೀಗ ಭಾರತದ ಹೆಸರಿಗೆ ಮಸಿ ಬಳಿಯುವ ಸಲುವಾಗಿ ನಕಲಿ ಕಾಲ್ ಸೆಂಟರ್ ಗಳ ( fake call center in bangalore ) ಜಾಲ ಶುರುವಾಗಿದೆ. ಹೀಗೆ ಬೆಂಗಳೂರಿನಲ್ಲಿ ಅಮೆರಿಕಾದ ಪ್ರಜೆಗಳನ್ನು ವಂಚಿಸುತ್ತಿದ್ದ ನಕಲಿ ಕಾಲ್ ಸೆಂಟರ್ ಜಾಲವನ್ನು ವೈಟ್ ಫೀಲ್ಡ್ ಪೊಲೀಸರು ಬೇಧಿಸಿದ್ದಾರೆ. ಸಾಫ್ಟ್ ವೇರ್ ಕಂಪನಿ ಮಾದರಿಯಲ್ಲಿ ನಕಲಿ ಕಾಲ್ ಸೆಂಟರ್ ತೆರೆದಿದ್ದ ಖದೀಮರು, ಟೆಲಿಕಾಲರ್ ಗಳ ಮೂಲಕ ಅಮೆರಿಕಾ ಪ್ರಜೆಗಳಿಗೆ ಕರೆ ಮಾಡಿ ಗಿಫ್ಟ್ ಕಾರ್ಡ್ ಹೆಸರಿನಲ್ಲಿ ಬ್ಯಾಂಕ್ ಖಾತೆಯ ಮಾಹಿತಿ ಪಡೆದು ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ಈ ಸಂಬಂಧ 11 ಮಂದಿಯನ್ನು ಬಂಧಿಸಲಾಗಿದೆ. ಅಮೆರಿಕಾದಲ್ಲಿ ನೆಲೆಸಿರುವ ಕಿಂಗ್ ಪಿನ್ ಈ ಜಾಲವನ್ನು ನಿಯಂತ್ರಿಸುತ್ತಿದ್ದ.
ಅಮೆರಿಕಾದಲ್ಲಿ ಕೂತಿರುವ ಕಿಂಗ್ ಪಿನ್ ಅಮೆರಿಕಾ ಪ್ರಜೆಗಳ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತಾ ಸಂಖ್ಯೆ, ಅಮೆಜಾನ್ ಖಾತೆ, ವಾಲ್ ಮಾರ್ಟ್ ಖಾತೆಯ ಮಾಹಿತಿ ಸಂಗ್ರಹಿಸುತ್ತಿದ್ದ. ಬಳಿಕ ಅಮೆರಿಕಾ ಪ್ರಜೆಗಳಿಗೆ ನಿಮ್ಮ ಬ್ಯಾಂಕ್ ಖಾತೆ ಹ್ಯಾಕ್ ಆಗಿದೆ, ನಿಮಗೆ ಗಿಫ್ಟ್ ಬಂದಿದೆ, ಖಾತೆಯಿಂದ ಹಣ ವರ್ಗಾವಣೆಯಾಗಿದೆ ಅನ್ನುವ ಸಂದೇಶ ಕಳುಹಿಸುತ್ತಿದ್ದ. ಜೊತೆಗೆ ಹೆಚ್ಚಿನ ಮಾಹಿತಿಗಾಗಿ ಕಾಲ್ ಸೆಂಟರ್ ಗೆ ಕರೆ ಮಾಡಿ ಎಂದು ಲಿಂಕ್ ಕೊಡುತ್ತಿದ್ದ.
ಗಾಬರಿಯಿಂದ, ಗಿಫ್ಟ್ ಆಸೆಯಿಂದ ಈ ಲಿಂಕ್ ತೆರೆದರೆ ಈ ಕರೆ ಬೆಂಗಳೂರಿನಲ್ಲಿದ್ದ ಕಾಲ್ ಸೆಂಟರ್ ಗೆ ಕನೆಕ್ಟ್ ಆಗುತ್ತಿತ್ತು. ಇದೇ ವೇಳೆ ಅಮೆರಿಕಾ ಪ್ರಜೆಗಳೊಂದಿಗೆ ಅದೇ American Accent ನಲ್ಲಿ ಮಾತನಾಡಿ ಬ್ಯಾಂಕ್ ಖಾತೆ, ಅಮೆಜಾನ್ ಖಾತೆ, ವಾಲ್ ಮಾರ್ಟ್ ಖಾತೆಯ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಬಳಿಕ ಗಿಫ್ಟ್ ಕಾರ್ಡ್ ಖರೀದಿಸಿ ಕೋಡ್ ಕೇಳುತ್ತಿದ್ದರು. ಈ ಕೋಡ್ ಅನ್ನು ಟೀಮ್ ಲೀಡರ್ ಗಳು ಅಮೆರಿಕಾದ ಕಿಂಗ್ ಪಿನ್ ಗೆ ಕಳುಹಿಸುತ್ತಿದ್ದರು. ಆತ ಆ ಗಿಫ್ಟ್ ಕಾರ್ಡ್ ಅನ್ನು ಡಾಲರ್ ಗೆ ಪರಿವರ್ತಿಸುತ್ತಿದ್ದ. ಆದರೆ ಬೆಂಗಳೂರಿನಲ್ಲಿದ್ದ ಟೆಲಿಕಾಲರ್ ಗಳಿಗೆ ತಾವು ಮಾಡುತ್ತಿರುವುದು ಮೋಸ ಅನ್ನುವುದು ಗೊತ್ತಿರಲಿಲ್ಲ. ಬದಲಾಗಿ ಕೆಲಸ ಎಂದೇ ನಂಬಿದ್ದರು. ಇದೇ ರೀತಿ ಬೇರೆ ಬೇರೆ ಮಾರ್ಗದಲ್ಲಿ ಅಮೆರಿಕಾ ಪ್ರಜೆಗಳ ವಂಚನೆ ನಡೆಯುತ್ತಿತ್ತು.
ಟೆಲಿ ಕಾಲರ್ ಕೆಲಸಕ್ಕಾಗಿ ಗುಜರಾತ್, ಮುಂಬೈ ಸೇರಿದಂತೆ ಈಶಾನ್ಯ ರಾಜ್ಯಗಳಿಂದ ಅಭ್ಯರ್ಥಿಗಳನ್ನು ಕರೆಸಿಕೊಂಡಿದ್ದರು. ಇವರಿಗೆ ಉತ್ತಮ ಸಂಬಳ ಭತ್ಯೆ ನೀಡಲಾಗುತ್ತಿತ್ತು. ಮುಂಚೆಯೇ ಕೊಟ್ಟ ಸ್ರ್ಕಿಪ್ಟ್ ಆಧಾರದಲ್ಲೇ ಇವರು ಅಮೆರಿಕಾದ ಪ್ರಜೆಗಳೊಂದಿಗೆ ಮಾತನಾಡಬೇಕಾಗಿತ್ತು. ಈ ಎಲ್ಲಾ ಕರೆಗಳನ್ನು ಟೀಮ್ ಲೀಡರ್ ಗಳು ನಿಯಂತ್ರಿಸುತ್ತಿದ್ದರು. ಹೀಗಾಗಿಯೇ 11 ಟೀಂ ಲೀಡರ್ ಗಳನ್ನು ಪೊಲೀಸರು ಬಂಧಿಸಿದ್ದಾರೆ.
Discussion about this post