ಬೆಡ್ ರೂಮ್ ಅನ್ನು ಗೋಡೌನ್ ರೀತಿ ಇಟ್ಟುಕೊಂಡಿದ್ದ ಆಕೆಗೆ ಪ್ರಚಾರದ ಹುಚ್ಚು
ಬೆಂಗಳೂರು : ನಟಿ ಪವಿತ್ರಾ ಲೋಕೇಶ್ ಕಾರಣದಿಂದ ತೆಲುಗು ನಟ ನರೇಶ್ ಖಾಸಗಿ ಬದುಕು ಇದೀಗ ಹಾದಿ ಬೀದಿಯಲ್ಲಿ ಚರ್ಚೆಯಾಗುತ್ತಿದೆ. ಪವಿತ್ರಾ ಲೋಕೇಶ್ ಕಾರಣದಿಂದಲೇ ನರೇಶ್ ತನ್ನ ಮೂರನೇ ಪತ್ನಿ ರಮ್ಯಾ ರಘುಪತಿಗೆ ಡಿವೋರ್ಸ್ ಕೊಡಲು ಮುಂದಾಗಿದ್ದಾರೆ ಅನ್ನುವ ಆರೋಪವಿದೆ.
ಈ ನಡುವೆ ಬೆಂಗಳೂರಿನಲ್ಲಿ ಕನ್ನಡದ ವಿವಿಧ ಸುದ್ದಿ ವಾಹಿನಿಗಳಿಗೆ ಸಂದರ್ಶನ ಕೊಟ್ಟಿದ್ದ ರಮ್ಯ ರಘುಪತಿ, ನರೇಶ್ ಬಗ್ಗೆ ಅನೇಕ ಸ್ಪೋಟಕ ಮಾಹಿತಿಗಳನ್ನು ಹಂಚಿಕೊಂಡಿದ್ದರು. ಪವಿತ್ರಾ ಲೋಕೇಶ್ ತಮ್ಮ ಮನೆಗೆ ಬಂದ ದಿನಗಳನ್ನು ಮೆಲುಕು ಹಾಕಿದ್ದರು.
ಇತ್ತ ರಮ್ಯ ಕೊಟ್ಟ ಹೇಳಿಕೆಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆ, ಅವರ ಪತ್ನಿ ತೆಲುಗು ನಟ ನರೇಶ್ ಮುಜುಗರಕ್ಕೆ ಒಳಗಾಗಿದ್ದಾರೆ. ಹೀಗಾಗಿ ಈ ಸಂಬಂಧ ಪ್ರತಿಕ್ರಿಯೆ ಕೊಡಲು ನಿರ್ಧರಿಸಿದ ಅವರು ಬೆಂಗಳೂರು ಟಿವಿ9 ಕಚೇರಿಗೆ ಆಗಮಿಸಿದ್ದರು. ಟಿವಿ9 ವಾಹಿನಿಗೆ ವಿಶೇಷ ಸಂದರ್ಶನ ಕೊಟ್ಟಿರುವ ಅವರು, ರಮ್ಯ ರಘುಪತಿ ಈ ಹಿಂದೆ ಮಾಡಿದ್ದಾರೆ ಅನ್ನಲಾದ ಮೋಸ, ವಂಚನೆ ಕುರಿತಂತೆ ಮಾತನಾಡಿದ್ದಾರೆ.
ಜೊತೆಗೆ ರಮ್ಯ ನನ್ನ ಚೆನ್ನಾಗಿ ನೋಡಿಕೊಂಡಿಲ್ಲ ಎಂದು ದೂರಿರುವ ಅವರು ಆಕೆಗೆ ಪ್ರಚಾರದ ಹುಚ್ಚು ಹಿಡಿದಿದೆ. ನಾನು ಎಲ್ಲೇ ಹೋದ್ರು ನನ್ನ ಹಿಂದೆ ಬರುತ್ತಿದ್ದಳು. ಆಕೆಯ ನಡೆಯನ್ನು ಗಮನಿಸಿ ನನ್ನ ಅಭಿಮಾನಿಗಳು ಅಸಹ್ಯಪಟ್ಟುಕೊಂಡಿದ್ದರು ಅಂದಿದ್ದಾರೆ.
ಜೊತೆಗೆ ರಮ್ಯ ರಘುಪತಿ ಕ್ಲೀನ್ ಇಲ್ಲ ಎಂದು ಗಂಭೀರ ಆರೋಪ ಮಾಡಿರುವ ಅವರು ನನ್ನ ಬೆಡ್ ರೂಮ್ ನೋಡಬೇಕಿತ್ತು ನೀವು, ಗೋಡೌನ್ ರೀತಿ ಇಟ್ಟುಕೊಂಡಿದ್ದಳು. ಒಂದಿಷ್ಟು ಕ್ಲೀನ್ ಆಗಿ ಇಟ್ಟುಕೊಳ್ಳುತ್ತಿರಲಿಲ್ಲ ಎಂದು ದೂರಿದ್ದಾರೆ.
Discussion about this post