ರಾಜಸ್ಥಾನ : ಬೆಂಗಳೂರಿನ ಆಡಿ ಕಾರು ದುರಂತ ಮರೆಯುವ ಮುನ್ನವೇ ಜೋಧ್ಪುರದಲ್ಲಿ ಐಷಾರಾಮಿ ಆಡಿ ಕಾರೊಂದು ಅನಾಹುತ ಮಾಡಿದೆ. ಬೈಕ್ ಸವಾರನಿಗೆ ಮೊದಲು ಡಿಕ್ಕಿ ಹೊಡೆದ ಅಡಿ ಕಾರು ಬಳಿಕ 9 ಮಂದಿಯ ಮೇಲೆ ಹರಿದಿದೆ. ಘಟನೆಯಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾನೆ.
ಈ ಭಯಾನಕ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು ಟ್ರಾಫಿಕ್ ನಿಂದ ತುಂಬಿರುವ ರಸ್ತೆಯಲ್ಲಿ ಬರುತ್ತಿದ್ದ ಅಡಿ ಕಾರು ಮುಂದುಗಡೆ ಇದ್ದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಹೊಡೆತ ರಭಸಕ್ಕೆ ಬೈಕ್ ಸಮೇತ ಸವಾರ ಮೇಲಕ್ಕೆ ಹಾರಿ ನೆಲಕ್ಕೆ ಅಪ್ಪಳಿಸಿದ್ದಾನೆ.
ಈ ವೇಳೆ ನಿಯಂತ್ರಣ ತಪ್ಪಿದ ಕಾರು ಇನ್ನೂ ಕೆಲ ಬೈಕ್ ಗಳಿಗೆ ಡಿಕ್ಕಿ ಹೊಡೆದಿದೆ. ಬಳಿಕ ಸಮೀಪದ ಅಂಗಡಿಗೆ ಗುದ್ದಿದೆ. ಜೊತೆಗೆ ಪಾದಚಾರಿಗಳ ಮೇಲೂ ಹರಿದಿದೆ.
Discussion about this post