ಮೈಸೂರು : ಸಾಂಸ್ಕೃತಿಕ ನಗರಿಯಲ್ಲಿ ನಡೆದ Mysuru gang rape ಪ್ರಕರಣ ಸಂಬಂಧ ಪೊಲೀಸರು 5 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರ ಐವರ ಪೈಕಿ ಒಬ್ಬ ಬಾಲ ಆರೋಪಿ ಎಂದು DG & IGP ಪ್ರವೀಣ್ ಸೂದ್ ತಿಳಿಸಿದ್ದಾರೆ. ಮೈಸೂರಿನಲ್ಲಿ ಆರೋಪಿಗಳ ಬಂಧನ ಕುರಿತಂತೆ ಮಾಹಿತಿ ನೀಡಿರುವ ಅವರು, ವಿದ್ಯಾರ್ಥಿನಿಯನ್ನು ಹೆದರಿಸಿ 3 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ದರೋಡೆಗೆ ಪ್ರಯತ್ನಿಸಿದ ಬಳಿಕ ಅತ್ಯಾಚಾರ ನಡೆಸಿದ್ದಾರೆ ಅಂದಿದ್ದಾರೆ.
ಆರೋಪಿಗಳು ಕಾರ್ಮಿಕರಾಗಿದ್ದು, ತಮಿಳುನಾಡು ಮೂಲದವರಾಗಿದ್ದಾರೆ. ಬಂಧಿತ ಎಲ್ಲರೂ ತಿರುಪುರ ಮೂಲದವರಾಗಿದ್ದು, 7 ರಿಂದ 8ನೇ ತರಗತಿ ತನಕ ಓದಿರುವ ಆರೋಪಿಗಳು ಕೆಲಸದ ಸಲುವಾಗಿ ಮೈಸೂರಿಗೆ ಬರುತ್ತಿದ್ದರು. ಡ್ರೈವರ್, ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ ಇವರು ಕೆಲಸ ಮುಗಿಸಿ ಮತ್ತೆ ಊರಿಗೆ ಹಿಂತಿರುಗುತ್ತಿದ್ದರು.
ಇನ್ನು ಪ್ರಕರಣದಲ್ಲಿ ಬಾಲ ಆರೋಪಿ ಇರುವ ಬಗ್ಗೆ ಮಾಹಿತಿ ಕೊಟ್ಟಿರುವ ಸೂದ್, ಈ ಹಿಂದಿನ ಪ್ರಕರಣದಂತೆ, ಈ ಪ್ರಕರಣದಲ್ಲಾಗುವುದಿಲ್ಲ. ಬಾಲಾಪರಾಧ ಕಾಯ್ದೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಗಂಭೀರ ಪ್ರಕರಣದಲ್ಲಿ 16 ವರ್ಷ ಮೇಲ್ಪಟ್ಟಿದ್ದರೆ, ಪ್ರಧಾನ ನ್ಯಾಯಾಲಯದಲ್ಲೇ ವಿಚಾರಣೆ ನಡೆಯಲಿದೆ ಅಂದಿದ್ದಾರೆ.
ಗಂಭೀರ ಪ್ರಕರಣ ಸಂಬಂಧ ಶೀಘ್ರದಲ್ಲೇ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಹೇಳಿರುವ ಪ್ರವೀಣ್ ಸೂದ್, ನ್ಯಾಯಾಲಯಕ್ಕೆ ಸಂಪೂರ್ಣ ವಿವರಗಳನ್ನು ಸಲ್ಲಿಸಬೇಕಾಗಿದೆ. ಹೀಗಾಗಿ ಎಲ್ಲವನ್ನೂ ಈಗ್ಲೇ ವಿವರಿಸಿದರೆ ತಪ್ಪಾಗುತ್ತದೆ ಅಂದಿದ್ದಾರೆ.
Discussion about this post