ನೂಪುರ್ ಅವರನ್ನು ಬೆಂಬಲಿಸಿ ವ್ಯಾಪಾರಿ ಹಲವು ಪೋಸ್ಟ್ ಗಳನ್ನು ಶೇರ್ ಮಾಡಿದ್ದರು ಅನ್ನಲಾಗಿದೆ
ಮಹಾರಾಷ್ಟ್ರ : ರಾಜಸ್ಥಾನದ ಉದಯಪುರದಲ್ಲಿ ಐಸಿಸ್ ಮಾದರಿಯಲ್ಲಿ ಶಿರಚ್ಛೇದ ಪ್ರಕರಣದ ಬೆನ್ನಲ್ಲೇ, ಇಂತಹುದೇ ಪ್ರಕರಣ ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. 1 ವಾರಗಳ ಹಿಂದೆ ಈ ಕೃತ್ಯ ನಡೆದಿದ್ದು, ಈ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.
ವೈದ್ಯಕೀಯ ಉಪಕರಣಗಳ ವ್ಯಾಪಾರಿ ಉಮೇಶ್ ಕೊಲೆಯಾದವರು. ಜೂನ್ 21 ರಂದು ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಹಂತಕರು ಅವರ ಕತ್ತು ಸೀಳಿ ಕೊಲೆ ಮಾಡಿದ್ದರು. ಗಮನಾರ್ಹ ಅಂಶ ಅಂದ್ರೆ ಕೊಲೆಯಾದ ಬಳಿಕ ಅವರಲ್ಲಿದ್ದ 35 ಸಾವಿರ ಹಣವನ್ನು ಕೊಲೆಗಾರರು ಮುಟ್ಟಿರಲಿಲ್ಲ.
ಇನ್ನು ಪ್ರಕರಣ ಸಂಬಂಧ ಮುದಾಸಿರ್ ಅಹ್ಮದ್, ಶಾರುಖ್ ಪಠಾಣ್, ಅಬ್ದುಲ್ ತೌಫೀಖ್, ಶೋಯೆಬ್ ಮತ್ತು ಅತೀಕ್ ರಶೀದ್ ಎಂಬವರನ್ನು ಬಂಧಿಸಲಾಗಿದೆ. ಅಮರಾವತಿ ಬಿಜೆಪಿ ಮುಖಂಡರ ಪ್ರಕಾರ, ಉಮೇಶ್ ಅವರು ನೂಪುರ್ ಅವರನ್ನು ಬೆಂಬಲಿಸಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅನೇಕ ಪೋಸ್ಟ್ ಗಳನ್ನು ಶೇರ್ ಮಾಡಿದ್ದರು ಅನ್ನಲಾಗಿದೆ.
Discussion about this post