ಬೆಂಗಳೂರು : ಪ್ರಿಯಕರನೊಂದಿಗೆ ದೈಹಿಕ ಸಂಬಂಧ ಬೆಳೆಸಲು ಅಡ್ಡಿಯಾದ ಗಂಡನನ್ನೇ ಮುಗಿಸಲು ಯತ್ನಿಸಿದ ಪಾಪಿ ಪತ್ನಿ ಇದೀಗ ಜೈಲು ಪಾಲಾಗಿದ್ದಾಳೆ.
ಆರು ವರ್ಷಗಳ ಹಿಂದೆ ಚೈತ್ರ ಹಾಗೂ ಗಿರೀಶ್ ಮದುವೆಯಾಗಿತ್ತು. ಮಾದನಾಯಕನಹಳ್ಳಿ ವಾಸವಾಗಿದ್ದ ದಂಪತಿ ಚೆನ್ನಾಗಿಯೇ ಇದ್ರು. ಕೆಲ ದಿನಗಳ ಹಿಂದೆ ಚೈತ್ರ ಕೆಲಸಕ್ಕೆ ಸೇರಿಕೊಂಡಿದ್ದಳು. ಕೆಲಸಕ್ಕೆ ಸೇರಿದ ಕೆಲವೇ ಸಮಯದಲ್ಲಿ ರೂಪ ನಡವಳಿಕೆಯಲ್ಲಿ ವ್ಯತ್ಯಾಸವಾಗಿರುವುದನ್ನು ಗಿರೀಶ್ ಗಮನಿಸಿದ್ದಾನೆ. ಯಾಕೆ ಹೀಗಾಯ್ತು ಎಂದು ಕೆದಕಿದಾಗ, ಪತ್ನಿಗೆ ಜೈನ್ ಎಂಬ ವ್ಯಕ್ತಿಯ ಪರಿಚಯವಾಗಿದ್ದು, ಪರಿಚಯ ಸ್ನೇಹ ಪ್ರೀತಿಗೆ ತಿರುಗಿತ್ತು. ಪ್ರೀತಿಯಲ್ಲಿ ನಿಲ್ಲದ ಸಂಬಂಧ ಬೆಡ್ ರೂಮ್ ತನಕ ಬಂದಿತ್ತು.
ಹೀಗಾಗಿ ರೂಪಾಳಿಗೆ ವಾರ್ನಿಂಗ್ ಮಾಡಿದ್ದ ಗಿರೀಶ್ ಇನ್ಮುಂದೆ ನೀನು ಕೆಲಸಕ್ಕೆ ಹೋಗೋದು ಬೇಡ, ಕೆಲಸಕ್ಕೆ ಹೋಗಿ ಮಾಡಿದ ಸಾಧನೆ ಸಾಕು ಅಂದಿದ್ದಾನೆ. ಗಂಡನ ವಾರ್ನಿಂಗ್ ಚೈತ್ರಾಳಿಗೆ ಕೋಪ ತರಿಸಿತ್ತು. ಹೀಗಾಗಿ ಗಂಡನೇ ಸಂಬಂಧಕ್ಕೆ ಅಡ್ಡಿ ಎಂದು ಜೈನ್ ಜೊತೆ ಸೇರಿ ಪತಿಯನ್ನೇ ಮುಗಿಸಲು ಪ್ಲಾನ್ ಕೊಟ್ಟಿದ್ದಾಳೆ. ಚೈತ್ರಾಳ ಪ್ಲಾನ್ ಪ್ರಕಾರ 15 ಲಕ್ಷಕ್ಕೆ ಡೀಲ್ ಕೂಡಾ ಕುದುರಿದೆ. ಸುಪಾರಿ ಗ್ಯಾಂಗ್ ಸಂಪರ್ಕಿಸಿದ್ದ ಜೈನ್ ಮೂರು ಲಕ್ಷ ಅಡ್ವಾನ್ಸ್ ಕೊಟ್ಟು ಉಳಿದ ಕಾಸು ಕೆಲಸ ಮುಗಿದ ಮೇಲೆ ಅಂದಿದ್ದಾನೆ.
ಆದರೆ ಗಿರೀಶ್ ಆಯುಷ್ಯ ಗಟ್ಟಿ ಇತ್ತು. ಕೊಲೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದ ವೇಳೆ ನೈಟ್ ರೌಂಡ್ಸ್ ನಲ್ಲಿದ್ದ ಮಾದನಾಯಕಹಳ್ಳಿ ಪೊಲೀಸರಿಗೆ ದುಷ್ಕರ್ಮಿಗಳು ಸಿಕ್ಕಿ ಬಿದ್ದಿದ್ದಾರೆ. ರಾತ್ರಿ ಹೊತ್ತಲ್ಲಿ ಇವರ ವರ್ತನೆ ಕಂಡು ಅನುಮಾನಗೊಂಡ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದ್ರೆ ಸುಪಾರಿ ವಿಚಾರ ಬೆಳಕಿಗೆ ಬಂದಿದೆ.
ಇದೀಗ ಚೈತ್ರ ಹಾಗೂ ಜೈನ್ ಸೇರಿ ಐವರನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
Discussion about this post