ಪ್ರೀತಿ ವಿಚಾರದಲ್ಲಿ ಹೆತ್ತವರಿಗೆ ನೋವು ಆಗೋದು ಸಹಜ. ಆದರೆ ಅದನ್ನು ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸಬೇಕು( lovers suicide)
ಬೀದರ್ : ಮನೆಯವರು ತಮ್ಮ ಪ್ರೀತಿಗೆ ಸಮ್ಮತಿಸಿಲ್ಲ ಎಂದು ನೊಂದು ಪ್ರೇಮಿಗಳು ಆತ್ಮಹತ್ಯೆಗೆ ಶರಣಾದ ( lovers suicide) ಘಟನೆ ಬೀದರ್ ನಲ್ಲಿ ನಡೆದಿದೆ.
ಮೃತರನ್ನು ಲಾಡಗೇರಿ ಬಡಾವಣೆಯ ಶರತ್ (28) ಮತ್ತು ಸಂಗೀತಾ (26 ) ಎಂದು ಗುರುತಿಸಲಾಗಿದೆ. ಹಲವು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಗೊತ್ತಾಗಿದೆ.
ಇದನ್ನು ಓದಿ : USB-C charging port : ಇನ್ಮುಂದೆ ಇಲೆಕ್ಟ್ರಾನಿಕ್ ಉಪಕರಣಗಳಿದೆ ಒಂದೇ ಚಾರ್ಜರ್
ಇತ್ತೀಚೆಗೆ ಸಂಗೀತಾ ಮನೆಯವರಿಗೆ ಪ್ರೀತಿಯ ವಿಚಾರ ಗೊತ್ತಾಗಿದೆ. ಹೀಗಾಗಿ ಶರತ್ ಜೊತೆಗೆ ಮಗಳ ಮದುವೆ ನೆರವೇರಿಸಲು ನಿರಾಕರಿಸಿದ ಮನೆಯವರು ಮತ್ತೊಬ್ಬ ಹುಡುಗನ ಜೊತೆಗೆ ಮದುವೆ ನಿಗದಿ ಮಾಡಿದ್ದಾರೆ. ಮಗಳ ವಿರೋಧದ ನಡುವೆ ನಿಶ್ಚಿತಾರ್ಥ ಕೂಡಾ ನೆರವೇರಿಸಿದ್ದರು.
ಈ ವಿಷಯ ತಿಳಿದ ಶರತ್ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಶರತ್ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದ ಸಂಗೀತಾ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇದೀಗ ಘಟನೆ ಸಂಬಂಧ ಗಾಂಧಿ ಗಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Discussion about this post