ಕೇರಳ ಮೂಲದ ಅವಿನಾಶ್ ದಂಪತಿ ಒಂದಿಷ್ಟು ತಿಂಗಳು ಬೆಂಗಳೂರಿನಲ್ಲಿ ವಾಸವಾಗಿದ್ದರು.ಕೆಲ ತಿಂಗಳ ಹಿಂದಷ್ಟೇ ಕೇರಳದ ಮನ್ನಾರ್ ಕಾಡ್ ಗೆ ತೆರಳಿದ್ದಾರೆ
ಪಾಲಕ್ಕಾಡ್ : ಹಲ್ಲು ಉಜ್ಜದೆ ಮುತ್ತುಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾರಂಭವಾದ ಜಗಳ ಕೊಲೆ ಅಂತ್ಯವಾದ ಘಟನೆ ಕೇರಳದ ಪಾಲಕ್ಕಾಡ್ ನಲ್ಲಿ ನಡೆದಿದೆ. ಈ ಗಲಾಟೆಯಲ್ಲಿ ಇದೀಗ ಪುಟ್ಟ ಮಗುವೊಂದು ಅನಾಥವಾಗಿದೆ.
ಕೇರಳ ಮೂಲದ ಅವಿನಾಶ್ ದಂಪತಿ ಒಂದಿಷ್ಟು ತಿಂಗಳು ಬೆಂಗಳೂರಿನಲ್ಲಿ ವಾಸವಾಗಿದ್ದರು. ಬೆಂಗಳೂರಿನ ಉದ್ಯೋಗವನ್ನು ಬಿಟ್ಟ ದಂಪತಿ ಕೆಲ ತಿಂಗಳ ಹಿಂದಷ್ಟೇ ಕೇರಳದ ಮನ್ನಾರ್ ಕಾಡ್ ನಲ್ಲಿ ವಾಸ್ತವ್ಯ ಹೂಡಿದ್ದರು.
ಕಳೆದ ಮಂಗಳವಾರ ಅವಿನಾಶ್ ತನ್ನ ಮಗನಿಗೆ ಹಲ್ಲು ಉಜ್ಜದೇ ಮುತ್ತಿಡಲು ಹೋಗಿದ್ದಾನೆ. ಇದಕ್ಕೆ ಪತ್ನಿ ದೀಪಿಕಾ ಕ್ಯಾತೆ ತೆಗೆದಿದ್ದಾಳೆ. ದೀಪಿಕಾ ಆಕ್ಷೇಪದಿಂದ ಕೋಪಗೊಂಡ ಅವಿನಾಶ್ ಬುದ್ದಿಯನ್ನು ಕೋಪದ ಕೈಗೆ ಕೊಟ್ಟಿದ್ದಾನೆ. ಪತ್ನಿಯ ಜೊತೆ ಮಾತಿನ ಚಕಮಕಿ ನಡೆಸಿದ್ದು ಮಾತ್ರವಲ್ಲದೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಕೈ ಕಾಲು ಕುತ್ತಿಗೆ ಎಂದು ನೋಡದೆ ಮಚ್ಚಿನಿಂದ ಕೊಚ್ಚಿದ್ದಾನೆ.
ಈ ವೇಳೆ ತಂದೆ ಹಲ್ಲೆ ಮಾಡುತ್ತಿರುವುದನ್ನು ಗಮನಿಸಿದ ಮಗು ಕಿರುಚಾಡಿದೆ. ಮಗುವಿನ ಕಿರುಚಾಟ ಕೇಳಿ ಅಕ್ಕಪಕ್ಕದವರು ಓಡಿ ಬಂದಿದ್ದಾರೆ. ಅಷ್ಟು ಹೊತ್ತಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯನ್ನು ಹಿಡಿದು ಮಗು ರೋಧಿಸುತ್ತಿತ್ತು. ನೆರೆ ಹೊರೆಯವರು ಬರುತ್ತಿದ್ದಂತೆ ಅವಿನಾಶ್ ಮಚ್ಚು ಎಸೆದು ಪರಾರಿಯಾಗಿದ್ದಾನೆ.
ತಕ್ಷಣವೇ ಪೊಲೀಸರಿಗೆ ವಿಷಯ ಮುಟ್ಟಿಸಿದ ಸ್ಥಳೀಯರು ದೀಪಿಕಾಳನ್ನು 40 ಕಿಮೀ ದೂರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತೀವ್ರ ರಕ್ತ ಹರಿದು ಹೋದ ಕಾರಣ ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದೀಗ ಪೊಲೀಸರು ಅವಿನಾಶ್ ನನ್ನು ಬಂಧಿಸಿದ್ದು ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದಾರೆ.
Discussion about this post