ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ( Karnataka HC) ನಕಾರ
ಬೆಂಗಳೂರು : ಖಾಸಗಿ ಶಾಲೆಯೊಂದರ ನರ್ಸರಿ ತರಗತಿಯಲ್ಲಿ 5 ವರ್ಷದ ಬಾಲಕಿಯ ಪ್ಯಾಂಟ್ ಎಳೆದ ಪ್ರಕರಣ ಹೈಕೋರ್ಟ್ ( Karnataka HC) ಮೆಟ್ಟಿಲೇರಿದೆ. ಬಾಲಕಿಯ ಪ್ಯಾಂಟ್ ಎಳೆದು ಇತರ ಮಕ್ಕಳ ಮುಂದೆ ಮುಜುಗರ ಉಂಟು ಮಾಡಿದ ಶಿಕ್ಷಕಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ರದ್ದುಗೊಳ್ಳಿಸಲು ಹೈಕೋರ್ಟ್ ನಿರಾಕರಿಸಿದೆ.
41 ವರ್ಷದ ಶಿಕ್ಷಕಿ ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕ ಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಇದನ್ನೂ ಓದಿ : praveen nettar case : ಕೊಲೆಗಾರರ ಆಸ್ತಿ ಮುಟ್ಟುಗೋಲಿಗೆ ಕ್ರಮ : ಅಲೋಕ್ ಕುಮಾರ್
2917ರಲ್ಲಿ ನಡೆದ ಪ್ರಕರಣ ಇದಾಗಿದ್ದು, ಈ ಸಂಬಂಧ ಹಲಸೂರು ಠಾಣೆಯಲ್ಲಿ ಸಂತ್ರಸ್ಥ ಮಗುವಿನ ತಾಯಿ ಶಿಕ್ಷಕಿ ವಿರುದ್ಧ ದೂರು ದಾಖಲಿಸಿದ್ದರು. ಇದರ ಆಧಾರದಲ್ಲಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.
Discussion about this post