ತಿರುವನಂತಪುರ : ಗುಜರಿ ಸಂಗ್ರಹಿಸುವಾಗ ಬಾಂಬ್ ಸ್ಫೋಟಗೊಂಡು ( kerala bomb blast ) ಇಬ್ಬರು ಅಸ್ಸಾಂ ಮೂಲದ ಕಾರ್ಮಿಕರು ಮಡತಪಟ್ಟ ಘಟನೆ ಕೇರಳದ ಕಣ್ಣೂರಿನಲ್ಲಿ ( Kannur bomb blast) ನಡೆದಿದೆ.
ಮೃತರನ್ನು ಫಸಲ್ ಹಕ್ ( 50 ) ಮತ್ತು ಅವರ ಪುತ್ರ ಶಾಹೀದುಲ್ (22) ಎಂದು ಗುರುತಿಸಲಾಗಿದೆ. ತಂದೆ ಮಗ ಗುಜರಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು. ಹಾಗೇ ಗುಜರಿ ಸಂಗ್ರಹಿಸುವಾಗ ಸ್ಟೀಲ್ ಟಿಫನ್ ಬಾಕ್ಸ್ ಸಿಕ್ಕಿದೆ. ಊಟದ ಬಾಕ್ಸ್ ಇರಬಹುದು ಎಂದು ತೆರೆದ್ರೆ ಬಾಂಬ್ ಸ್ಫೋಟಗೊಂಡಿದೆ ( kerala bomb blast).
ಈ ವೇಳೆ ಸ್ಥಳದಲ್ಲೇ ಫಸಲ್ ಹಕ್ ಮೃತಪಟ್ರೆ, ಪುತ್ರ ಶಾಹೀದುಲ್ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಇದೀಗ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಪೊಲೀಸರು ( Kerala Police ) ತನಿಖೆ ಪ್ರಾರಂಭಿಸಿದ್ದಾರೆ. ಗುರುವಾರ ಸಂಘೆ ದುರ್ಘಟನೆ ಸಂಭವಿಸಿದ ಬೆನ್ನಲ್ಲೇ ಬಾಂಬ್ ನಿಷ್ಕ್ರೀಯ ದಳ, ಶ್ವಾನ ದಳ ಸ್ಥಳಕ್ಕೆ ಆಗಮಿಸಿದ್ದು ಸಜೀವ ಬಾಂಬ್ ಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಅದೃಷ್ಟ ಅನ್ನುವಂತೆ ಯಾವುದೇ ಸಜೀವ ಬಾಂಬ್ ಗಳು ಪತ್ತೆಯಾಗಿಲ್ಲ.
ಇದನ್ನೂ ಓದಿ : 30 ತರುಣಿಯಂತೆ ಮೇಕಪ್ ಧರಿಸಿ 35ರ ಯುವಕನನ್ನು ಮದುವೆಯಾದ 54 ರ ಆಂಟಿ
ಬೋರಿಸ್ ಜಾನ್ಸನ್ ರಾಜೀನಾಮೆ ತೆರವಾದ ಸ್ಥಾನಕ್ಕೆ ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ
ಮಾಡಿದ ಪಾಪಗಳಿಗೆ ಫಲ ಅನ್ನುವಂತೆ ಬ್ರಿಟನ್ ಪ್ರಧಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. Boris Johnson ರಾಜೀನಾಮೆಯಿದ ತೆರವಾದ ಸ್ಥಾನಕ್ಕೆ ನಾರಾಯಣ ಮೂರ್ತಿ ಅಳಿಯ ರಿಷಿ ಸುನಾಕ್ (rishi sunak ) ಬರಲಿದ್ದಾರೆ ಅನ್ನಲಾಗಿದೆ
ಸಾಲು ಸಾಲು ಹಗರಣ ಮತ್ತು ವಿವಾದಗಳ ಕಾರಣದಿಂದ ಸ್ವಪಕ್ಷೀಯರಿಂದಲೇ ವಿರೋಧ ಕಟ್ಟಿಕೊಂಡ ಬ್ರಿಟನ್ ಪ್ರಧಾನಿ Boris Johnson ತಮ್ಮ ಸಂಪುಟದಲ್ಲೇ ಬಂಡಾಯ ಎದುರಿಸಬೇಕಾಯ್ತು. ಅದರಲ್ಲೂ ಕೊರೋನಾ ಸಂದರ್ಭದಲ್ಲಿ ಬೋರಿಸ್ ಜಾನ್ಸನ್ ಆಡಿದ್ದು ಮಂಗನಾಟವೇ ಆಗಿತ್ತು. ಇದೀಗ ಸಾಲು ಸಾಲು ಸಚಿವರು ರಾಜೀನಾಮೆ ಕೊಟ್ಟ ಕಾರಣ ಒಲ್ಲದ ಮನಸ್ಸಿನಿಂದ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದೀಗ ಆ ಸ್ಥಾನಕ್ಕೆ ನಾರಾಯಣ ಮೂರ್ತಿ ಅಳಿಯ ರಿಷಿ ಸುನಾಕ್ ( rishi sunak ) ಬರುವ ಎಲ್ಲಾ ಸಾಧ್ಯತೆಗಳಿದೆ.
ಇದನ್ನೂ ಓದಿ : ಮಾಜಿ ಕಾರ್ಪೋರೇಟರ್ ಬಳಿಯೇ ಲಂಚಕ್ಕೆ ಕೈಯೊಡ್ಡಿದ ಮಹಿಳಾ ಸಬ್ ಇನ್ಸ್ ಪೆಕ್ಟರ್ ಎಸಿಬಿ ಬಲೆಗೆ
ಬ್ರಿಟನ್ ಪ್ರಧಾನಿಯ ರೇಸ್ ನಲ್ಲಿ ರಿಷಿ ಸುನಾಕ್, ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಜೆರೆಮಿ ಹಂಟ್ ಹೆಸರುಗಳಿದ್ದು, ಕನ್ಸರ್ವೇಟಿವ್ ಪಕ್ಷದ ಮುಖಂಡರು ರಿಷಿ ಸುನಾಕ್ ಬಗ್ಗೆ ಒಲವು ಹೊಂದಿದ್ದಾರೆ. ಹೀಗಾಗಿ ಮುಂದಿನ ವಾರದಿಂದ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ.
ರಿಷಿ ಸುನಾಕ್ ಕುಟುಂಬ ಪಂಜಾಬ್ ಮೂಲದವರಾಗಿದ್ದು, ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ಇವರು ವಿವಾಹವಾಗಿದ್ದಾರೆ. ದಂಪತಿಗೆ ಇಬ್ಬರು ಪುತ್ರಿಯರಿದ್ದಾರೆ.
ಒಂದು ಕಾಲದಲ್ಲಿ ರಿಷಿ ಸುನಕ್ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಇತ್ತು. ಆದರೆ ಪತ್ನಿ ಅಕ್ಷತಾ ಮೂರ್ತಿ ತೆರಿಗೆ ವಿವಾದ, ಪೇ ಗೇಟ್ ಹಗರಣದಲ್ಲಿ ಜಾನ್ಸನ್ ಜೊತೆ ಹೆಸರು ಕೇಳಿ ಬಂದಾಗ ಜನಪ್ರಿಯತೆ ಕುಗ್ಗಿತ್ತು. ಇದೀಗ ಬೋರಿಸ್ ಜಾನ್ಸನ್ ವಿರುದ್ಧವೇ ರಿಷಿ ತಿರುಗಿ ಬಿದ್ದಿರುವ ಕಾರಣ ಮತ್ತೆ ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : ಶಿವರಾಜ್ ಕುಮಾರ್ ಅವರ ನಿಜವಾದ ಹೆಸರೇನು ಗೊತ್ತಾ..? ಪಾಸ್ ಪೋರ್ಟ್ ಹೇಳಿದ ಕಥೆ
Discussion about this post