ಈಗಿನ ದಿನಗಳಲ್ಲಿ ಚಂದನವನದಲ್ಲಿ ನಟಿಯರು ಗಟ್ಟಿಯಾಗಿ ಬೇರೂರುವುದು ತುಂಬಾ ಕಷ್ಟ. ಪರಭಾಷಾ ನಾಯಕಿಯರಿಗೆ ಮಣೆ ಹಾಕುತ್ತಿರುವ ಕಾರಣ ನೆಲದ ಪ್ರತಿಭೆಗಳಿಗೆ ಅನ್ಯಾಯವಾಗುತ್ತಿದೆ ಅನ್ನುವುದು ಸತ್ಯ. ಈ ನಡುವೆ ಬೆರಳೆಣೆಕೆಯ ನಟಿಯರು ಚಂದನವನದಲ್ಲಿ ಸದ್ದಿಲ್ಲದೆ ಬ್ಯುಸಿಯಾಗಿದ್ದಾರೆ. ಈ ಸಾಲಿನ ಒಂದು ಹೆಸರು ಪಾವನಗೌಡ.
ಬೊಂಬೆಗಳ ಲವ್ ಅನ್ನುವ ಸಿನಿಮಾ ಮೂಲಕ ಸದ್ದು ಮಾಡಿದ ಪಾವನಾ, ಕಮರ್ಷಿಯಲ್ ಹಾಗೂ ಕಲಾತ್ಮಕ ಚಿತ್ರಗಳಲ್ಲಿ ನಟಿಸುವ ಮೂಲಕ ಸದ್ಯ ಬಿಝಿಯಾಗಿದ್ದಾರೆ. ಹೊಸ ಹೊಸ ಸಿನಿಮಾಗಳಿಗೆ ಸಹಿ ಹಾಕುತ್ತಿರುವ ಈವರೆಗೆ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಪೈಕಿ ರುದ್ರಿ, ಇನ್, ತೂತು ಮಡಿಕೆ, ಗೌಳಿ, ಫೈಟರ್, ಮೈಸೂರು ಡೈರೀಸ್ ಹೀಗೆ ಸಾಲು ಸಾಲು ಸಿನಿಮಾಗಳು ಬಿಡುಗಡೆಗೂ ಸಿದ್ದವಾಗಿದೆ. ಈ ನಡುವೆ ಅಜ್ಞಾತವಾಸಿ ಅನ್ನುವ ಸಿನಿಮಾವನ್ನು ಪಾವನ ಒಪ್ಪಿಕೊಂಡಿದ್ದಾರೆ.
Discussion about this post