ಪೊಲೀಸರು ನಿಂದಿಸಿದ್ದಾರೆ ಅನ್ನುವ ಆರೋಪದ ಬಗ್ಗೆ ತನಿಖೆಯಾಗಬೇಕಿದೆ. (Hoysala fire)ನಿಂದಿಸುವ ಅಧಿಕಾರವನ್ನು ಪೊಲೀಸರಿಗೆ ಕೊಟ್ಟಿದ್ದು ಯಾರು
ಬೆಂಗಳೂರು : ಪೊಲೀಸರ ನಿಂದನೆಯಿಂದ ರೋಸಿ ಹೋದ ಯುವಕನೊಬ್ಬ ಪೊಲೀಸರ ಮೇಲೆ ಸೇಡು ತೀರಿಸಿಕೊಳ್ಳಲು ಹೊಯ್ಸಳ ವಾಹನಕ್ಕೆ ಬೆಂಕಿ (Hoysala fire) ಇಟ್ಟ ಘಟನೆ ಸೋಮವಾರ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಸಿಟಿ ಮಾರುಕಟ್ಟೆ ಬಳಿ ಈ ಘಟನೆ ನಡೆದಿದ್ದು, ಘಟನೆ ಸಂಬಂಧ ಸ್ವಯಂ ದೂರು ದಾಖಲಿಸಿಕೊಂಡಿರುವ ಸಿಟಿ ಮಾರುಕಟ್ಟೆ ಪೊಲೀಸರು ಧೀರಜ್ ಕುಮಾರ್ ( 19) ಎಂಬಾತನನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಹೊಯ್ಸಳ ವಾಹನ ಬೆಂಕಿಗೆ (Hoysala fire) ಆಹುತಿಯಾಗಿದೆ.
ಇದನ್ನೂ ಓದಿ : mangalore liquor : ದಕ್ಷಿಣ ಕನ್ನಡ ಕುಡುಕರ ಜಿಲ್ಲೆಯಾಗುತ್ತಿದೆಯೇ…. ಮದ್ಯ ಮಾರಾಟದಲ್ಲಿ ಜಿಲ್ಲೆಗೆ ಅಗ್ರ ಸ್ಥಾನ
ಧೀರಜ್ ಕುಮಾರ್ ಸಿಟಿ ಮಾರುಕಟ್ಟೆಯಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದ. ರಾತ್ರಿ ವೇಳೆ ಪಾದಚಾರಿ ಮಾರ್ಗದಲ್ಲಿ ಮಲಗುತ್ತಿದ್ದ ಈತನನ್ನು ಗಸ್ತು ತಿರುಗುವ ಪೊಲೀಸರು ನಿಂದಿಸಿದ್ದಾರೆ ಅನ್ನಲಾಗಿದೆ. ಇದರಿಂದ ಅವಮಾನಗೊಂಡು ಪೊಲೀಸರ ಮೇಲೆ ಕೋಪಗೊಂಡಿದ್ದ ಧೀರಜ್, ಸೋಮವಾರ ಮಧ್ಯಾಹ್ನ 12 ಗಂಟೆಗೆ ಪೆಟ್ರೋಲ್ ತಂದು ಹೊಯ್ಸಳ ವಾಹನಕ್ಕೆ ಬೆಂಕಿ ಹಾಕಿದ್ದಾನೆ.

ಬಡಪಾಯಿ ಕೂಲಿ ಕಾರ್ಮಿಕ ಈ ಮಟ್ಟಕ್ಕೆ ಪೊಲೀಸರ ಮೇಲೆ ಆಕ್ರೋಶಗೊಂಡಿದ್ದಾನೆ ಅಂದ್ರೆ, ಈ ಧೀರಜ್ ಗೆ ಆಗಿರುವ ಅವಮಾನ ಏನು ಅನ್ನುವುದನ್ನು ಹಿರಿಯ ಅಧಿಕಾರಿಗಳು ತನಿಖೆ ನಡೆಸಬೇಕು ತಾನೇ. ಪೊಲೀಸರಿಂದಲೇ ಹೀಗೆ ಬಡ ವರ್ಗದ ಮಂದಿಗೆ ಅವಮಾನವಾದರೆ ಮುಂದೇನು ಗತಿ.
ಯಕ್ಷಗಾನಕ್ಕೆ ಅವಮಾನ : ಝೀ ಕನ್ನಡ ವಿರುದ್ಧ ದಾಖಲಾಯ್ತು ಪ್ರಕರಣ
ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪಕ್ಕೆ ವಾಹಿನಿ ಗುರಿಯಾಗಿದ್ದು, ಈ ಬಾರಿ ಬಿಡುವ ಪ್ರಶ್ನೇಯೇ ಇಲ್ಲ ಅಂದಿದ್ದಾರೆ ಯಕ್ಷಗಾನದ ಅಭಿಮಾನಿಗಳು
ಬೆಂಗಳೂರು : ಈ ಬಾರಿ ಯಕ್ಷಗಾನಕ್ಕೆ ಝೀ ಕನ್ನಡದಿಂದ ಆಗಿರುವ ಅವಮಾನಕ್ಕೆ ತಕ್ಕ ಉತ್ತರ ನೀಡಲು ಯಕ್ಷಗಾನ ಅಭಿಮಾನಿಗಳು ನಿರ್ಧರಿಸಿದ್ದಾರೆ. ಈ ಸಂಬಂಧ ಕಾನೂನು ಹೋರಾಟಕ್ಕೆ ನಿರ್ಧರಿಸಲಾಗಿದ್ದು, ರಾಜ್ಯದ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲು ಯಕ್ಷಗಾನ ಪ್ರೇಮಿಗಳು ನಿರ್ಧರಿಸಿದ್ದಾರೆ.
ಈ ನಡುವೆ ಮೊದಲ ದೂರು ಕಡಲತಡಿ ಭಾರ್ಗವ ಶಿವರಾಮ ಕಾರಂತ ಹುಟ್ಟೂರಿನಲ್ಲೇ ದಾಖಲಾಗಿದೆ. ಕಾರಂತರು ಯಕ್ಷಗಾನ ಕ್ಷೇತ್ರಕ್ಕೂ ಸಾಕಷ್ಟು ಕೊಡುಗೆ ನೀಡಿದ್ದಾರೆ ಅನ್ನುವುದು ಗಮನಾರ್ಹ ಅಂಶ. ಉಡುಪಿ ಬ್ರಹ್ಮಾವರ ಕೋಟ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ, ಜೀ ಕನ್ನಡ ದೃಶ್ಯ ಮಾದ್ಯಮ ಸಂಸ್ಥೆಯು ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮದಲ್ಲಿ ಕರಾವಳಿಯ ಶ್ರೀಮಂತ ಕಲಾ ಪ್ರಾಕಾರವಾದ ಯಕ್ಷಗಾನವನ್ನ ಸಿನಿಮಾದ ಸಂಗೀತದ ಜೊತೆಗೆ ಅತ್ಯಂತ ಅಶ್ಲೀಲವಾದ ಹಾವ-ಭಾವದಲ್ಲಿ ಪ್ರದರ್ಶಿಸಿ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ.
ಇದನ್ನೂ ಓದಿ : Mangaluru Couple arrested ganja case : ವಿದ್ಯಾರ್ಥಿಗಳಿಗೆ ಗಾಂಜಾ ಮಾರುತ್ತಿದ್ದ ದಂಪತಿ ಬಂಧನ
ಯಕ್ಷಗಾನವನ್ನ ನಾವೆಲ್ಲರೂ ಧಾರ್ಮಿಕ ಭಾವನೆಯಲ್ಲಿ ಬೆಳಕಿನ ಸೇವೆ ಎಂದೇ ಪೂಜ್ಯ ಭಾವದಲ್ಲಿ ಗೌರವಿಸುತ್ತೇವೆ. ಆದರೆ ಝೀ ದೃಶ್ಯವಾಹಿನಿ ಪ್ರತೀ ಸಾರಿಯೂ ಯಕ್ಷಗಾನವನ್ನು ವಿರೂಪಗೊಳಿಸಿ ಪ್ರದರ್ಶಿಸುತ್ತಾ ಹಿಂದೂ ಧಾರ್ಮಿಕ ಭಾವನೆಗೆ ನೋವನ್ನು ಉಂಟು ಮಾಡುತ್ತಿರುವ ಹಿನ್ನೆಲೆಯಲ್ಲಿ ಆ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು, ಮತ್ತು ನೃತ್ಯ ಸಂಯೋಜಕ ಮಂಜು ಮಾಸ್ಟರ್ ಮತ್ತು ಸಂಬಂಧಪಟ್ಟವರ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡು ನಮಗೆ ನ್ಯಾಯ ದೊರಕಿಸಿಕೊಡುವಂತೆ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಮನವಿ ಮಾಡಲಾಗಿದೆ.
Discussion about this post