ಮೈಸೂರು : ತಲೆ ಕೂದಲು ಉದುರುತ್ತಿದೆ ಎಂದು ಮಾನಸಿಕವಾಗಿ ನೊಂದ ಯವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೃತಳನ್ನು ಮೈಸೂರು ರಾಘವೇಂದ್ರ ನಗರದ ಕಾವ್ಯಶ್ರೀ (21) ಎಂದು ಗುರುತಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಕಾವ್ಯಶ್ರೀ ತಲೆಕೂದಲು ಉದುರುವ ಸಮಸ್ಯೆ ಎದುರಿಸುತ್ತಿದ್ದರು. ಅದೆಷ್ಟು ಚಿಕಿತ್ಸೆ ಪಡೆದರೂ ಸಮಸ್ಯೆಯಿಂದ ಮುಕ್ತಿ ಪಡೆದಿರಲಿಲ್ಲ. ಇದರಿಂದ ನೊಂದ ಕಾವ್ಯ ನೇಣು ಬಿಗಿದು ಶುಕ್ರವಾರ ಮುಂಜಾನೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೊರೋನಾ ಲಾಕ್ ಡೌನ್ ತಂದ ಸಂಕಷ್ಟ : ಬ್ಯಾಂಕ್ ಸಾಲ ತೀರಿಸಲು ರಕ್ತ ಚಂದನ ಸ್ಮಗ್ಲಿಂಗ್
ಬೆಂಗಳೂರು : ಕೊರೋನಾ ಲಾಕ್ ಡೌನ್ ನಿಂದಾಗಿ ನಷ್ಟಕ್ಕೆ ಒಳಗಾಗಿದ್ದ ಟ್ರಾನ್ಸ್ ಪೋರ್ಟ್ ಮಾಲೀಕನೊಬ್ಬ ರಕ್ತಚಂದನ ವ್ಯವಹಾರ ಮಾಡಿ ಸಾಲ ತೀರಿಸಲು ಹೋಗಿ ಬೆಂಗಳೂರು ಪೊಲೀಸರ ಅತಿಥಿಯಾದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡು ಮೂಲದ ಚಂದ್ರು ಕ್ಯಾಂಟರ್ ಮತ್ತು ಕಾರುಗಳನ್ನು ಇಟ್ಟುಕೊಂಡು ಬಾಡಿಗೆ ಮೂಲಕ ಜೀವನ ಸಾಗಿಸುತ್ತಿದ್ದ. ಕೊರೋನಾ ಲಾಕ್ ಡೌನ್ ನಿಂದ ಚಂದ್ರುವಿನ ವ್ಯವಹಾರ ಕುಸಿದು ಬಿತ್ತು. ಹಾಗಂತ ಬ್ಯಾಂಕ್ ಸಿಬ್ಬಂದಿ ಕೇಳಬಕ್ಲ. ಸಾಲ ತೀರಿಸಲು ಪಟ್ಟು ಹಿಡಿದಿದ್ದಾರೆ. ಸಾಲ ಕಟ್ಟಲಾಗದ ಕಾರಣ ಕ್ಯಾಂಟರ್ ಗಳನ್ನು ಜಪ್ತಿ ಮಾಡಿದ್ದಾರೆ.
ಹೀಗಾಗಿ ಹೇಗಾದರೂ ಸರಿ ಬ್ಯಾಂಕ್ ಸಾಲ ತೀರಿಸಿ ಮತ್ತೆ ವ್ಯವಹಾರಗಳನ್ನು ಸರಿ ಮಾಡಬೇಕು ಎಂದು ನಿರ್ಧರಿಸಿದ ಚಂದ್ರು ಕಳ್ಳ ಮಾರ್ಗ ಹಿಡಿದಿದ್ದಾನೆ. ಇದೇ ವೇಳೆ ರಕ್ತಚಂದನ ದಂಧೆಕೋರರ ಬಳಿ ಕೂಲಿ ಕಾರ್ಮಿಕನಾಗಿದ್ದ ವಿಘ್ನೇಶ್ ಪರಿಚಯವಾಗಿದೆ.
ಹೀಗಾಗಿ ವಿಘ್ನೇಶ್ ಜೊತೆ ಸೇರಿ ರಕ್ತಚಂದನ ವ್ಯವಹಾರ ಪ್ರಾರಂಭಿಸಿದ ಚಂದ್ರು ಅಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ರಕ್ತಚಂದನ ಮರದ ತುಂಡಿಗೆ 300 ರೂಪಾಯಿ ನೀಡಿ ತಮಿಳುನಾಡು ಮತ್ತು ಕರ್ನಾಟಕದಲ್ಲಿ 2 ಸಾವಿರ ರೂಪಾಯಿಗೆ ಮಾರಲಾರಂಭಿಸಿದ. ಕಳೆದ ಎಂಟು ತಿಂಗಳಿಂದ ವ್ಯವಹಾರ ಚೆನ್ನಾಗಿಯೇ ನಡೆದಿತ್ತು.
ಈ ನಡುವೆ ಕೆಲ ದಿನಗಳ ಹಿಂದೆ ಆರ್.ಪಿ. ರಸ್ತೆಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ವಿಘ್ನೇಶ್ ಚಲಾಯಿಸುತ್ತಿದ್ದ ಕಾರು ಪೊಲೀಸರ ಕಣ್ಣಿಗೆ ಬಿದ್ದಿದೆ. ಅನುಮಾನಗೊಂಡು ಪರಿಶೀಲನೆ ನಡೆಸಿದಾಗ 51 ಲಕ್ಷ ಮೌಲ್ಯದ 4.53 ಕ್ವಿಂಟಾಲ್ ರಕ್ತ ಚಂದನ ಸಿಕ್ಕಿದೆ.
Discussion about this post