chandrashekhar guruji murder case ನಲ್ಲಿ ಪೊಲೀಸರು ಆರೋಪಿಗಳನ್ನು ಶೀಘ್ರದಲ್ಲೇ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು ಪೊಲೀಸರ ಜಾಣ ನಡೆ
ಹುಬ್ಬಳ್ಳಿ : ಚಂದ್ರಶೇಖರ ಗುರೂಜಿಯನ್ನು ( guruji murder case ) ಕೊಲೆಗೈದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಲೆ ಮಾಡಿದ್ದು ಇವರೇ ಅನ್ನುವುದು ದೃಢಪಟ್ಟ ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಲಿದ್ದಾರೆ. ಬಂಧನಕ್ಕೆ ಬೇಕಾದ ಪೂರಕ ಸಾಕ್ಷಿಗಳಿಗಾಗಿ ಪೊಲೀಸರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
ಈ ನಡುವೆ ಆರೋಪಿಗಳ ಬಂಧನದ ಕಾರ್ಯಾಚರಣೆ ಸಿಕ್ಕಾಪಟ್ಟೆ ರೋಚಕವಾಗಿತ್ತು. ಕೊಲೆ ಮಾಡಿದ ಆರೋಪಿಗಳು ಹೋಟೆಲ್ ನಿಂದ ಪರಾರಿಯಾಗಿ ಹುಬ್ಬಳ್ಳಿಯಿಂದ ನೇರವಾಗಿ ಬೆಳಗಾವಿ ಕಡೆಗೆ ಪ್ರಯಾಣ ಬೆಳೆಸಿದ್ದರು. ಈ ನಡುವೆ ಮಹಾಂತೇಶ ಶಿರೋಳ್ ಪತ್ನಿ ವನಜಾಕ್ಷಿಯನ್ನು ಪೊಲೀಸರು ವಿಚಾರಣೆಗೆ ಕರೆದರು.
ಇದನ್ನು ಓದಿ : ಕಿಸಾನ್ ಸಮ್ಮಾನ್ ವೆಬ್ ಸೈಟ್ ಬಗ್ಗೆ ಕರವೇ ಕೆಂಗಣ್ಣು : ಹೋರಾಟದ ಎಚ್ಚರಿಕೆ ನೀಡಿದ ನಾರಾಯಣಗೌಡ
ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದ ಆರೋಪಿಗಳಿಗೆ ಎನ್ ಕೌಂಟರ್ ಭೀತಿ ಶುರುವಾಗಿದೆ. ಹೀಗಾಗಿ ಪೊಲೀಸರಿಗೆ ಕರೆ ಮಾಡಿದ ಆರೋಪಿಗಳು ತಾವು ಬೆಳಗಾವಿ ಕಡೆಗೆ ಮುಖ ಮಾಡಿರುವುದಾಗಿ ಹೇಳಿದ್ದಾರೆ. ಆದರೆ ಪೊಲೀಸರ ದಾರಿ ತಪ್ಪಿಸುವ ಪ್ಲಾನ್ ಇದಾಗಿತ್ತು ಅನ್ನುವ ಅನುಮಾನಗಳಿದೆ. ಈ ನಡುವೆ ಆರೋಪಿಗಳ ಮೊಬೈಲ್ ನೆಟ್ ವರ್ಕ್ ಪತ್ತೆ ಹಚ್ಚಿದ ಪೊಲೀಸರು, ಆರೋಪಿಗಳು ಹೋಗುತ್ತಿರುವ ದಾರಿ ಪತ್ತೆ ಹಚ್ಚಿದ್ದಾರೆ. ಮುಂಬೈ ಕಡೆಗೆ ಆರೋಪಿಗಳು ಹೋಗುತ್ತಿರುವ ಸುಳಿವು ಸಿಕ್ಕಿದೆ. ತಕ್ಷಣ ಆಲರ್ಟ್ ಆದ ಹುಬ್ಬಳ್ಳಿ ಪೊಲೀಸರು ಬೆಳಗಾವಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
ತಕ್ಷಣ ನಾಕಾಬಂಧಿ ಹಾಕಿದ ಬೆಳಗಾವಿ ಪೊಲೀಸರಿಗೆ ಆರೋಪಿಗಳು ರಾಮದುರ್ಗದ ಬಸವೇಶ್ವರ ವೃತ ಕಡೆಗೆ ಬರುತ್ತಿರುವ ಮಾಹಿತಿ ಸಿಕ್ಕಿದೆ. ಜೆಸಿಬಿ, ಬಸ್, ಟ್ರ್ಯಾಕ್ಟರ್, ಪೊಲೀಸ್ ವ್ಯಾನ್ ಗಳನ್ನು ರಸ್ತೆಗೆ ಅಡ್ಡ ಹಾಕಿದ ಪೊಲೀಸರು ಅಲ್ಲೇ ಎಲ್ಲಾ ವ್ಯವಸ್ಥೆಗಳನ್ನು ಮಾಡಿ ಪೊಲೀಸರು ಆರೋಪಿಗಳು ಬಳಸುತ್ತಿದ್ದ ಕಾರನ್ನು ಅಡ್ಡ ಹಾಕಿದ್ದಾರೆ. ಈ ವೇಳೆ ಶರಣಾಗಲು ಪೊಲೀಸರು ನಿರಾಕರಿಸುತ್ತಿದ್ದಂತೆ, ಹಿರಿಯ ಅಧಿಕಾರಿಗಳು ಗನ್ ತೋರಿಸಿ ಎಚ್ಚರಿಕೆ ಕೊಟ್ಟಿದ್ದಾರೆ. ಹೀಗಾಗಿ ಸಕಲ ವ್ಯವಸ್ಥೆಗಳೊಂದಿಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಮಹಾಂತೇಶ ಶಿರೂರ್ ( Mahantesh Shirur ) ಹಾಗೂ ಮಂಜುನಾಥ್ ದುಮ್ಮವಾಡನ ( manjunath dummvadaney ) ಹೆಡೆಮುರಿ ಕಟ್ಟಿದ್ದಾರೆ.
ಈ ಇಬ್ಬರೂ ಆರೋಪಿಗಳು ಒಂದು ಕಾಲದಲ್ಲಿ ಚಂದ್ರಶೇಖರ್ ಗುರೂಜಿಗೆ ಆತ್ಮೀಯರಾಗಿದ್ದರು ಎಂದು ಗೊತ್ತಾಗಿದೆ. ಹಾಗಾದ್ರೆ ಕೊಲೆಗೆ ಅಸಲಿ ಕಾರಣವೇನು, ಇನ್ನೊಂದೆರಡು ದಿನದಲ್ಲಿ ಪೊಲೀಸರು ವಿವರವಾಗಿ ತಿಳಿಸಲಿದ್ದಾರೆ.
ವನಜಾಕ್ಷಿ ಜೊತೆಗಿನ ಗುದ್ದಾಟವೇ ಚಂದ್ರಶೇಖರ ಗುರೂಜಿ ಕೊಲೆಗೆ ಕಾರಣವಾಯ್ತೇ..?
ಚಂದ್ರಶೇಖರ ಗುರೂಜಿಯ ವ್ಯವಹಾರಗಳು ಸ್ವಚ್ಛವಾಗಿರಲಿಲ್ಲ ಅನ್ನುವ ಮಾತುಗಳು ಕೇಳಿ ಬರಲಾರಂಭಿಸಿದೆ. ಗುರೂಜಿ ಕೇವಲ ವಾಸ್ತು ತಜ್ಞರಾಗಿರಲಿಲ್ಲ, ಬದಲಾಗಿ ರಿಯಲ್ ಎಸ್ಟೇಟ್ ವ್ಯವಹಾರ ಕೂಡಾ ಜೋರಾಗಿತ್ತು ಅನ್ನಲಾಗಿದೆ.
ಹುಬ್ಬಳ್ಳಿ : ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ( chandrashekhar guruji ) ಕೊಲೆಯ ಬೆನ್ನಲ್ಲೇ ಆಲರ್ಟ್ ಆದ ಪೊಲೀಸರು 5 ತಂಡಗಳನ್ನು ರಚಿಸಿ ತನಿಖೆ ಪ್ರಾರಂಭಿಸಿದ್ದರು. ಗುರೂಜಿ ಶವವಾಗಿ ಬಿದ್ದ ಕೆಲವೇ ಗಂಟೆಗಳಲ್ಲಿ ಪೊಲೀಸರಿಗೆ ಕೊಲೆಗಾರರ ಸುಳಿವು ಸಿಕ್ಕಿತ್ತು. ಮಾತ್ರವಲ್ಲದೆ ಕೊಲೆಯ ಹಿಂದೆ ಮಹಿಳೆಯೊಬ್ಬಳು ಇದ್ದಾಳೆ ಅನ್ನುವ ಅನುಮಾನ ಸೃಷ್ಟಿಯಾಗಿತ್ತು.
ಇದರ ಬೆನ್ನಲ್ಲೇ ಗುರೂಜಿಯ ಮಾಜಿ ಆಪ್ತ, ಮಹಾಂತೇಶ ಶಿರೋಳ್ ಪತ್ನಿ ವನಜಾಕ್ಷಿಯನ್ನು ಗೋಕುಲ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ( chandrashekhar guruji ) ಗುರೂಜಿಯನ್ನು ಮಹಾಂತೇಶ ಶಿರೋಳ್ ಮತ್ತು ಮಂಜುನಾಥ ದುಮ್ಮವಾಡ ಅನ್ನುವವರೇ ಕೊಲೆ ಮಾಡಿದ್ದು ಎಂದು ದೃಢಪಟ್ಟ ಬೆನ್ನಲ್ಲೇ ವನಜಾಕ್ಷಿಯನ್ನು ವಶಕ್ಕೆ ಪಡೆದಿದ್ದಾರೆ.
ಗುರೂಜಿಯ ಕೊಲೆ ಬೇನಾಮಿ ಆಸ್ತಿಗಾಗಿ ನಡೆದಿರಬಹುದು ಅನ್ನುವ ಶಂಕೆಯ ಹಿನ್ನಲೆಯಲ್ಲಿ ವನಜಾಕ್ಷಿಯನ್ನು ವಶಕ್ಕೆ ಪಡೆಯಲಾಗಿತ್ತು. ವನಜಾಕ್ಷಿ ಸರಳ ವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿಯಾಗಿದ್ದು, 2019ರ ವರೆಗೆ ಸರಳ ವಾಸ್ತು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ವನಜಾಕ್ಷಿ ಹೆಸರಿಗೆ ಗೋಕುಲ ರಸ್ತೆ ಬಳಿಯ ಅಪಾರ್ಟ್‌ಮೆಂಟ್ ಮತ್ತು ಹಲವು ಆಸ್ತಿಗಳನ್ನು ಗುರೂಜಿ ನೋಂದಣಿ ಮಾಡಿಸಿದ್ದರು ಅನ್ನಲಾಗಿದೆ. ನಂತರ ಆಸ್ತಿ ವಾಪಸ್ ಕೇಳಿದಾಗ ಗಲಾಟೆ ಪ್ರಾರಂಭವಾಗಿದ್ದು, ಹಣಕಾಸಿನ ವಿಚಾರವಾಗಿಯೂ ಗಲಾಟೆ ಪ್ರಾರಂಭವಾಗಿದೆ. ಹೀಗಾಗಿ ವನಜಾಕ್ಷಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ.
Discussion about this post