ಬೆಂಗಳೂರು : ನಗರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯುವತಿಯೊಬ್ಬಳ (22) ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಹಿನ್ನಲೆಯಲ್ಲಿ ದೆಹಲಿ ಮೂಲದ ನಾಲ್ವರನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ರಾಷ್ಟ್ರಮಟ್ಟದ ಈಜುಪಟುಗಳು ಎಂದು ಗೊತ್ತಾಗಿದೆ.
ಬಂಧಿತರನ್ನು ದೆಹಲಿ ಮೂಲದ ರಜತ್, ಶಿವರಾಣಾ, ದೇವ್ ಸರೋಯಿ ಮತ್ತು ಯೋಗೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಸಂತ್ರಸ್ಥೆ ನೀಡಿದ ದೂರಿನ ಆಧಾರದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಬಂಧಿತರು ಈಜು ತರಬೇತಿ ಸಲುವಾಗಿ ದೆಹಲಿಯಿಂದ ರಾಜಧಾನಿಗೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಡೇಟಿಂಗ್ APP ಮೂಲಕ ನಗರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಯುವತಿಗೆ ರಜತ್ ಗೆ ಪರಿಚಯವಾಗಿದೆ. ಇದಾದ ಬಳಿಕ ಮಾರ್ಚ್ 24 ರಂದು ಇಬ್ಬರೂ ಡೇಟಿಂಗ್ ಗೆ ತೆರಳಿದ್ದಾರೆ. ಈ ವೇಳೆ ಸ್ನೇಹಿತರ ಜೊತೆ ಸೇರಿದ ರಜತ್ ಅತ್ಯಾಚಾರ ಎಸಗಿದ್ದಾರೆ ಅನ್ನಲಾಗಿದೆ. ಅಲ್ಲಿಂದ ತಪ್ಪಿಸಿಕೊಂಡು ಬಂದ ಯುವತಿ ಬಳಿಕ ಸಂಜಯನಗರ ಪೊಲೀಸರ ಮೊರೆ ಹೋಗಿದ್ದಳು.
Discussion about this post