ಇದೇ ಆಗಸ್ಟ್ 12 ರಂದು ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ2 (Gaalipata2) ತೆರೆಗೆ ಬರಲಿದೆ
ಯೋಗರಾಜ್ ಭಟ್ ನಿರ್ದೇಶನ ಮತ್ತು ಗಣೇಶ್ ಹಾಗೂ ಪವನ್ ಕುಮಾರ್ ನಟನೆಯ ಗಾಳಿಪಟ 2 (Gaalipata2) ಚಿತ್ರ ಇದೇ ಆಗಸ್ಟ್12 ರಂದು ತೆರೆ ಕಾಣಲಿದೆ.
ಗಾಳಿಪಟ2 (Gaalipata2) ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ವಿತರಣೆ ಮಾಡಲಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರ ಬಿದ್ದಿದ್ದು, ದೊಡ್ಡ ಮಟ್ಟದಲ್ಲಿ ಚಿತ್ರ ಬಿಡುಗಡೆಗೆ ತಯಾರಿಗಳು ನಡೆದಿದೆ.
ಇದನ್ನೂ ಓದಿ : Prakruti Mishra – babushaan mohanty : ನಟಿ ಜೊತೆ ವಿವಾಹಿತನ ನಟನ ಪ್ರೇಮ ಪ್ರಸಂಗ : ನಡು ರಸ್ತೆಯಲ್ಲೇ ಚಳಿ ಬಿಡಿಸಿದ ಪತ್ನಿ
ಬಿಡುಗಡೆ ದಿನ ಹತ್ತಿರ ಬರುತ್ತಿದ್ದಂತೆ ವಿಭಿನ್ನ ಟೀಸರ್ ಗಳನ್ನು ಚಿತ್ರ ತಂಡ ಬಿಡುಗಡೆ ಮಾಡುತ್ತಿದೆ. ಈಗಾಗಲೇ ಹಾಡು ಮತ್ತು ಪಾತ್ರಧಾರಿಗಳನ್ನು ಪರಿಚಯಿಸುವ ಟೀಸರ್ ಗಳು ಗಮನ ಸೆಳೆದಿದೆ.
ಗಾಳಿಪಟ 2 ಚಿತ್ರಕ್ಕೆ ರಮೇಶ್ ರೆಡ್ಡಿ ಬಂಡವಾಳ ಹೂಡಿದ್ದು ಸಂತೋಷ್ ರೈ ಪಾತಾಜೆ ಕ್ಯಾಮಾರ ಕೈ ಚಳಕ ತೋರಿದ್ದು, ಅರ್ಜುನ್ಯ ಸಂಗೀತ ಚಿತ್ರಕ್ಕಿದೆ.
Discussion about this post