ಅನೈತಿಕ ಸಂಬಂಧ ಅನ್ನುವುದು ನಿಧಾನ ವಿಷ ಎಂದು ಗೊತ್ತಿದ್ದರೂ ಚಟ ಬಿಡಬೇಕಲ್ವ. ಹೀಗೆ ನಟನೊಬ್ಬ ಪತ್ನಿಗೆ ಕೈ ಕೊಟ್ಟ ಕರ್ಮಕ್ಕೆ ನಡು ರಸ್ತೆಯಲ್ಲೇ ಧರ್ಮದೇಟು ತಿಂದಿದ್ದಾನೆ.Prakruti Mishra – babushaan mohanty
ಜನ ಸಾಮಾನ್ಯರ ಅನೈತಿಕ ಸಂಬಂಧದ ಗಲಾಟೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತದೆ. ಹಾಗಿದ್ದ ಮೇಲೆ ಸೆಲೆಬ್ರೆಟಿಗಳ ಅನೈತಿಕ ಸಂಬಂಧದ ಕಥೆ ಹೇಳಬೇಕಾ. ಮೊನ್ನೆ ಮೊನ್ನೆ ತನಕವೂ ಇದೇ ಕರ್ಮಕ್ಕೆ ಪವಿತ್ರಾ ಲೋಕೇಶ್ ಹಾಗೂ ನರೇಶ್ ಸುದ್ದಿಯಲ್ಲಿದ್ದರು. ಇದೇ ಕಾರಣಕ್ಕೆ ನರೇಶ್ ಪತ್ನಿ ರಮ್ಯಾ ಚಪ್ಪಲಿ ಕೈಗೆತ್ತಿಕೊಂಡಿದ್ದರು.(Prakruti Mishra – babushaan mohanty)
ಇದೀಗ ಇಂತಹುದೇ ಸುದ್ದಿ ದೂರದ ಒಡಿಸ್ಸಾದಿಂದ ಬಂದಿದೆ. ಒಡಿಯಾ ಚಿತ್ರರಂಗದ ಬಾಬುಶಾನ್ ಮೊಹಂತಿ ಮತ್ತು ನಟಿ ಪ್ರಕೃತಿ ವಿಶ್ರಾ (Prakruti Mishra – babushaan mohanty) ಪರಸ್ಪರ ಪ್ರೀತಿಸುತ್ತಿದ್ದಾರೆ. ಜೊತೆಗೆ ಸುತ್ತಾಟಗಳು ಜೋರಾಗಿಯೇ ಸಾಗಿತ್ತು. ಆದರೆ ಬಾಬುಶಾನ್ ಮೊಹಂತಿ ವಿವಾಹಿತ ಅನ್ನುವುದು ಗಮನಿಸಬೇಕಾದ ಅಂಶ.
Read : Daily horoscope : ದಿನ ಭವಿಷ್ಯ : ಇಂದಿನ ರಾಶಿ ಭವಿಷ್ಯ 24 ಜುಲೈ 2022
ಗಂಡ ದಾರಿ ತಪ್ಪಿರುವುದನ್ನು ತಿಳಿಸಿದ ಬಾಬುಶಾನ್ ಮೊಹಂತಿ ಪತ್ನಿ ತೃಪ್ತಿ ಕೆಂಡಾಮಂಡಲರಾಗಿದ್ದಾರೆ. ಅನೇಕ ಸಲ ಈ ಬಗ್ಗೆ ಕಿತ್ತಾಟಗಳು ನಡೆದಿತ್ತು. ಆದರೆ ಗಂಡ ಸುಧಾರಿಸಿರಲಿಲ್ಲ. ಮತ್ತೊಂದು ಹೆಣ್ಣಿನ ಬಾಳು ಹಾಳಾಗುತ್ತಿದೆ ಅನ್ನುವುದು ಗೊತ್ತಿದ್ದರೂ ಪ್ರಕೃತಿ ಮಿಶ್ರಾ ಮೊಹಂತಿ ಸಂಬಂಧ ತೊರೆದಿರಲಿಲ್ಲ.
ಹೀಗಾಗಿಯೇ ಇಬ್ಬರ ಸಂಬಂಧ ಅಂತ್ಯಗೊಳಿಸಲು ಬೀದಿಗಿಳಿದ ತೃಪ್ತಿ, ಗಂಡ ಹಾಗೂ ಆತನ ಪ್ರೇಯಸಿ ಜೊತೆಗೆ ಹೋಗುತ್ತಿರುವ ವೇಳೆಯಲ್ಲಿ ಕಾರು ಅಡ್ಡ ಹಾಕಿ ನಾಲ್ಕು ಏಟು ಕೊಟ್ಟಿದ್ದಾರೆ.
Read : vijayanand kashappanavar : ಎರಡನೇ ಮದುವೆಯಾದ್ರ ವಿಜಯಾನಂದ ಕಾಶಪ್ಪನವರ : ಮಗುವಿನ ಜನನ ಪ್ರಮಾಣ ಪತ್ರ ವೈರಲ್
ಆದರೆ ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಬಾಬುಶಾನ್ ಮೊಹಂತಿ, ನಾನು ಪ್ರಕೃತಿ ಜೊತೆ ಸಿನಿಮಾ ಮಾಡಿದ್ದು ನ್ನ ಕುಟುಂಬದವರಿಗೆ ನೋವು ತಂದಿದೆ ಅನ್ನುವುದು ಗೊತ್ತಿರಲಿಲ್ಲ. ಕುಟುಂಬದವರಿಗೆ ಇಷ್ಟ ಇಲ್ಲ ಅಂದ್ರೆ ನಾನು ಪ್ರಕೃತಿ ಜೊತೆ ಸಿನಿಮಾ ಮಾಡುವುದಿಲ್ಲ. ಮಾತ್ರವಲ್ಲದೆ ಭವಿಷ್ಯದಲ್ಲಿ ಯಾವ ನಟಿಯ ಜೊತೆಗೂ ಸಿನಿಮಾ ಮಾಡೋದಿಲ್ಲ ಅಂದಿದ್ದಾರೆ.
ಇನ್ನು ಈ ಗಲಾಟೆ ಸಂಬಂಧ ಪ್ರಕೃತಿ ತಾಯಿ ಮಗಳ ಮೇಲೆ ಹಲ್ಲೆಯಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಈ ಸಂಬಂಧ ಇದೀಗ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮಠಗಳಿಗೆ ಕೋಟಿ ಕೋಟಿ ಅನುದಾನ : ಅಕಾಡೆಮಿಗಳಿಗೆ ಮಾತ್ರ ಮೋಸ
ಮಠಗಳಿಗೆ ಅನುದಾನ ಕೊಟ್ಟರೆ ಓಟು ಗಿಟ್ಟಿಸಿಕೊಳ್ಳಬಹುದು, ಅಕಾಡೆಮಿಗಳಿಗೆ ದುಡ್ಡು ಕೊಟ್ಟು ಓಟು ಬರುತ್ತದೆಯೇ. ಕಲೆ ಸಾಹಿತ್ಯ ಸಂಸ್ಕೃತಿಯ ಬಗ್ಗೆ ಬಿಜೆಪಿ ಸರ್ಕಾರದ ನಿರ್ಲಕ್ಷ್ಯ ಮಾತ್ರ ದುರಂತವೇ ಸರಿ
ಬೆಂಗಳೂರು : ಕೊರೋನಾ ಹೆಸರಿನಲ್ಲಿ ಸರ್ಕಾರ ಮಾಡಿದ ಅನಾಹುತಗಳು ಒಂದೇ ಎರಡೇ. ಕೊರೋನಾ ಹೆಸರಿನಲ್ಲಿ ಕಾಸಿಲ್ಲ ಎಂದು ಅಭಿವೃದ್ಧಿ ಕೆಲಸಗಳನ್ನು ಸ್ಥಗಿತಗೊಳಿಸಿದ್ದ ರಾಜ್ಯ ಸರ್ಕಾರ ಮಠಗಳಿಗೆ ಅನುದಾನ ಕೊಡುವ ವಿಚಾರದಲ್ಲಿ ಮಾತ್ರ ಹಿಂದೆ ಬೀಳಲಿಲ್ಲ. ಆಗ ಆಗ ಬೊಕ್ಕಸಕ್ಕೆ ಭಾರವಾಗಲಿಲ್ಲ. ಇದೀಗ ನಾಡಿನ ಭಾಷೆ, ಸಂಸ್ಕೃತಿ, ಕಲೆ ಉಳಿಸಿ ಬೆಳೆಸುವ ವಿಚಾರದಲ್ಲೂ ಬೊಮ್ಮಾಯಿ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದು ಬೆಳಕಿಗೆ ಬಂದಿದೆ.
2019ರ ಅಕ್ಟೋಬರ್ 15 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ 14 ಅಕಾಡೆಮಿಗಳಿಗೆ ಹೊಸ ಅಧ್ಯಕ್ಷರ ನೇಮಕವಾಗಿತ್ತು. ಅಕ್ಟೋಬರ್ ತಿಂಗಳಲ್ಲಿ ಇವರ ಅಧಿಕಾರವಧಿ ಮುಕ್ತಾಯಗೊಳ್ಳಲಿದೆ. ಆದರೆ ಈ ಅಕಾಡೆಮಿಯ ಅಧ್ಯಕ್ಷರು ನಿರ್ಗಮಿಸುವ ಹೊತ್ತಿನಲ್ಲಿ ನೆನಪಿನಲ್ಲಿ ಉಳಿಯುವ ಯೋಜನೆ ತರಲಿಲ್ಲ ಅನ್ನುವ ನೋವಿನೊಂದಿಗೆ ನಿರ್ಗಮಿಸಬೇಕಿದೆ.
ಇದಕ್ಕೆ ಕಾರಣ ಈ ಅಕಾಡೆಮಿಗಳ ಬಗ್ಗೆ ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯ. 2020 ಮತ್ತು 2021ರಲ್ಲಿ ಕೊರೋನಾ ಕಾರಣದಿಂದ ಎಲ್ಲಾ ಅಕಾಡೆಮಿಗಳ ಅನುದಾನ ಕಡಿತಗೊಳಿಸಲಾಗಿತ್ತು. ಕೆಲ ಅಕಾಡೆಮಿಗಳಿಗೆ ಎರಡು ವರ್ಷದಲ್ಲಿ 80 ಲಕ್ಷ ಕೊಟ್ಟರೆ ಮತ್ತೆ ಕೆಲ ಅಕಾಡೆಮಿಗಳಿಗೆ ಅದಕ್ಕಿಂತ ಕಡಿಮೆ ಅನುದಾನ ನೀಡಲಾಗಿದೆ. ಕೊಟ್ಟ ಅನುದಾನದಲ್ಲಿ ಅಕಾಡೆಮಿಯ ಸಿಬ್ಬಂದಿ ವೇತನ, ಕಚೇರಿ ನಿರ್ವಹಣೆಗೆ ಹೆಚ್ಚು ಖರ್ಚಾಗುತ್ತದೆ. ಇನ್ನು ಕ್ರಿಯಾ ಯೋಜನೆ ರೂಪಿಸಲು ಹಣವೇ ಇರುವುದಿಲ್ಲ.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಸಂಗೀತ ನೃತ್ಯ ಅಕಾಡೆಮಿ, ನಾಟಕ ಅಕಾಡೆಮಿ, ಲಲಿತಾ ಕಲಾ ಅಕಾಡೆಮಿ, ಜಾನಪದ ಅಕಾಡೆಮಿ, ಶಿಲ್ಪಕಲಾ ಅಕಾಡೆಮಿ, ಯಕ್ಷಗಾನ ಅಕಾಡೆಮಿ ಈ ವರ್ಷ 30 ಲಕ್ಷ ರೂಪಾಯಿ ಅನುದಾನ ಪಡೆದಿದೆ. ಬಯಲಾಟ ಅಕಾಡೆಮಿ 15 ಲಕ್ಷ ರೂಪಾಯಿ ಅನುದಾನ ಪಡೆದರೆ, ತುಳು ಸಾಹಿತ್ಯ ಅಕಾಡೆಮಿ, ಬ್ಯಾರಿ ಸಾಹಿತ್ಯ ಅಕಾಡೆಮಿ, ಕೊಡವ ಸಾಹಿತ್ಯ ಅಕಾಡೆಮಿ, ಅರೆ ಭೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ, ಕೊಂಕಣಿ ಸಾಹಿತ್ಯ ಅಕಾಡೆಮಿ ತಲಾ 18 ಲಕ್ಷ ರೂಪಾಯಿ ಅನುದಾನ ಪಡೆದಿದೆ. ಲಂಬಾಣಿ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಸಾಂಪ್ರದಾಯಿಕ ಶಿಲ್ಪ ಗುರುಕುಲ ಕೇವಲ 2.50 ಲಕ್ಷ ರೂಪಾಯಿ ಅನುದಾನಕ್ಕೆ ತೃಪ್ತಿ ಹೊಂದಬೇಕಿದೆ.
ಆದರೆ 178 ಮಠಗಳಿಗೆ 108.02 ಕೋಟಿ, 59 ದೇವಸ್ಥಾನಗಳಿಗೆ 21.35 ಕೋಟಿ 26 ಸಂಘ ಮತ್ತು ಟ್ರಸ್ಟ್ ಗಳಿಗೆ 13 ಕೋಟಿ ಅನುದಾನವನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಮಾತು ಎತ್ತಿದ್ರೆ ನಾಡು ನುಡಿ ಭಾಷೆ ರಕ್ಷಣೆಗೆ ಬದ್ಧ ಅನ್ನುವ ಮಂದಿಯ ಕಾರ್ಯವೈಖರಿಗಿದು ಕೈಗನ್ನಡಿ
Discussion about this post