ರಾಜ್ಯದಲ್ಲಿ ನಕಲ್ ನಂಬರ್ ಪ್ಲೇಟ್ ಗಳ ಹಾವಳಿ ಮಿತಿ ಮೀರಿದೆ. ಈ ನಡುವೆ ಟ್ರಾಫಿಕ್ ಪೊಲೀಸರು ವಾಹನ ಅಡ್ಡ ಹಾಕೋದಿಲ್ಲ ಅನ್ನುವ ಧೈರ್ಯ ಬೇರೆ
ಬೆಂಗಳೂರು : ರಾಜ್ಯದಲ್ಲಿ ಟ್ರಾಫಿಕ್ ಪೊಲೀಸರು ರಸ್ತೆಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಇರೋ ಬರೋ ವಾಹನಗಳಿಗೆ ಅಡ್ಡ ಹಾಕಿ ಕಾಸು ವಸೂಲಿಗೆ ಟ್ರಾಫಿಕ್ ಪೊಲೀಸರು ಇಳಿದ ಕಾರಣದಿಂದ ಇದೀಗ ರಸ್ತೆಯಲ್ಲಿ ವಾಹನ ಅಡ್ಡ ಹಾಕಬೇಡಿ ಎಂದು ಪೊಲೀಸ್ ಮುಖ್ಯಸ್ಥರೇ ಸೂಚನೆ ನೀಡಿದ್ದಾರೆ. ಇನ್ನೂ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲಾರಿಗಳನ್ನು ಅಡ್ಡ ಹಾಕುವ ಪೊಲೀಸರ ಆಟಾಟೋಪ ದೇವರಿಗೆ ಪ್ರೀತಿ. ಒಂದು ವೇಳೆ ಪೊಲೀಸರು ಕಾನೂನು ಪ್ರಕಾರ ಕಾರ್ಯನಿರ್ವಹಿಸುತ್ತಿದ್ರೆ ಪ್ರವೀಣ್ ಸೂದ್ ಇಂತಹ ಆದೇಶ ಹೊರಡಿಸುವ ಪರಿಸ್ಥಿತಿ ಬರುತ್ತಿರಲಿಲ್ಲ.
ಪೊಲೀಸರು ಅದೆಷ್ಟು ಅಡ್ಡ ಹಾಕಿದ್ರು, ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡು ಓಡಾಡುವವರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಈ ನಡುವೆ ರಾಜಧಾನಿಯಲ್ಲಿ ನಕಲಿ ನಂಬರ್ ಪ್ಲೇಟ್ ದಂಧೆ ಎಗ್ಗಿಲ್ಲದೆ ಸಾಗಿದೆ. ಯಾವುದೇ ವಾಹನದ ಸಂಖ್ಯೆಯನ್ನು ಇನ್ನಾವುದೋ ವಾಹನಕ್ಕೆ ಅಂಟಿಸಿ ಓಡಿಸಲಾಗುತ್ತಿದೆ.
ಕೆಲ ದಿನಗಳ ಹಿಂದೆ ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಯವರು ಕಾರಿನಲ್ಲಿ ಸಾಗುತ್ತಿದ್ದ ವೇಳೆ BMW ಕಾರೋದು ಅತೀ ವೇಗದಿಂದ ಓವರ್ ಟೇಕ್ ಮಾಡಿದೆ. ಓವರ್ ಸ್ಪೀಡ್ ನೋಡಿದ ಆಯುಕ್ತರು ತಕ್ಷಣ ಕಾರಿನ ನಂಬರ್ ನೋಟ್ ಮಾಡಿ, ಸಂಚಾರ ವಿಭಾಗದ ಪೊಲೀಸ್ ಆಯುಕ್ತರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಮಾಲಕನ ಬೆನ್ನು ಹತ್ತೋಣ ಎಂದು ನೋಂದಣಿ ಸಂಖ್ಯೆ ನೋಡಿದ್ರೆ ಅದು ಮಾರುತಿ ಓಮ್ನಿಗೆ ಸೇರಿದ ನೋಂದಣಿ ಸಂಖ್ಯೆಯಾಗಿತ್ತು. ಇದರ ಬೆನ್ನಲ್ಲೇ ಮತ್ತಷ್ಟು ವಾಹನಗಳ ನೋಂದಣಿ ಸಂಖ್ಯೆಯನ್ನು ಪರಿಶೀಲನೆ ಮಾಡಿದ್ರೆ ಸಿಕ್ಕಾಪಟ್ಟೆ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡಿರುವ ವಾಹನಗಳು ಓಡಾಡುತ್ತಿರುವುದು ಗೊತ್ತಾಗಿದೆ. ಹೀಗಾಗಿ ನಕಲಿ ನಂಬರ್ ಪ್ಲೇಟ್ ಖದೀಮರ ವಿರುದ್ಧ ಸ್ಪೆಷಲ್ ಡ್ರೈವ್ ನಡೆಸಲು ಬೆಂಗಳೂರು ಟ್ರಾಫಿಕ್ ಪೊಲೀಸರು ನಿರ್ಧರಿಸಿದ್ದಾರೆ.
Discussion about this post