Saturday, March 6, 2021

ಮಾಜಿ ಯೋಧನಿಗೆ ಅವಾಜ್ ಹಾಕಿದ್ದ ಕರಿ ಚಿರತೆ ವಿಜಿ

Must read

- Advertisement -
- Advertisement -

ಪೊಲೀಸ್ ಅಧಿಕಾರಿಗಳ ಮುಂದೆ ತಾನೊಬ್ಬ ನಟ, ಸೆಲೆಬ್ರೆಟಿ ಅನ್ನುವುದನ್ನು ಮರೆತ ದುನಿಯಾ ವಿಜಿ ಅಟ್ಟಹಾಸ ಮೆರೆದಿದ್ದಾರೆ. ಘಟ್ಟ ಹತ್ತಿದ್ದರೂ ಹುಟ್ಟು ಗುಣ ಸುಟ್ಟು ಹೋಗುವುದಿಲ್ಲ ಅನ್ನುವ ಗಾದೆ ಮಾತಿಗೆ ಸರಿಯಾಗಿ ವರ್ತಿಸಿದ್ದಾರೆ.

ಹೈಗ್ರೌಂಡ್ ಪೊಲೀಸ್ ಠಾಣೆ ಮುಂದೆ ಅಟ್ಟಹಾಸ ಮೆರೆದ ಕರಿ ಚಿರತೆ ಇಂದು ಕಂಬಿ ಎಣಿಸಲೇಬೇಕು.ಭಾನುವಾರವಾಗಿರುವ ಕಾರಣ ಬೇಲ್ ಸಿಗುವುದಿಲ್ಲ.

ಈ ನಡುವೆ ಮಾಜಿ ಯೋಧರೊಬ್ಬರನ್ನು ಬೆದರಿಸಿರುವ ಆರೋಪ ದುನಿಯಾ ವಿಜಿ ಮೇಲೆ ಕೇಳಿ ಬಂದಿದೆ.
ಮಾಜಿ ಯೋಧ ವೆಂಕಟೇಶ್ ಅನ್ನುವವರು ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಇದೇ ದುನಿಯಾ ವಿಜಿ ಭಾಮೈದ ಕಿರಣ್ ವೆಂಕಟೇಶ್ ಕಡೆಯಿಂದ ಒಂದಿಷ್ಟು ಲಕ್ಷ ಹಣವನ್ನು ಸಾಲ ಎಂದು ಪಡೆದುಕೊಂಡು ಹೋಗಿದ್ದ.

ಆದರೆ ಹಲವು ತಿಂಗಳು ಕಳೆದರೂ ಕಾಸು ವಾಪಾಸ್ ಬರಲಿಲ್ಲ. ಕೇಳಲು ಹೋದ್ರೆ ಇನ್ಯಾರೋ ಮಧ್ಯ ಪ್ರವೇಶ ಮಾಡಿದರು.ದುನಿಯಾ ವಿಜಿ ಮಾತನಾಡುತ್ತಾರೆ ಎಂದು ಭರವಸೆ ಕೊಟ್ಟರು.

ಬಳಿಕ ದುನಿಯಾ ವಿಜಿ ಭೇಟಿ ಮಾಡಲು ಹೋದರೆ, ಮಾಜಿ ಯೋಧನ ಮೇಲೆಯೇ ದುನಿಯಾ ವಿಜಿ ಅಬ್ಬರಿಸಿದ್ದಾರೆ. ಇರೋ ಒಬ್ಬ ಮಗನ ಚರ್ಮ ಸುಳಿಯುವುದಾಗಿ ಬೆದರಿಕೆ ಹಾಕಿದ್ದಾರೆ.

ಸಮಾಜದಲ್ಲಿ ಸಿಕ್ಕಾಪಟ್ಟೆ ಗುರುತಿಸಿಕೊಂಡಿರುವ ದುನಿಯಾ ವಿಜಿಯನ್ನು ಎದುರು ಹಾಕಿಕೊಳ್ಳುವುದು ಹೇಗೆ ಎಂದು ವೆಂಕಟೇಶ್ ಪೊಲೀಸ್ ಠಾಣೆಗೂ ದೂರು ಕೊಟ್ಟಿರಲಿಲ್ಲ.

ಯಾವಾಗ ಬಾಡಿ ಬಿಲ್ಡರ್ ಗಳ ಮೇಲೂ ವಿಜಿ ಅಟ್ಟಹಾಸ ಮೆರೆದರೋ, ಮಾಜಿ ಯೋಧ ವೆಂಕಟೇಶ್ ವಿಜಿ ಮೇಲೆ ದೂರು ಕೊಡಲು ನಿರ್ಧರಿಸಿದ್ದಾರೆ.

ಮಾಸ್ತಿಗುಡಿ ಸಿನಿಮಾದಲ್ಲಿ ಆಗಿರುವ ಅನಾಹುತಕ್ಕೆ ಹೊಣೆ ಯಾರು ಅನ್ನುವುದನ್ನು ಜನ ಅನ್ನು ಮರೆತಿಲ್ಲ ಅನ್ನುವುದನ್ನು ಈ ವೇಳೆ ನೆನಪಿಸುವ ಅವಶ್ಯಕತೆ ಖಂಡಿತಾ ಇದೆ.

- Advertisement -
- Advertisement -
- Advertisement -

Latest article