ಪ್ರೀತಿಸಿ ಮದುವೆಯಾದವರ ಸಂಸಾರ ಚೆನ್ನಾಗಿತ್ತು, ಆದರೆ ಮಗಳನ್ನೂ ಕೊಂದು ತಾಯಿ ಆತ್ಮಹತ್ಯೆ ಮಾಡಿರುವುದು ಅನುಮಾನ ಹುಟ್ಟಿಸಿದೆ.( Dentist suicide)
ಬೆಂಗಳೂರು : ಒಂಭತ್ತು ವರ್ಷದ ಮಗಳಿಗೆ ನೇಣು ಬಿಗಿದು ಕೊಂದು ನಂತರ ದಂತ ವೈದ್ಯೆಯೊಬ್ಬರು ( Dentist suicide) ತಾನೂ ನೇಣಿಗೆ ಶರಣಾದ ಘಟನೆ ಬನಶಂಕರಿಯಲ್ಲಿ ನಡೆದಿದೆ. ಈ ಸಾವಿನ ಬಗ್ಗೆ ಇದೀಗ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಮೃತರನ್ನು ದಂತ ವೈದ್ಯೆ ಶೈಮಾ ಮುತ್ತಪ್ಪ ಮತ್ತು ಆರಾಧನಾ ಎಂದು ಗುರುತಿಸಲಾಗಿದೆ. ಬನಶಂಕರಿ ಕಾವೇರಿನಗರದ ಕೃಷ್ಣಾ ಗ್ರಾಂಡ್ ಬಳಿಯಲ್ಲಿ ಪತಿಯೊಂದಿಗೆ ಇವರು ನೆಲೆಸಿದ್ದರು.ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
Also Read : Pai international : ತಾಂತ್ರಿಕ ದೋಷದ ಮಿಕ್ಸಿ ಮಾರಿದ ಉಡುಪಿಯ ಪೈ ಇಂಟರ್‌ನ್ಯಾಷನಲ್ ಗೆ 20 ಸಾವಿರ ರೂ ದಂಡ
10 ವರ್ಷಗಳ ಹಿಂದೆ ದಂತ ವೈದ್ಯ ತರಬೇತಿಯ ವೇಳೆ ನಾರಾಯಣ್ ಅವರನ್ನು ಪ್ರೀತಿಸಿ ಶೈಮಾ ಮುತ್ತಪ್ಪ ವಿವಾಹವಾಗಿದ್ದರು. ಶೈಮಾ ಅವರ ಪ್ರೇಮ ವಿಚಾರ ಕುಟುಂಬಕ್ಕೆ ತಿಳಿದ ಸಂದರ್ಭದಲ್ಲೇ ಶೈಮಾ ತಾಯಿ ಸಹ ಮೃತಪಟ್ಟಿದ್ದರು. ನಂತರ ಕುಟುಂಬವನ್ನು ಒಪ್ಪಿಸಿ ವಿವಾಹವಾಗಿದ್ದರು.
ಸ್ಥಳದಲ್ಲಿ ಡೆತ್ನೋಟ್ ಸಿಕ್ಕಿಲ್ಲ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಇದೀಗ ಶೈಮಾ ಸಹೋದರ ಪೊಲೀಸರಿಗೆ ದೂರು ನೀಡಿದ್ದು, ದೂರು ದಾಖಲಿಸಿಕೊಂಡಿರುವ ಬನಶಂಕರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕೊಡಗಿನ ವಿರಾಜಪೇಟೆ ಮೂಲದ ಮೃತ ಶೈಮಾ ಕಳೆದ 10 ವರ್ಷದ ಹಿಂದೆ ದಂತ ವೈದ್ಯ ತರಬೇತಿ ವೇಳೆ ಕೋಲಾರ ಮೂಲದ ನಾರಾಯಣ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ನಾರಾಯಣ್ ಕೂಡಾ ವೈದ್ಯರಾಗಿದ್ದು, ಮನೆಯ ಸಮೀಪವೇ ಕ್ಲಿನಿಕ್ ಇಟ್ಟುಕೊಂಡಿದ್ದರು.
Discussion about this post