ಹೆಂಡ ಸಾರಾಯಿ ಸಹವಾಸ ಹೆಂಡತಿ ಮಕ್ಕಳ ಉಪವಾಸ ಅನ್ನುವ ಹಳೆಯ ಮಾತು ಹೀಗೆ ಕಂಠ ಪೂರ್ತಿ ಕುಡಿಯುವ ಕಾರಣದಿಂದ ಅದೆಷ್ಟೋ ಹೆಂಡತಿ ಮಕ್ಕಳು ಪ್ರಾಣ ( Crime news ) ಕಳೆದುಕೊಳ್ಳುವಂತಾಗಿದೆ
ಕಾರವಾರ : ವ್ಯಕ್ತಿಯೊಬ್ಬನ ಮದ್ಯದ ಚಟಕ್ಕೆ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ದಾರುಣ ಘಟನೆ ಕುಮಟಾ ತಾಲೂಕಿನ ಬಗಣೆ ಗ್ರಾಮದಲ್ಲಿ ನಡೆದಿದೆ. ( Crime news ) ಮೃತರನ್ನು ರಾಮಾ ಮರಾಠಿ ( 40) ಅವರ ಪತ್ನಿ ತಾಕಿ ಮತ್ತು ಮಗ ಲಕ್ಷ್ಮಣ ( 12 ) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ದಂಪತಿಯ ಮತ್ತೊಬ್ಬ ಪುತ್ರ ಭಾಸ್ಕರ ಅನ್ನುವವನು ಬದುಕುಳಿದಿದ್ದಾನೆ.
ರಾಮ ಮರಾಠಿ ವಿಪರೀತ ಕುಡಿತದ ಚಟ ಹತ್ತಿಸಿಕೊಂಡಿದ್ದ. ದಿನ ನಿತ್ಯ ಕುಡಿದು ಬಂದು ಮನೆಯಲ್ಲಿ ಜಗಳ ಮಾಡುತ್ತಿದ್ದ. ಹೀಗೆ ಕುಡಿದ ಮತ್ತಿನಲ್ಲಿ ಭಾನುವಾರ ರಾತ್ರಿಯೂ ಪತ್ನಿಯೊಂದಿಗೆ ಜಗಳ ಪ್ರಾರಂಭಿಸಿದ್ದಾನೆ. ಅದಾಕ್ಯೋ ಭಾನುವಾರ ರಾತ್ರಿ ಜಗಳದ ಅಬ್ಬರ ಜೋರಾಗಿಯೇ ಇತ್ತು. ಇದು ನಿತ್ಯದ ಜಗಳ ಎಂದು ಅಕ್ಕ ಪಕ್ಕದ ಮನೆಯವರು ಸುಮ್ಮನಾಗಿದ್ದಾರೆ.
ಆದರೆ ಬೆಳಗಾಗುವ ಹೊತ್ತಿಗೆ ರಾಮಾ ಮರಾಠಿ ನೇಣಿಗೆ ಕೊರಳೊಡ್ಡಿ ಮೃತಪಟ್ಟಿದ್ದ. ತಾಕಿ ಮತ್ತು ಮಗ ಲಕ್ಷ್ಮಣ ಮಚ್ಚಿನೇಟಿಗೆ ಹೆಣವಾಗಿ ಬಿದ್ದಿದ್ದರು. ಈ ನಡುವೆ ಭಾಸ್ಕರ ಅನ್ನುವ ಪುತ್ರ ಪ್ರಾಣ ಉಳಿಸಿಕೊಂಡಿದ್ದಾನೆ. ಇದೀಗ ಭಾಸ್ಕರ ಕೊಟ್ಟಿರುವ ಹೇಳಿಕೆ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವ ಕುಮಟಾ ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದಾರೆ.
ಭಾಸ್ಕರ ಕೊಟ್ಟಿರುವ ಹೇಳಿಕೆ ಪ್ರಕಾರ, ತಂದೆ ರಾತ್ರಿ ಕುಡಿದ ಮತ್ತಿನಲ್ಲಿ ಗಲಾಟೆ ಪ್ರಾರಂಭಿಸಿದ್ದಾರೆ. ಈ ವೇಳೆ ಮಚ್ಚು ಕೈಗೆತ್ತಿಕೊಂಡ ತಂದೆ ತಾಯಿಯನ್ನು ಕೊಲೆ ಮಾಡಿದ್ದಾರೆ. ತಡೆಯಲು ಹೋದ ವೇಳೆ ಲಕ್ಷ್ಮಣ ಮಚ್ಚಿನೇಟಿಗೆ ಬಲಿಯಾಗಿದ್ದಾನೆ. ಭಾಸ್ಕರನ ಮೇಲೆ ಹಲ್ಲೆ ಮಾಡಲು ಬಂದಾಗ ಆತ ತಪ್ಪಿಸಿಕೊಂಡಿದ್ದಾನೆ.
ನನ್ನ ಮಗಳಿಗೆ ಬಾಯ್ ಫ್ರೆಂಡ್ ಇದ್ದಾನೆ : ನಾನೂ ರಿಲೇಷನ್ ಶಿಪ್ ನಲ್ಲಿ ಇದ್ದೇನೆ : ಅನಿತಾ ಭಟ್ ಶಾಕಿಂಗ್ ಸ್ಟೇಟ್ ಮೆಂಟ್
ಕನ್ನಡ ಚಿತ್ರರಂಗದಲ್ಲಿ ನಟಿ ಅನಿತಾ ಭಟ್ ತಮ್ಮದೇ ಛಾಪು ಮೂಡಿಸಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟು 13 ವರ್ಷ ಕಳೆದರೂ ಇನ್ನೂ ಬೇಡಿಕೆ ಉಳಿಸಿಕೊಂಡಿದ್ದಾರೆ. ವಿವಾದಗಳಿಂದ ದೂರ ಇರುವುದೇ ಅನಿತಾ ಭಟ್ ಅವರ ಹೆಗ್ಗಳಿಕೆ.
ಅನಿತಾ ಭಟ್ ಸದಾ ಸುದ್ದಿಯಲ್ಲಿರುವ ನಟಿ. ಗ್ಲಾಮರಸ್ ಫೋಟೋಗಳ ಮೂಲಕ ಸದಾ ವೈರಲ್ ಕೆಟಗರಿಯಲ್ಲಿ ಕಾಣಿಸಿಕೊಳ್ಳುವ ಅನಿತಾ ಭಟ್ ಅದೆಷ್ಟು ಮುದ್ದಾಗಿ ನಗ್ತಾರೋ ಅಷ್ಟೇ ನೋವುಗಳನ್ನು ತನ್ನೊಳಗೆ ಹುದುಗಿಸಿಕೊಂಡಿದ್ದಾರೆ. ಬಿಗ್ ಬಾಸ್ ಸೀಸನ್ 2 ರಲ್ಲಿ ಕಾಣಿಸಿಕೊಂಡಿದ್ದ ಅನಿತಾ ಭಟ್ ತಮ್ಮ ಬದುಕಿನ ಏರಿಳಿತಗಳನ್ನು ತೆರೆದಿಟ್ಟಿದ್ದರು.
ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಅನಿತಾ ಭಟ್, ಉದ್ಯಮಿಯಾಗುವ ಸಾಹಸಕ್ಕೂ ಕೈ ಹಾಕಿದ್ದರು. ಯೋಗ ತರಗತಿಗಳನ್ನು ನಡೆಸುವ ಮೂಲಕ ಸುದ್ದಿಯಾಗಿದ್ದರೂ ಕೂಡಾ.
ಇದೀಗ ಮತ್ತೊಮ್ಮೆ ಸುದ್ದಿಯಾಗಿರುವುದು ಅನಿತಾ ಭಟ್ ಟಿವಿ9 ಮೂಲಕ. ಟಿವಿ9 ಕನ್ನಡ ಸುದ್ದಿವಾಹಿನಿಗೆ ವಿಶೇಷ ಸಂದರ್ಶನ ಕೊಟ್ಟಿರುವ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮದುವೆ ಕುರಿತಂತೆ ತನದೇ ಆದ ಅಭಿಪ್ರಾಯ ಹೊಂದಿರುವ ಅವರು, ನನಗೆ ಮದುವೆ ಇಷ್ಟವಿದೆ. ಮದುವೆ ಅನ್ನುವುದು ವ್ಯಕ್ತಿಯೊಬ್ಬರ ಜೀವನದಲ್ಲಿ ನಡೆಯಲೇಬೇಕು, ಆದರೆ ಅಲ್ಲಿ ನಡೆಯುವ ಪ್ರಕ್ರಿಯೆಗಳ ಬಗ್ಗೆ ನನಗೆ ಒಲವಿಲ್ಲ ಅಂದಿದ್ದಾರೆ. ಇನ್ನು ನನ್ನ ಮಗಳಿಗೂ ಬಾಯ್ ಫ್ರೆಂಡ್ ಇದ್ದಾನೆ ಆದರೆ ಅವಳಿಗೂ ಮದುವೆ ಇಷ್ಟವಿಲ್ಲ ಎಂದು ಅನಿತಾ ಭಟ್ ಹೇಳಿದ್ದಾರೆ. ಈ ನಡುವೆ ಸಂದರ್ಶಕಿ ಸುಕನ್ಯ ಈಗ ನಿಮ್ಮ ಜೀವನದಲ್ಲಿ ಯಾರಿದ್ದಾರೆ ಅನ್ನುವ ಪ್ರಶ್ನೆಗೆ, ನನ್ನ ಬದುಕಿನಲ್ಲಿ ವ್ಯಕ್ತಿಯೊಬ್ಬರು ಇದ್ದಾರೆ ಅಂದಿದ್ದಾರೆ. ಅವರು ಸಿನಿಮಾ ರಂಗದವರೇ ಅಂದಿರುವ ಅನಿತಾ ಭಟ್, ಶೀಘ್ರದಲ್ಲೇ ಗುಡ್ ನ್ಯೂಸ್ ಸಿಗಲಿದೆಯೇ ಅಂದ್ರೆ ಗೊತ್ತಿಲ್ಲ ಅಂದಿದ್ದಾರೆ.
Discussion about this post