ಬೆಂಗಳೂರು : ಗಂಡ ಹೆಂಡತಿ ಚಿತ್ರದ ಖ್ಯಾತಿಯ ನಟಿ ಸಂಜನ ಗಲ್ರಾನಿ ಮತ್ತೆ ಸುದ್ದಿಯಲ್ಲಿದ್ದಾರೆ. ಡ್ರಗ್ಸ್ ಪ್ರಕರಣದ ಬಳಿಕ ರಾಖಿ ಬ್ರದರ್ ಎಂದು ಕರೆಸಿಕೊಂಡಿದ್ದ ರಾಹುಲ್ ಥೋನ್ಸ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ಇದಾದ ಬಳಿಕ ಇದೀಗ ಫ್ಯಾಷನ್ ಐಕಾನ್ ಪ್ರಸಾದ್ ಬಿದ್ದಪ್ಪ ಪುತ್ರನ ವಿರುದ್ಧ ಠಾಣೆ ಮೆಟ್ಟಿಲೇರಿದ್ದಾರೆ.
ಪ್ರಸಾದ್ ಬಿದ್ದಪ್ಪ ಪುತ್ರ Adam ಬಿದ್ದಪ್ಪ ತಮ್ಮನ್ನ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಶ್ಲೀಲ ಸಂದೇಶಗಳನ್ನು ರವಾನಿಸಿದ್ದಾರೆ ಎಂದು ಆರೋಪಿಸಿರುವ ಸಂಜನಾ ದೂರು ನೀಡಿದ್ದಾರೆ. ಇದೇ ಫೆಬ್ರವರಿ 25ರಂದು ರಾತ್ರಿ 10ರಿಂದ 12ರವರೆಗೆ ಸಂಜನಾ ಗಲ್ರಾನಿ ಅವರಿಗೆ ಆಡಂ ಬಿದ್ದಪ್ಪ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಅನ್ನುವ ಆರೋಪ ಇದಾಗಿದ್ದು, ಈ ಕುರಿತು ದೂರಿನ ಜೊತೆಗೆ ವಾಟ್ಸಪ್ಚಾಟ್ ದಾಖಲೆಯನ್ನೂ ಸಂಜನಾ ನೀಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಇಂದಿರಾ ನಗರ ಪೊಲೀಸರು ಆರೋಪಿಯನ್ನು ಕೊಡಗಿನ ತನ್ನ ಹೋಂ ಸ್ಟೇಯಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸಂಜನಾ ಆರೋಪಗಳನ್ನು ತಳ್ಳಿ ಹಾಕಿರುವ ಆಡಂ ಬಿದ್ದಪ್ಪ ತಾವು ಸಂಜನಾಗೆ ಯಾವುದೇ ಅಶ್ಲೀಲ ಅಥವಾ ಅವಾಚ್ಯ ಸಂದೇಶ ಕಳಿಸಿಲ್ಲ. ಸಂಜನಾ ತಮ್ಮನ್ನು ಬ್ಲಾಕ್ ಮಾಡಿದ್ದಾರೆ ತಾವು ಕಳಿಸಿದ ಸಂದೇಶ ಅವರಿಗೆ ತಲುಪಲು ಸಾಧ್ಯವಿಲ್ಲವೆಂದು ವಾದಿಸಿದ್ದಾರೆ.
ಇದೀಗ ಆರೋಪಯನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಯ ಮೊಬೈಲ್ ಅನ್ನು ಕೂಡಾ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
Discussion about this post