ನಡೆಯುತ್ತಿರುವ ಬೆಳವಣಿಗೆ ಗಮನಿಸಿದರೆ ರಾಜ್ಯ ಶಾಂತಿ ಕದಡಲು ದೊಡ್ಡದೊಂದು ಷಡ್ಯಂತ್ಯ ನಡೆದಿರುವಂತಿದೆ ( Bhadravathi)
ಶಿವಮೊಗ್ಗ : ಶಿವಮೊಗ್ಗದ ಕಿರಿಕ್ ಬೆನ್ನಲ್ಲೇ ಇಂದು ಭದ್ರಾವತಿಯಲ್ಲೂ ( Bhadravathi) ಯುವಕನೊಬ್ಬನ ಮೇಲೆ ಚಾಕುವಿನಿಂದ ಇರಿಯಲು ಪ್ರಯತ್ನ ನಡೆಸಲಾಗಿದೆ. ಮಂಗಳವಾರ ಬೆಳಗ್ಗೆ ಭದ್ರಾವತಿಯಲ್ಲಿ ಅನ್ಯಕೋಮಿನ ಯುವಕರು ಏಕಾಏಕಿ ಹಲ್ಲೆ ಮಾಡಿ ಚಾಕುವಿನಿಂದ ಇರಿಯಲು ಯತ್ನ ಮಾಡಲಾಗಿದೆ. ಗಾಯಗೊಂಡ ಯುವಕನ್ನು 27 ವರ್ಷದ ಸುನೀಲ್ ಎಂದು ಗುರುತಿಸಲಾಗಿದೆ.
ಸುನಿಲ್ ಎಂದಿನಂತೆ ನೆಹರು ನಗರದಲ್ಲಿ ಬೆಳಗ್ಗೆ ಕೆಲಸಕ್ಕೆ ಹೋಗುತ್ತಿದ್ದರು. ಈ ವೇಳೆ ಅನ್ಯಕೋಮಿನ ಯುವಕರು ಹಲ್ಲೆ ಮಾಡಿ, ಚಾಕುವಿನಿಂದ ಇರಿಯಲು ಯತ್ನಿಸಿದ್ದಾರೆ. ಸುನೀಲ್ ಭಜರಂಗದಳದ ಕಾರ್ಯಕರ್ತ ಅನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಸುನೀಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಳೆ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಘಟನೆಯ ಬೆನ್ನಲ್ಲೇ ಭದ್ರಾವತಿಯಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣಗೊಂಡಿದೆ.
ಇದನ್ನೂ ಓದಿ : Kerala Air India crash : ಸಂತ್ರಸ್ತರಿಂದಲೇ ಆಸ್ಪತ್ರೆ : ಏರಿಂಡಿಯಾ ದುರಂತ ಬಳಿಕ ಅರಳಿದ ಕನಸು
Discussion about this post