ಬೆಂಗಳೂರು : ಉಡ್ತಾ ಪಂಜಾಬ್ ರೀತಿಯಲ್ಲಿ ಉಡ್ತಾ ಕರ್ನಾಟಕವಾಗುತ್ತಿದೆ ಅನ್ನುವ ಆತಂಕವನ್ನು ಮಾಧ್ಯಮಗಳು ಸಾಕ್ಷಿ ಸಮೇತ ಅನೇಕ ಸಲ ಪ್ರಕಟಿಸಿದೆ. ಆದರೆ ಡ್ರಗ್ಸ್ ದಂಧೆಯ ವಿರುದ್ಧ ಸಂಘಟಿತ ಹೋರಾಟ ಕರ್ನಾಟಕ ನಡೆಯುತ್ತಿಲ್ಲ. ಅದರಲ್ಲೂ ಕಾನೂನಿನ ಮೂಲಕ ಡ್ರಗ್ಸ್ ದಂಧೆಕೋರರಿಗೆ ಬಿಸಿ ಮುಟ್ಟಿಸುವ ಕೆಲಸವಾಗುತ್ತಿಲ್ಲ.
ಈ ನಡುವೆ ಅನೇಕಲ್ ಹೊರವಲಯದಲ್ಲಿ ಮಧ್ಯರಾತ್ರಿ ರೇವ್ ಪಾರ್ಟಿ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಈ ವೇಳೆ ಗಾಂಜಾ ಸೇರಿದಂತೆ ವಿವಿಧ ಡ್ರಗ್ಸ್ ಪತ್ತೆಯಾಗಿವೆ ಎನ್ನಲಾಗಿದೆ. ಪೊಲೀಸರು ದಾಳಿ ನಡೆಸುತ್ತಿದ್ದಂತೆ ಅರೆ ಬರೆ ಬಟ್ಟೆ ಹಾಕಿದ್ದ ಯುವಕ ಯುವತಿಯರು ತಾವು ತಂದಿದ್ದ ವಾಹನಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.

ಇನ್ನು ಸ್ಥಳದಲ್ಲಿ ಸಿಕ್ಕಿರುವ ವಾಹನಗಳನ್ನು ಗಮನಿಸಿದರೆ ಬಂದಿರುವವರೆಲ್ಲಾ ಶ್ರೀಮಂತರ ಮಕ್ಕಳು ಅನ್ನುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಪ್ರಕರಣ ಏನಾಗುತ್ತದೋ ಅನ್ನುವ ಕುತೂಹಲವಿದೆ.ಇನ್ನು ಮದ್ಯ ಸೇವಿಸಿ ಅರೆ ನಗ್ನ ಸ್ಥಿತಿಯಲ್ಲಿದ್ದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Discussion about this post