ಬೆಂಗಳೂರು : ಅರಗ ಜ್ಞಾನೇಂದ್ರ ಅವರು ಗೃಹ ಸಚಿವರಾಗಿ ಬಂದ ಮೇಲೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅನ್ನುವುದು ಸ್ಪಷ್ಟ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಶಿಸ್ತಿನ ಇಲಾಖೆಯಲ್ಲಿ ಅಶಿಸ್ತು ಕಾಣಿಸಿರುವುದೇ ಇದಕ್ಕೆ ಕಾರಣ. ಗೃಹ ಸಚಿವರು ಈ ಸಂಬಂಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳದಿದ್ರೆ ಕಷ್ಟ..ಕಷ್ಟ.
ಈ ನಡುವೆ ಪಬ್ ಮಾಲೀಕರೊಬ್ಬರು ಬೌನ್ಸರ್ ಗಳ ಜೊತೆ ಸೇರಿ GST ಇನ್ಸ್ಪೆಕ್ಟರ್ ಒಬ್ಬರನ್ನು ಕೂಡಿ ಹಾಕಿ ಹಲ್ಲೆ ನಡೆಸಿದ ಘಟನೆ ಕೋರಮಂಗಲದ ಪಬ್ನಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಜಿಎಸ್ಟಿ ಇನ್ಸ್ಪೆಕ್ಟರ್ ವಿನಯ್ ಮಂಡಲ್ ಹ್ಯಾಪಿ ಬ್ರೋ ಪಬ್ ಗೆ ಭೇಟಿ ನೀಡಿದ್ದರು. ಈ ವೇಳೆ ಪಬ್ ಮಾಲಿಕ ರಾಕೇಶ್ ಗೌಡ ವಿನಯ್ ಬಳಿ ಬಂದು ಪರಿಚಯ ಮಾಡಿಕೊಂಡಿದ್ದ. ಈ ನಡುವೆ ಪಬ್ ಕ್ಲೋಸ್ ಮಾಡುವ ಸಮಯದಲ್ಲಿ ಬಿಲ್ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ರಾತ್ರಿ ಒಂದು ಗಂಟೆ ಕಳೆದರೂ ಬಿಲ್ ಸಮಸ್ಯೆ ಬಗೆ ಹರಿದಿರಲಿಲ್ಲ. ಯಾವಾಗ ಬಿಲ್ ಹಣ ಬರೋದಿಲ್ಲ ಎಂದು ಗೊತ್ತಾಯ್ತೋ ನೀನೊಬ್ಬ ಫೇಕ್ ಜಿಎಸ್ಟಿ ಇನ್ಸ್ಪೆಕ್ಟರ್ ಎಂದು ಜರಿದ ರಾಕೇಶ್ ಗೌಡ ವಿನಯ್ ನನ್ನು ಕೂಡಿ ಹಾಕಿ ತಾನೂ ಹಲ್ಲೆ ಮಾಡಿದ್ದು ಮಾತ್ರವಲ್ಲದೆ ಬೌನ್ಸರ್ ಗಳಿಂದಲೂ ಹೊಡೆಸಿದ್ದಾನೆ.
ಈ ಹಿಂದೆ ಇದೇ ಪಬ್ ಗೆ ಭೇಟಿ ನೀಡಿದ್ದ ನಕಲಿ ಐಟಿ ಅಧಿಕಾರಿಯೊಬ್ಬ ಮಾಲೀಕರನ್ನು ಬೆದರಿಸಿದ್ದ. ಹೀಗಾಗಿ ಈತ ಕೂಡಾ ನಕಲಿ GST ಅಧಿಕಾರಿ ಇರಬಹುದೆಂದು ಥಳಿಸಿರುವುದಾಗಿ ಆರೋಪಿಗಳು ಹೇಳಿದ್ದಾರೆ.
ಇದೀಗ ಈ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ರಾಕೇಶ್ ಗೌಡ ಮತ್ತು ಬೌನ್ಸರ್ ಗಳನ್ನು ಬಂಧಿಸಲಾಗಿದೆ.
Discussion about this post