ಸೆಲೆಬ್ರೆಟಿಗಳಾದವರಿಗೆ ಬದ್ಧತೆಗಳಿರಬೇಕಾಗುತ್ತದೆ. ನಮ್ಮನ್ನೂ, ನಮ್ಮ ನಡೆಯನ್ನೂ ಜನ ಫಾಲೋ ಮಾಡ್ತಾರೆ ಅನ್ನುವ ಕನಿಷ್ಠ ಜ್ಞಾನ ಇರಬೇಕಾಗುತ್ತದೆ. ಹೀಗಾಗಿ ಅನೇಕ ನಟ ನಟಿಯರು ಕಾಂಡೋಮ್ ಸೇರಿದಂತೆ ಸೂಕ್ಷ್ಮ ಜಾಹೀರಾತು ಆಫರ್ ಗಳನ್ನು ತಿರಸ್ಕರಿಸಿದ್ದಾರೆ. ಮಾತ್ರವಲ್ಲದೆ ಇನ್ನು ಕೆಲವರು ಮದ್ಯಪಾನ ಹಾಗೂ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಜಾಹೀರಾತುಗಳನ್ನು ತಿರಸ್ಕರಿಸಿದ್ದಾರೆ.
ಇದಕ್ಕೆ ತದ್ವಿರುದ್ಧವಾಗಿ ಕೆಲ ನಟರು, ಯಾರ ಮನೆ ಹಾಳಾಗ್ಲಿ ನಮಗೇನು ಎಂದು ಆನ್ ಲೈನ್ ರಮ್ಮಿ ಸೇರಿದಂತೆ ಆನ್ ಲೈನ್ ಆಟದ ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಕ್ಯಾನ್ಸರ್ ಬಂದ್ರೆ ನಮಗೇನು ಎಂದು ಗುಟ್ಕಾ ಜಾಹೀರಾತುಗಳಲ್ಲಿ ಕಾಣಿಸಿಕೊಂಡ ಪುಣ್ಯಾತ್ಮರು ನಮ್ಮಲ್ಲಿದ್ದಾರೆ.
ಇದೀಗ ರಶ್ಮಿಕಾ ಮಂದಣ್ಣ ಇದೇ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಮಹಿಳೆಯರ ಗೌರವ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ತರುವ ಜಾಹೀರಾತು ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ನೈತಿಕತೆ ಅನ್ನುವುದು ಇರುತ್ತಿದ್ರೆ ಈ ಕೆಟ್ಟ ಕಾನ್ಸೆಪ್ಟ್ ಹೊಂದಿರುವ ಜಾಹೀರಾತಿಗೆ ಸಹಿ ಹಾಕುತ್ತಿರಲಿಲ್ಲ.
ಜಾಹೀರಾತು ಏನ್ ಗೊತ್ತಾ..?
ರಶ್ಮಿಕಾ ಮಂದಣ್ಣ ಪುರುಷರ ಒಳ ಉಡುಪಿನ ಜಾಹೀರಾತು ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ರಶ್ಮಿಕಾ ಇದರಲ್ಲಿ ಜಿಮ್ ಟ್ರೈನರ್ ಆಗಿದ್ದು, ಜಿಮ್ ತರಬೇತಿ ಕೊಡುವಾಗ ನಟ ವಿಕ್ಕಿ ಕೌಶಲ್ ಅವರ ಭಂಗಿಯೊಂದನ್ನು ಪ್ರದರ್ಶಿಸುವಾಗ ಒಳ ಉಡುಪು ಕಾಣಿಸಿಕೊಳ್ಳುತ್ತದೆ. ಅಷ್ಟೇ ರಶ್ಮಿಕಾ ಮೈ ಮರೆಯುತ್ತಾರೆ.
ಮರು ದಿನ ಮತ್ತೆ ವಿಕ್ಕಿ ಕೌಶಲ್ ಚಡ್ಡಿ ನೋಡುವ ಸಲುವಾಗಿ ಯೋಗ ಮ್ಯಾಟ್ ನ ಸ್ಥಳ ತಪ್ಪಿಸಿ ಎತ್ತರದ ಪ್ರದೇಶದಲ್ಲಿ ಎತ್ತಿಡುತ್ತಾರೆ ರಶ್ಮಿಕಾ. ವಿಕ್ಕಿ ಮತ್ತೆ ಮ್ಯಾಟ್ ಎತ್ತಿಕೊಳ್ಳಲು ಹೋದಾಗ ಚಡ್ಡಿ ಕಾಣಿಸುತ್ತದೆ. ಮತ್ತೆ ರಶ್ಮಿಕಾ ಅವರಿಗೆ ಕರೆಂಟ್ ಶಾಕ್ ಹೊಡೆದ ಅನುಭವ.
ಇದೀಗ ಈ ಜಾಹೀರಾತು ಕಾನ್ಸೆಪ್ಟ್ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಭಾರತೀಯ ಮಹಿಳೆಯರನ್ನು ದಯವಿಟ್ಟು ಅವಮಾನಿಸಬೇಡಿ ಅಂದಿದ್ದಾರೆ. ಯೋಗಕ್ಕೆ ಭಾರತದಲ್ಲಿ ತನ್ನದೇ ಆದ ಸ್ಥಾನವಿದೆ. ಅದು ಚಡ್ಡಿ ತೋರಿಸುವ ಜಾಗವಲ್ಲ. ಜೊತೆಗೆ ಮಹಿಳೆಯರು ಚಡ್ಡಿ ನೋಡಿ ಹೀಗಾಗುವ ಪರಿಸ್ಥಿತಿ ಭಾರತದಲ್ಲಿ ಇಲ್ಲ ಅಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿರುವ ವಿರೋಧ ನೋಡಿದರೆ, ಕೆಲವೇ ದಿನಗಳಲ್ಲಿ ಜಾಹೀರಾತು ಸ್ಥಗಿತಗೊಳ್ಳುವುದರಲ್ಲಿ ಸಂಶಯವಿಲ್ಲ.
Discussion about this post