ಇತ್ತೀಚಿನ ದಿನಗಳಲ್ಲಿ ಶಿಸ್ತಿಗೆ ಹೆಸರಾಗಿರುವ ಪೊಲೀಸ್ ಇಲಾಖೆ ಮೇಲೆ ಆರೋಪಗಳ ಮೇಲೆ ಆರೋಪ ಕೇಳಿ ಬರುತ್ತಿದೆ. ಆದರಲ್ಲೂ ಸಂಚಾರ ನಿಯಮ ಉಲ್ಲಂಘನೆ ದಂಡ ಹೆಚ್ಚಾದ ಮೇಲಂತೂ ಟ್ರಾಫಿಕ್ ಪೊಲೀಸರ ಮೇಲೆ ದೂರುಗಳ ಸುರಿಮಳೆ.
ನಿಯಮಗಳನ್ನು ಉಲ್ಲಂಘಿಸಿದವರ ಮೇಲೆ ಕ್ರಮ
ಕೈಗೊಳ್ಳಬೇಕಾದವರೇ ನಿಯಮ ಉಲ್ಲಂಘಿಸುತ್ತಿರುವುದು ಈಗಾಗಲೇ ಕಂಡು ಬಂದಿದೆ. ಟೋಯಿಂಗ್ ಮಾಡುವ
ಸಂದರ್ಭದಲ್ಲಿ ಮೈಕ್ ನಲ್ಲಿ ಅನೌನ್ಸ್ ಮಾಡಬೇಕು ಅನ್ನುವ ನಿಯಮವಿದೆ. ಆದರೆ ಅದ್ಯಾವುದನ್ನು
ಪೊಲೀಸರು ಪಾಲಿಸುವುದಿಲ್ಲ.
ಇನ್ನು ನಗರದ ಅನೇಕ ಹೊಟೇಲ್, ದೊಡ್ಡ ದೊಡ್ಡ ಅಂಗಡಿಗಳ ಮುಂದಿನ ಫುಟ್ ಪಾತ್ ಅನ್ನು ಅಕ್ರಮಿಸಿ ವಾಹನ ಪಾರ್ಕಿಂಗ್ ಮಾಡಲಾಗಿರುತ್ತದೆ. ಅದು ಪೊಲೀಸರ ಕಣ್ಣಿಗೆ ಬೀಳುವುದೇ ಇಲ್ಲ. ಶಾಲಾ ವಾಹನಗಳು ರಸ್ತೆ ಮೇಲೆ ನಿಲುಗಡೆಯಾಗಿದ್ದರೂ ಟ್ರಾಫಿಕ್ ಪೊಲೀಸರಿಗೆ ಅರಿವೇ ಇರುವುದಿಲ್ಲ.
ಈ ನಡುವೆ ಬೆಂಗಳೂರಿನ ಟ್ರಾಫಿಕ್ ಪೊಲೀಸ್ ಪೇದೆಯೊಬ್ಬ ಟೆಂಪೋ ಚಾಲಕನ ಮೇಲೆ ಹಲ್ಲೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ಈ ಘಟನೆ ಶುಕ್ರವಾದ ಮಧ್ಯಾಹ್ನ ಕೆಆರ್ ಮಾರುಕಟ್ಟೆ ನಡೆದಿದೆ ಎನ್ನಲಾಗಿದ್ದು, ದಂಡ ವಿಧಿಸಿ ಕಳುಹಿಸಬೇಕಾದ ಪೊಲೀಸ್ ಪೇದೆ ಸೂ…ಬೋ ಅನ್ನುವ ಪದ ಬಳಕೆ ಮಾಡಿದ್ದು ಮಾತ್ರವಲ್ಲದೆ, ಚಾಲಕನ ಹೆತ್ತವರಿಗೂ ಅವಾಚ್ಯ ಮತ್ತು ಅಶ್ಲೀಲ ಪದಗಳಿಂದ ನಿಂದಿಸಿದ್ದಾನೆ.
ಪುಣ್ಯ ಅಂದ್ರೆ ಪೊಲೀಸರಪ್ಪ ಅಬ್ಬರ ಚಾಲಕನ ಕ್ಯಾಮಾರದಲ್ಲಿ ಸದ್ದಿಲ್ಲದೆ ಸೆರೆಯಾಗಿತ್ತು. ಹೀಗಾಗಿ ಪೊಲೀಸ್ ಪೇದೆಯ ರೌಡಿಸಂ ಬಹಿರಂಗವಾಗಿದೆ.
Discussion about this post