ಬೆಂಗಳೂರು : ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ಜೈಲು ಪಾಲಾಗಿರುವ ಪತಿಯನ್ನು ಬಿಡಿಸಲು ಪತ್ನಿಯೂ ಡ್ರಗ್ಸ್ ಮಾರಾಟ ದಂಧೆಗಿಳಿದ ಪ್ರಕರಣವನ್ನು ಬಾಣಸವಾಡಿ ಪೊಲೀಸರು ಬೇಧಿಸಿದ್ದು, ವಿದೇಶಿ ಮಹಿಳೆಯೊಬ್ಬಳನ್ನು ಜೈಲಿಗಟ್ಟಿದ್ದಾರೆ. ಬಂಧಿತ ಮಹಿಳೆಯನ್ನು ಫಾತಿಮಾ ಒಮೇರಿ ಎಂದು ಗುರುತಿಸಲಾಗಿದೆ.
ಕೆಲ ತಿಂಗಳ ಹಿಂದೆ ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ಫಾತಿಮಾ ಪತಿಯನ್ನು ಬಂಧಿಸಿದ್ದ ಸಂಪಿಹಳ್ಳಿ ಪೊಲೀಸರು ಜೈಲಿಗೆ ಬಿಟ್ಟು ಬಂದಿದ್ದರು. ಇದಾದ ಬಳಿಕ ಪತಿಯನ್ನು ಬಿಡಿಸಲು ಪರದಾಡುತ್ತಿದ್ದ, ಫಾತಿಮಾ ಜಾಮೀನು ಕೊಡಿಸಲು ಓಡಾಡುತ್ತಿದ್ದಳು. ಕಾಸು ಹೊಂದಿಸಲು ಕಷ್ಟವಾದ ವೇಳೆ, ಗಂಡನ ದಂಧೆಯನ್ನು ಮುಂದುವರಿಸಿದಳು.
ಮಹದೇವಪುರ ನಿವಾಸಿಯಾಗಿರುವ ಫಾತಿಮಾ ತಾಂಜೇನಿಯಾದ ಪ್ರಜೆ. 2018ರಲ್ಲಿ ಪ್ರವಾಸಿ ವೀಸಾದಡಿಯಲ್ಲಿ ಭಾರತಕ್ಕೆ ಬಂದಿದ್ದಳು. ಬಳಿಕ ಬೆಂಗಳೂರಿಗೆ ಬಂದ ಆಕೆ ಮಹದೇವಪುರದಲ್ಲಿ ವಾಸವಾಗಿದ್ದಳು. ಅಲ್ಲಿಂದಲೇ ದಂಪತಿ ಡ್ರಗ್ಸ್ ವ್ಯವಹಾರ ಪ್ರಾರಂಭಿಸಿದ್ದರು.
ಇನ್ನು ಫಾತಿಮಾ ಕಡೆಯಿಂದ 1.5 ಲಕ್ಷ ಮೌಲ್ಯದ 13 ಗ್ರಾಮ ಎಂಡಿ ಕ್ರಿಸ್ಟಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
Discussion about this post