ಎಲ್ಲರೂ ಕಾತುರದಿಂದ ಎದುರು ನೋಡುತ್ತಿರುವ “ಬಬ್ರೂ” ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.
ಸುಮನ್ ನಗರ್ ಕರ್ ಪ್ರೊಡಕ್ಷನ್ಸ್ ಹಾಗೂ ಯುಗ ಕ್ರಿಯೇಷನ್ಸ್ ನಿರ್ಮಿಸಿರುವ, ಸುಜಯ್ ರಾಮಯ್ಯ ನಿರ್ದೇಶಿಸಿರುವ, ಸಂಪೂರ್ಣವಾಗಿ ಅಮೇರಿಕಾದಲ್ಲೇ ಚಿತ್ರೀಕರಣಗೊಂಡಿರುವ ಮೊತ್ತ ಮೊದಲ ಹಾಲಿವುಡ್ ಕನ್ನಡ ಚಲನಚಿತ್ರ “ಬಬ್ರೂ” ಇದೇ ಡಿಸೆಂಬರ್ ಆರರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
KRG Studios ಕರ್ನಾಟಕದಲ್ಲಿ ಹಾಗು ಕಸ್ತೂರಿ ಮೀಡಿಯಾ ಹೊರದೇಶಗಳಲ್ಲಿ ಬಿಡುಗಡೆ ಮಾಡುತ್ತಿರುವ ಈ ಚಿತ್ರದ ತಾರಾಗಣದಲ್ಲಿ ಸುಮನ್ ನಗರ್ ಕರ್, ಮಾಹಿ ಹಿರೇಮಠ್, ಪ್ರಕೃತಿ ಕಶ್ಯಪ್, ರೇ ಟೊಸ್ಟಾಡೊ, ಗಾನಾ ಭಟ್, ಸನ್ನಿ ಮೋಜಾ ಮುಂತಾದವರಿದ್ದಾರೆ.
Discussion about this post