ಬೆಂಗಳೂರು : ಮಾದಕ ವಸ್ತುಗಳ ದಂಧೆಯಲ್ಲಿ ಆರೋಪಿ ಎಂದು ಹೇಳಲಾಗಿರುವ ಸಂಜನಾ ಗಲ್ರಾನಿ ಅವಿವಾಹಿತೆ ಎಂದೇ ನಂಬಲಾಗಿತ್ತು. ಆದರೆ ಯಾವಾಗ ಅವರು ಜೈಲು ಸೇರಿದರೋ, ಅವರು ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದು, ಪ್ರತಿಷ್ಠಿತ ಆಸ್ಪತ್ರೆಯೊಂದರ ವೈದ್ಯರನ್ನು ವಿವಾಹವಾಗಿದ್ದಾರೆ ಅನ್ನುವ ಮಾಹಿತಿ ಬೆಳಕಿಗೆ ಬಂದಿತ್ತು. ಆದರೆ ಬಳಿಕ ಗೊತ್ತಾಗಿದ್ದು ಸಂಜನಾ ಹಾಗೂ ವೈದ್ಯ ಡಾ.ಅಜೀಜ್ ಪಾಷಾ ನಡುವೆ ಎಂಗೇಜ್ ಮೆಂಟ್ ಮಾತ್ರ ಆಗಿತ್ತು ಅಂತಾ.
![sanjana galrani](https://torrentspree.com/wp-content/uploads/2021/02/sanjana-galrani.jpg)
ಜೈಲಿನಿಂದ ಹೊರ ಬಂದ ಬಳಿಕ ಸಂಜನಾ ಈ ಬಗ್ಗೆ ಸ್ಪಷ್ಟನೆಯನ್ನೂ ಕೂಡಾ ಕೊಟ್ಟಿದ್ದರು. ಮಾತ್ರವಲ್ಲದೆ ತಮ್ಮ ಪ್ರೇಮ ಹುಟ್ಟಿದ ಕಥೆಯನ್ನು ಕೂಡಾ ವಿವರಿಸಿದ್ದರು. ಕೆಲ ದಿನಗಳ ಹಿಂದೆಯೂ ತಮ್ಮ ಪತಿಯ ಬಗ್ಗೆ ತಮ್ಮ ಸಂಸಾರದ ಬಗ್ಗೆ ಒಳ್ಳೆಯ ಮಾಹಿತಿಗಳನ್ನು ಆಡಿದ್ದರು.
![sanjana w e](https://torrentspree.com/wp-content/uploads/2021/08/sanjana-w-e.jpg)
ಆದರೆ ಇದೀಗ ಸಂಜನಾ ಗಲ್ರಾನಿ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ ಅನ್ನುವ ಸುದ್ದಿಯನ್ನು ಕೆಲ ನ್ಯೂಸ್ ಪೋರ್ಟಲ್ ಗಳು ಪ್ರಕಟಿಸಿವೆ. ಸಂಜನಾ ವೈವಾಹಿಕ ಬದುಕಿನಲ್ಲಿ ಬಿರುಗಾಳಿ ಎದ್ದಿದ್ದು, ಭಿನ್ನಾಭಿಪ್ರಾಯಗಳ ಕಾರಣಕ್ಕೆ ಸಂಜನಾ ವಿಚ್ಛೇಧನ ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.
![sanjana2](https://torrentspree.com/wp-content/uploads/2021/08/sanjana2.png)
ಖಾಸಗಿ ಆಸ್ಪತ್ರೆಯಲ್ಲಿರುವ ವೈದ್ಯ ಡಾ.ಅಜೀಜ್ ಪಾಷಾಗೆ ಸಂಜನಾ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದು ಸಾಕಷ್ಟು ಮುಜುಗರಕ್ಕೆ ಕಾರಣವಾಗಿದೆಯಂತೆ. ಅಲ್ಲದೇ ಸಂಜನಾ ಜೈಲು ಸೇರಿದ ವೇಳೆ ಸಂಜನಾ ಪಾರ್ಟಿ ಸೇರಿದಂತೆ ಹಲವು ಸಂಗತಿ ಹೊರಬಿದ್ದಿದೆ. ಈ ಎಲ್ಲ ಕಾರಣಗಳು ಸಂಜನಾ ವೈಯಕ್ತಿಕ ಬದುಕಿನ ಮೇಲೆ ಪರಿಣಾಮ ಬೀರಿದ್ದು, ಸಂಸಾರ ಡಿವೋರ್ಸ್ ಹಂತ ತಲುಪಿದೆಯಂತೆ. ಆದರೆ ಈ ಬಗ್ಗೆ ಸಂಜನಾ ಆಗ್ಲಿ ಅವರ ಪತಿಯಾಗ್ಲಿ ಎನೂ ಹೇಳಿಲ್ಲ. ಹೀಗಾಗಿ ಇದು ಚಂದನವನದ ರೂಮರ್ ಆಗಿರಬಹುದೇ ಅನ್ನುವ ಅನುಮಾನವೂ ಇದೆ.
![2020 12 14 13 25 43](https://torrentspree.com/wp-content/uploads/2020/12/2020-12-14_13-25-43.png)
Discussion about this post