ಅತ್ತ ಸುದೀಪ್ ಕುಕ್ಕೆ ಭೇಟಿಯ ಬೆನ್ನಲ್ಲೇ ಇತ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ. ಹಾಗೇ ಭೇಟಿ ಕೊಟ್ಟು ಕೈ ಮುಗಿದು ಹೋಗಿರುತ್ತಿದ್ರೆ ದೊಡ್ಡ ವಿಷಯವಾಗುತ್ತಿರಲಿಲ್ಲ. ಆದರೆ ದೇವಿಯ ಸನ್ನಿಧಿಯಲ್ಲಿ ಅವರು ನಡೆಸಿದ ಪೂಜೆಯೇ ಇದೀಗ ಕುತೂಹಲ ಕೆರಳಿಸಿದೆ. ಮಾತ್ರವಲ್ಲದೆ ಕೊಲ್ಲೂರು ದೇವಸ್ಥಾನದ ಭೇಟಿಯ ಬೆನ್ನಲ್ಲೇ ಚಾಮುಂಡೇಶ್ವರಿ ದೇವಿಯ ಸನ್ನಿಧಿಗೂ ಭೇಟಿ ಕೊಟ್ಟಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಗೆ ಬಂದ ದರ್ಶನ್ ನವಚಂಡಿಕಾ ಯಾಗ ನೆರವೇರಿಸಿದ್ದಾರೆ. ಚಂಡಿಕಾ ಯಾಗವನ್ನು ಹಾಗೆಲ್ಲಾ ಯಾರೂ ಕೂಡಾ ನೆರವೇರಿಸೋದಿಲ್ಲ. ಕಾಸಿದ್ದ ಮಾತ್ರಕ್ಕೆ ಅದನ್ನು ನೆರವೇರಿಸೋದು ಇಲ್ಲ. ಅದಕ್ಕೊಂದು ಉದ್ದೇಶ, ಕಾರಣ, ಸಂಕಲ್ಪವಿರುತ್ತದೆ. ದರ್ಶನ್ ದೇವಿ ದೇವಸ್ಥಾನಗಳಿಗೆ ಪದೇ ಪದೇ ಭೇಟಿ ಕೊಡುತ್ತಿರೋದನ್ನು ನೋಡಿದರೆ ಸಂಕಲ್ಪವಿದೆ ಅನ್ನುವುದು ಸತ್ಯ.
ಧಾರ್ಮಿಕ ವಿದ್ವಾಂಸರ ಪ್ರಕಾರ ದುಷ್ಟಪೀಡೆ, ಅರಿಷ್ಟ, ಶತ್ರುಬಾಧೆ, ಗ್ರಹದೋಷಗಳಿಂದ ಬಾಧಿತರಾಗಿದ್ದರೆ, ಮಾಟ, ಮಂತ್ರ, ವಶೀಕರಣದ ಪ್ರಭಾವಕ್ಕೆ ಒಳಗಾಗಿದ್ದೇವೆ ಅನ್ನಿಸಿದ್ದರೆ, ಜೀವ ಭಯ, ಮೃತ್ಯು ಭಯದಿಂದ ಬಾಧಿತರಾಗಿದ್ರೆ, ದೇವಿಯ ಕೃಪೆಗೆ ಪಾತ್ರರಾಗಬೇಕು ಅನ್ನುವ ಇಚ್ಛೆಯಿದ್ದರೆ ಈ ಯಾಗ ನಡೆಸಲಾಗುತ್ತದೆ.
ಇನ್ನು ಚಂಡಿಕಾ ಹೋಮ ನಡೆಸುವುದರಿಂದ ನಕಾರಾತ್ಮಕ ಅಂಶಗಳು ತೊಲಗಿ ಸಕಾರಾತ್ಮಕ ಚಿಂತನೆ ಬೆಳೆಯುತ್ತದೆ. ಶಾಪ, ಪೀಡೆಗಳು ಸಂಕಷ್ಟಗಳು ಮರೆಯಾಗುತ್ತವೆ. ಉತ್ತಮ ಆರೋಗ್ಯ, ಸಂಪತ್ತು, ಅಭಿವೃದ್ಧಿ ಹಾಗೂ ಶತ್ರು ಬಾಧಾ ನಿವಾರಣೆಯ ಲಾಭಗಳನ್ನು ಪಡೆಯಬಹುದಾಗಿದೆ.
ದರ್ಶನ್ ಅವರ ಜೀವನದಲ್ಲಿ ಇತ್ತೀಚೆಗೆ ನಡೆದಿರುವ ಬೆಳವಣಿಗಳನ್ನು ಗಮನಿಸಿದ್ರೆ , ಅವರು ಪೂಜೆ ನಡೆಸಿರುವುದರಿಂದ ಹಿಂದಿನ ಉದ್ದೇಶ ಹಾಗೂ ದೇವಿ ಕ್ಷೇತ್ರಗಳಿಗೆ ಅವರು ಹೋಗುತ್ತಿರುವುದ್ಯಾಕೆ ಅನ್ನುವುದು ಖಂಡಿತಾ ಗೊತ್ತಾಗುತ್ತದೆ.
Discussion about this post