ಬೆಂಗಳೂರು : ಬಹುಭಾಷಾ ನಟ ಅರ್ಜುನ್ ಸರ್ಜಾ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಅವರೇ ಮಾಹಿತಿ ನೀಡಿದ್ದು ನನಗೆ ಕೊರೋನಾ ಪಾಸಿಟಿವ್ ಬಂದಿದೆ. ನಾನು ಆರೋಗ್ಯವಾಗಿದ್ದು ಯಾರೂ ಗಾಬರಿಯಾಗಬೇಡಿ. ನನ್ನ ಸಂಪರ್ಕದಲ್ಲಿರುವಂತ ಎಲ್ಲರೂ ಕೊರೋನಾ ಪರೀಕ್ಷೆಗೆ ಒಳಗಾಗಿ ಎಂದು ಮನವಿ ಮಾಡಿದ್ದಾರೆ.
ಕಳೆದ ಎರಡು ಅಲೆಗಳ ಅಬ್ಬರದ ಅವಧಿಯಲ್ಲಿ ಅರ್ಜುನ್ ಸರ್ಜಾ ಕೊರೋನಾದಿಂದ ಪಾರಾಗಿದ್ದರು. 2020ರ ಜುಲೈ ತಿಂಗಳಲ್ಲಿ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಜೊತೆಗೆ ದ್ರುವ ಸರ್ಜಾ ದಂಪತಿ ಕೂಡಾ ಕೊರೋನಾ ಸೋಂಕಿಗೆ ತುತ್ತಾಗಿದ್ದರು.
ಇತ್ತೀಚೆಗೆ ನಟ ಕಮಲ್ ಹಾಸನ್ ಕೂಡಾ ಕೊರೋನಾ ಪಾಸಿಟಿವ್ ಆಗಿ ಕೆಲ ದಿನಗಳ ಕಾಲ ಆಶ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿದ್ದರು.
More news : ಲಸಿಕಾ ಪ್ರಮಾಣಪತ್ರದ ಮೇಲೆ ಪ್ರಧಾನಿ ಫೋಟೋ ಇದ್ರೆ ತಪ್ಪೇನು…?
ಸೋಮವಾರವಷ್ಟೇ ನಟಿಯರಾದ ಕರೀನಾ ಕಪೂರ್ ಹಾಗೂ ಅಮೃತಾ ಆರೋರಾ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಇಬ್ಬರು ನಟಿಯರೂ ಕೊರೋನಾ ನಿಯಮಗಳನ್ನು ಉಲ್ಲಂಘಿಸಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಇವರಿಬ್ಬರ ಪ್ರಾಥಮಿಕ ಮತ್ತು ದ್ವೀತಿಯ ಸಂಪರ್ಕಿತರ ಪಟ್ಟಿ ಸಿಕ್ಕಾಪಟ್ಟೆ ಉದ್ದವಿದೆ. ಹೀಗಾಗಿ ಸಾಕಷ್ಟು ಭಯ ಆವರಿಸಿದೆ.
More news : ವಿದೇಶದಿಂದ ಬಂದವರಲ್ಲಿ ಹೆಚ್ಚುತ್ತಿರುವ ಸೋಂಕು : ಸೋಂಕಿತರ ಚಿಕಿತ್ಸೆಗೆ 6 ಖಾಸಗಿ ಆಸ್ಪತ್ರೆ
ರಾಷ್ಟ್ರಕವಿ ಕುವೆಂಪು ಸೊಸೆ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಪತಿ ಇನ್ನಿಲ್ಲ
ಬೆಂಗಳೂರು : ರಾಷ್ಟ್ರಕವಿ ಕುವೆಂಪು ಅವರ ಸೊಸೆ , ಅಗ್ರಮಾನ್ಯ ಸಾಹಿತಿ ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ ಅವರು ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ.
ಸಾಹಿತಿ ಪೂರ್ಣಚಂದ್ರ ತೇಜಸ್ವಿ ನಿಧನದ ಬಳಿಕ ತೋಟದಲ್ಲಿ ( ಮೂಡಿಗೆರೆಯ ಹ್ಯಾಂಡ್ ಪೋಸ್ಟ್) ಒಬ್ಬರೇ ಇದ್ದ ರಾಜೇಶ್ವರಿ ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿನ HSR layoutನಲ್ಲಿರುವ ಮಗಳ ಮನೆಗೆ ಬಂದಿದ್ದರು. ಈ ವೇಳೆ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು ಹೀಗಾಗಿ ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆ ರಾಜಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಜ್ವರದಿಂದ ಬಳಲುತ್ತಿದ್ದ ರಾಜೇಶ್ವರಿ ತೇಜಸ್ವಿ ಅವರಿಗೆ ವೈದ್ಯರು ಎಲ್ಲಾ ಚಿಕಿತ್ಸೆಗಳನ್ನು ನೀಡಿದ್ದರು.
ಇನ್ನು ಬೆಂಗಳೂರಿನ ಪುತ್ರಿಯ ನಿವಾಸದಲ್ಲೇ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಬಳಿಕ ಮೃತದೇಹವನ್ನು ಆಸ್ಪತ್ರೆಗೆ ದೇಹದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಹೀಗಾಗಿ ಅಂತ್ಯ ಸಂಸ್ಕಾರದ ಯಾವುದೇ ವಿಧಿವಿಧಾನಗಳು ಇರೋದಿಲ್ಲ.
1937ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಜನಿಸಿದ ರಾಜೇಶ್ವರಿ ತತ್ವಶಾಸ್ತ್ರದಲ್ಲಿ ಆನರ್ಸ್ ಮತ್ತು ಎಂಎ ಪದವಿ ಮಾಡಲು ಮೈಸೂರಿನ ಮಾನಸ ಗಂಗೋತ್ರಿಗೆ ಬಂದಿದ್ದರು. ಆಗ ಕೆಪಿ ಪೂರ್ಣಚಂದ್ರ ತೇಜಸ್ವಿ ಪರಿಚಯವಾಗಿ ಪರಸ್ಪರ ಪ್ರೀತಿಸಿ. 1966ರಲ್ಲಿ ಮಂತ್ರ ಮಾಂಗಲ್ಯ ಕಲ್ಪನೆಯಂತೆ ಮದುವೆಯಾಗಿದ್ದರು.
ರಾಜೇಶ್ವರಿಯವರು ‘ನನ್ನ ತೇಜಸ್ವಿ ಮತ್ತು ನಮ್ಮ ಮನೆಗೂ ಬಂದರು ಗಾಂಧೀಜಿ ಅನ್ನುವ ಪುಸ್ತಕ ಬರೆದಿದ್ದು, ಆ ಪೈಕಿ ನನ್ನ ತೇಜಸ್ವಿ ಐದು ಮುದ್ರಣ ಕಂಡಿದೆ.ರಾಜೇಶ್ವರಿ ತೇಜಸ್ವಿಯವರು ಸುಶ್ಮಿತಾ ಮತ್ತು ಈಶಾನ್ಯೆ ಎಂಬ ಇಬ್ಬರು ಹೆಣ್ಣುಮಕ್ಕಳನ್ನು ಆಗಲಿದ್ದು ಮಕ್ಕಳು ಸಾಫ್ಟ್ವೇರ್ ಇಂಜಿನಿಯರ್ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Discussion about this post