ಬೆಂಗಳೂರು ಚಿಕ್ಕಮಗಳೂರು ಹೆದ್ದಾರಿಯಲ್ಲಿ ನಟ ಜಗ್ಗೇಶ್ ಪುತ್ರ ಯತಿರಾಜ್ ಕಾರು ಅಪಘಾತವಾಗಿದ್ದು, ಈ ವೇಳೆ ಯತಿರಾಜ್ ನಿಲ್ಲಲಾಗದೆ ಕುಸಿದು ಬಿದ್ದಿದ್ದರು ಎಂದು ಗೊತ್ತಾಗಿದೆ.
ದುರ್ಘಟನೆಯ ಬಳಿಕ ಯತಿರಾಜ್ ಅವರನ್ನು ಚಿಕ್ಕಬಳ್ಳಾಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಪಡೆದು ಹೊರ ಬಂದಿರುವ ಯತಿರಾಜ್, ನನ್ನ ಆರೋಗ್ಯ ಚೆನ್ನಾಗಿದ್ದು, ನನಗೇನು ಆಗಿಲ್ಲ ಅಂದಿದ್ದಾರೆ.
ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯತಿರಾಜ್ ಅವರಿಂಗ ಮಾಹಿತಿ ಸಂಗ್ರಹಿಸಿದ್ದಾರೆ. ಇದಾದ ಬಳಿಕ ಯತಿರಾಜ್ ಬೆಂಗಳೂರು ಕಡೆ ಹಿಂತಿರುಗಿದ್ದಾರೆ.
ಈ ನಡುವೆ ಅಪಘಾತದ ಬಳಿಕದ ಮೊಬೈಲ್ ನಲ್ಲಿ ಸೆರೆಯಾದ ದೃಶ್ಯಗಳು ಇದೀಗ ಓಡಾಡುತ್ತಿದ್ದು. ಅದರಲ್ಲಿ ಅಪಘಾತ ನಡೆದ ಬಳಿಕ ಸ್ಥಳೀಯರು ಯತಿರಾಜ್ ಅವರನ್ನು ಒಂದೆಡೆ ಕೂರಿಸಿದ್ದಾರೆ. ಬಳಿಕ ಯತಿರಾಜ್ ಅವರೇ ತಮ್ಮ ಮೊಬೈಲ್ ಕೊಟ್ಟು ಸಂಬಂಧಿಕರಿಗೆ ಕರೆ ಮಾಡಿ ಅಂದಿದ್ದಾರೆ.
ಈ ವೇಳೆ ಫೋನ್ ನಲ್ಲಿ ಮಾತನಾಡಲಾಗದ ಯತಿರಾಜ್, ಎದ್ದು ನಡೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಸ್ಥಳೀಯರು ಕೂಡಾ ಸಹಾಯ ಮಾಡಿದ್ದಾರೆ. ಆದರೆ ತುಂಬಾ ದೂರ ನಡೆಯಲಾಗದ ಯತಿರಾಜ್ ಕುಸಿದು ಬಿದ್ದಿದ್ದಾರೆ.
Discussion about this post