ದ್ವಾದಶ ರಾಶಿಗಳ ಫಲಾಫಲ ಪ್ರಕಾರ ಕೆಲವೊಂದು ರಾಶಿಗಳಿಗೆ ಸಂಕಷ್ಟ ಎಂದು ಹೇಳಲಾಗಿದೆ. ಹಾಗಂತ ಮನೆಯಲ್ಲಿ ಕೂತರೇ ಪರಿಹಾರ ಸಾಧ್ಯವೇ. ಸಂಕಷ್ಟದ ಫಲ ಹೇಳಿದವರು ಪರಿಹಾರವನ್ನೂ ಹೇಳಿದ್ದಾರೆ. ಹಾಗಾದ್ರೆ ಯಾರು ಯಾವ ದೇವರನ್ನು ಪೂಜಿಸಬೇಕು weekly horoscope in kannada
ಮೇಷ
ರಾಶಿಗೆ ಶುಭ ಫಲವಿದೆ. ಹಾಗಿದ್ದರೂ ಮಾತು ಹೆಚ್ಚಾದ್ರೆ ಕಲಹ ಸಾಧ್ಯತೆ. ಹೀಗಾಗಿ ಮೌನ ಬಂಗಾರ ಅನ್ನುವುದನ್ನು ಮರೆಯದಿರಿ. ಸುಬ್ರಹ್ಮಣ್ಯ ದೇವರನ್ನು ಪೂಜಿಸಿದರೆ ನಿಮ್ಮ ಸಮಯ ಸುಲಭವಾಗಿ ಮುಂದೆ ಸಾಗುತ್ತದೆ
ವೃಷಭ
ಮುಂದಿನ ಸಂವತ್ಸರದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಇಂದಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಸೌಂದರ್ಯಲಹರಿ ಪಾರಾಯಣದಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗಲಿದೆ
ಮಿಥುನ
ಆಸೆ ಇರಬೇಕು. ಹಾಗಂತ ಆಗೋದಿಲ್ಲ ಅಂತಾ ಗೊತ್ತಿದ್ದರೂ ಆಸೆ ಪಡುವುದು ತಪ್ಪು ತಾನೇ – ಲಕ್ಷ್ಮಿ ನರಸಿಂಹ ಸ್ವಾಮಿಯ ಪ್ರಾರ್ಥನೆಯ ಮೂಲಕ ನಿಮ್ಮ ಪ್ರಯತ್ನದಲ್ಲಿ ಫಲ ಕಾಣಬಹುದು
ಕಟಕ
ನಿಮಗಿದು ಮನೋಕ್ರಾಂತಿಯ ಕಾಲ. ಸೂರ್ಯನನ್ನು ಒಂದು ತಿಂಗಳ ಕಾಲ ನವಗ್ರಹ ಸಂಹಿತವಾಗಿ ಆದಿತ್ಯ ಹೃದಯಪಾರಾಯಣ ಮಾಡಿದರೆ ಉತ್ತಮ ಫಲ ಸಿಗಲಿದೆ
ಸಿಂಹ
ನಿಮ್ಮ ವಿದ್ಯೆಗೆ ಬೆಲೆ ಸಿಗುತ್ತದೆ ಅನ್ನುವುದಾದ್ರೆ ಮಾತ್ರ ಸಲಹೆ ಮಾರ್ಗದರ್ಶನ ಕೊಡಿ. ಎಲ್ಲರಿಗೂ ಬುದ್ದಿವಾದ ಹೇಳುವ ಕೆಲಸ ಮಾಡಬೇಡಿ. ಸೂರ್ಯೋಷ್ಟೋತ್ತರ ನಂತರ ಶಿವನಿಗೆ ರುದ್ರಾಭಿಷೇಕ ಮಾಡಿ
ಕನ್ಯಾ
ಅನ್ಯರ ಋಣವನ್ನು ತೀರಿಸಲು ಪ್ರಯತ್ನಿಸಿ. ಅನ್ಯರ ಶಾಪಕ್ಕೆ ಗುರಿಯಾಗಬೇಡಿ – ಮಹಾವಿಷ್ಣುವಿನ ಕೃಪೆಗಾಗಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ
ತುಲಾ
ಪ್ರಯತ್ನಗಳು ಶದ್ಧಾ ಮತ್ತು ಭಕ್ತಿಯಿಂದ ಕೂಡಿದ್ದರೆ ಒಳ್ಳೆಯ ಫಲ ಸಿಗುತ್ತದೆ – ನಿತ್ಯ ತುಳಸಿಯನ್ನು ಪೂಜಿಸಿ ನಿಮ್ಮ ಕೆಲಸಗಳು ಸುಲಲಿತವಾಗಿ ಸಾಗುತ್ತದೆ
ವೃಶ್ಚಿಕ
ನಿಮ್ಮ ಮೇಲೆ ಈ ಹಿಂದೆ ಬಂದ ಅಪವಾದದ ಮಾನಸಿಕ ಖಿನ್ನತೆಯನ್ನು ಮೊದಲು ದೂರ ಸರಿಸಿ. ಆಗಿದ್ದು ಆಗಿ ಹೋಯ್ತು. ಹಣ ಖರ್ಚು ಮಾಡುವಾಗ ಎಚ್ಚರವಿರಲಿ. ನಿತ್ಯ ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ರೂಢಿಸಿಕೊಳ್ಳಿ
ಧನು
ಕೆಲಸದಲ್ಲಿ ಏಕಲವ್ಯನಂತೆ ಗುರಿ ಇರಲಿ. ನಿಂದನೆಗೆ ಗುರಿಯಾಗುವ ಕೆಲಸ ಮಾಡಬೇಡಿ. ಮಾಡಿದ ಪಾಪಕ್ಕೆ ದತ್ತಚರಿತೆಯನ್ನು ನಿತ್ಯ ಪಾರಾಯಣ ಮಾಡಿ
ಮಕರ
ಶನಿಯನ್ನು ಪೂಜಿಸುವ ಮೂಲಕ ಸಂತೋಷದ ಗಣಿಯನ್ನು ಪಡೆಯಿರಿ. ಶನಿ ಅಷ್ಟೋತ್ತರ ಪಾರಾಯಣ ನಿಮ್ಮ ಸಂಕ,ಟಗಳನ್ನು ದೂರ ಮಾಡಲಿದೆ
ಕುಂಭ
ಮಾತನಾಡಿದರೆ ಮಾತಿಗೆ ಬೆಲೆ ಇರಬೇಕು. ಹಾಗೆ ಮಾತನಾಡಿ. ನೀವು ಹೇಳಿದಂತೆ ಎಲ್ಲವೂ, ಎಲ್ಲರೂ ನಡೆಯಬೇಕು ಅನ್ನುವುದನ್ನು ಬಿಡಿ. ಶಿವತ್ರಿಶತಿ ಪಾರಾಯಣ ಮಾಡಿ. ಶಿವ ದೇವಾಲಯದಲ್ಲಿ ಅಶ್ವಥ ವೃಕ್ಷ ಪ್ರದಕ್ಷಿಣೆ ಕೈಗೊಳ್ಳಿ
ಮೀನ
ನಡೆ ನುಡಿ ಹಿತವಾಗಿರಲಿ. ದತ್ತಾತ್ರೇಯನ ಗುರು ಚರಿತೆಯ 14ನೇ ಅಧ್ಯಾಯ ಓದಿ ಭ್ರಮರಾಂಭ ಸಹಿತ ಮಲ್ಲಿಕಾರ್ಜುನನ್ನು ಪ್ರಾರ್ಥಿಸಿ
Discussion about this post