ಮೇಷ
ಇಂದು ಆರೋಗ್ಯ ಪರಿಪೂರ್ಣವಾಗಿರುತ್ತದೆ. ಕೊಟ್ಟಿರುವ ಹಣ ಇಂದು ನಿಮಗೆ ಮರಳಿ ಸಿಗಬಹುದು. ಪ್ರೇಮ ಜೀವನ ಇಂದು ಒಂದು ಸುಂದರ ತಿರುವನ್ನು ತೆಗೆದುಕೊಳ್ಳುತ್ತದೆ. ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ಹೊಸ ತಂತ್ರಗಳಿಗೆ ಹೊಂದಿಕೊಳ್ಳಿ
ವೃಷಭ
ಇಂದು ಸಂತಸದ ಪ್ರಯಾಣದ ಸಾಧ್ಯತೆ. ಸಾಮಾಜಿಕ ಕಾರ್ಯಕ್ರಮಗಳು ನಿಮಗೆ ಸಂತೋಷ ತರಲಿದೆ. ಹಣಕಾಸು ಲಾಭಗಳು ವಿವಿಧ ಮೂಲಗಳಿಂದ ಬರುವ ಸಾಧ್ಯತೆ. ಮನದನ್ನೆಯ ವಿಚಿತ್ರ ನಡವಳಿಕೆ ನಿಮ್ಮನ್ನು ಘಾಸಿಗೊಳಿಸುತ್ತದೆ. ಮನೆಯಿಂದ ಹೊರಗೆ ವಾಸಿಸುವವರು, ಇಂದು ತಮ್ಮ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ.
ಮಿಥುನ
ಇತರರನ್ನು ಟೀಕಿಸುವ ನಿಮ್ಮ ಅಭ್ಯಾಸದಂದಾಗಿ ಇಂದು ನೀವೇ ಕೆಲವು ಟೀಕೆಗಳನ್ನು ಎದುರಿಸುವ ಸಾಧ್ಯತೆಗಳಿವೆ. ನಿಮ್ಮ ಹಾಸ್ಯಪ್ರಜ್ಞೆ ಜಾಗೃತವಾಗಿರಲಿ. ಟೀಕೆಯನ್ನು ಎದುರಿಸುವ ಸಾಮರ್ಥ್ಯ ಹೆಚ್ಚಿಸಿಕೊಳ್ಳಿ. ನಿಮ್ಮ ಆಪ್ತರೊಂದಿಗೆ ಜಗಳವಾಗುವ ಸಾಧ್ಯತೆ ಮತ್ತು ವಿಷಯ ನ್ಯಾಯಾಲಯದವರೆಗೂ ಹೋಗಬಹುದು. ಹೀಗಾಗಿ ನಿಮ್ಮ ಹಣ ಖರ್ಚಾಗುವ ಸಾಧ್ಯತೆ.
ಕರ್ಕಾಟಕ
ನಿಮ್ಮ ಅಪಾರ ವಿಶ್ವಾಸ ಮತ್ತು ಸುಲಭದ ಕೆಲಸದ ವೇಳಾಪಟ್ಟಿ ನಿಮ್ಮ ವಿಶ್ರಾಂತಿಗೆ ಸಾಕಷ್ಟು ಸಮಯ ನೀಡುತ್ತದೆ. ಇಂದಿನಂತೆ ಮುಂದಿನ ದಿನಗಳಲ್ಲಿಯೂ ಯೋಜನೆ ಹಾಕಿಕೊಂಡೇ ಕೆಲಸಕ್ಕೆ ಮುಂದಡಿ ಇಡಿ. ಜೂಜು ಸೇರಿದಂತೆ ಬೆಟ್ಟಿಂಗ್ ಕೆಲಸಗಳಿಗೆ ಕೈ ಹಾಕಬೇಡಿ. ನಷ್ಟ ಕಟ್ಟಿಟ್ಟ ಬುತ್ತಿ. ಸ್ನೇಹಿತರೊಂದಿಗೆ ಅಮೂಲ್ಯ ಕ್ಷಣಗಳನ್ನು ಹಾಳುಮಾಡಬೇಡಿ. ಸ್ನೇಹಿತರು ಮುಂಬರುವ ಸಮಯದಲ್ಲೂ ಸಿಗಬಹುದು ಆದರೆ ಅಧ್ಯಯನಕ್ಕಾಗಿ ಇದೇ ಸಮಯ ಅತ್ಯುತ್ತಮವಾಗಿದೆ.
ಸಿಂಹ
ಕೆಲಸದ ಒತ್ತಡ ಮತ್ತು ಮನೆಯಲ್ಲಿನ ಅಪಶ್ರುತಿ ಸ್ವಲ್ಪ ಉದ್ವೇಗ ತರಬಹುದು. ಆರ್ಥಿಕ ಲಾಭದ ಸಾಧ್ಯತೆ. ಕೆಲಸದ ಸ್ಥಳದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲು ನೀವು ಕೆಲಸ ಮಾಡುವ ವಿಧಾನವನ್ನು ನೋಡುವ ಅವಶ್ಯಕತೆಯಿದೆ. ತಪ್ಪಿದ್ರೆ ಬಾಸ್ ದೃಷ್ಟಿಯಲ್ಲಿ ನೀವು ಕೆಟ್ಟದಾಗಿರುತ್ತೀರಿ. ನಿಮ್ಮ ನ್ಯೂನತೆಗಳನ್ನು ನೀವು ಗುರುತಿಸಿ ಸರಿ ಮಾಡಿಕೊಳ್ಳಿ.
ಕನ್ಯಾ
ಮನೆಯಲ್ಲಿ ಕೆಲಸ ಮಾಡುವಾಗ ವಿಶೇಷ ಎಚ್ಚರ ವಹಿಸಿ. ಮನೆ ಬಳಕೆಯ ವಸ್ತುಗಳ ಬಗ್ಗೆ ಅಸಡ್ಡೆ ಬೇಡ. ಅಸಡ್ಡೆ ಮಾಡಿದ್ರೆ ನಿಮಗೆ ಸಮಸ್ಯೆ ಬರಲಿದೆ. ಅಗತ್ಯವಿಲ್ಲದೆ ಹಣವನ್ನು ಖರ್ಚು ಮಾಡುತ್ತಿದ್ದ ನೀವು ಎಚ್ಚೆತ್ತುಕೊಳ್ಳಿ. ಉಳಿತಾಯದ ಬಗ್ಗೆ ಯೋಚಿಸಿ. ಸಾಮಾಜಿಕ ಕಾರ್ಯಗಳಿಗೆ ಹಾಜರಾಗಲು ಅವಕಾಶ ಸಿಕ್ರೆ ಪಾಲ್ಗೊಳ್ಳಿ. ಇದರಿಂದ ಪ್ರಭಾವಿ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕ ಬೆಳೆಯಲಿದೆ.
ತುಲಾ
ನೀವು ವಿರಾಮದ ಸಂತೋಷವನ್ನು ಅನುಭವಿಸಲಿದ್ದೀರಿ. ಇಂದು ನಿಮಗೆ ಯಾವುದೋ ಅಜ್ಞಾತ ಮೂಲದಿಂದ ಹಣ ಬರಲಿದೆ. ಇದರಿಂದ ನಿಮ್ಮ ಅನೇಕ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಸಾಮಾಜಿಕ ಕೂಟಗಳಲ್ಲಿ ನಿಮ್ಮ ಹಾಸ್ಯದ ಮನೋಸ್ಥಿತಿ ನಿಮ್ಮನ್ನು ಜನಪ್ರಿಯಗೊಳಿಸುತ್ತದೆ. ನಿಮ್ಮ ಸಂಗಾತಿಯ ಕುಟುಂಬದ ಸದಸ್ಯರ ಅಡ್ಡಿಯ ಕಾರಣದಿಂದ ನಿಮ್ಮ ದಿನ ಸ್ವಲ್ಪ ಏರುಪೇರಾಗಬಹುದು. ನಿಮ್ಮ ಹಿರಿಯನ್ನು ಲಘುವಾಗಿ ತೆಗೆದುಕೊಳ್ಳಬೇಡಿ.
ವೃಶ್ಚಿಕ
ನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ಹಣಕಾಸು ಖಂಡಿತವಾಗಿಯೂ ವೃದ್ಧಿಯಾಗುತ್ತದೆ. ಆದರೆ ಅದೇ ಸಮಯದಲ್ಲಿ ಖರ್ಚು ಕೂಡಾ ಹೆಚ್ಚಾಗಲಿದೆ. ನೀವು ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಹಿರಿಯ ಸಹೋದ್ಯೋಗಿಗಳು ಮತ್ತು ಸಂಬಂಧಿಗಳ ಬೆಂಬಲ ನಿಮಗೆ ಇಂದು ಸಿಗಲಿದೆ.
ಧನು
ನಿಮ್ಮ ಭರವಸೆ ಒಂದು ಸಮೃದ್ಧ, ಸೂಕ್ಷ್ಮ ಪರಿಮಳಯುಕ್ತ ಮತ್ತು ಬೆರಗುಗೊಳಿಸುವ ಹೂವಿನ ಹಾಗೆ ಅರಳುತ್ತದೆ. ನಿಮ್ಮ ಸಹೋದರ-ಸಹೋದರಿಯರಲ್ಲಿ ಒಬ್ಬರು ಇಂದು ನಿಮ್ಮಿಂದ ಹಣವನ್ನು ಎರವಲು ಪಡೆಯಬಹುದು, ನೀವು ಅವರಿಗೆ ಹಣವನ್ನು ಸಾಲವಾಗಿ ಕೊಡುತ್ತೀರಿ ಆದರೆ ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ನಿಮ್ಮ ಹಠಮಾರಿ ವರ್ತನೆ ನಿಮ್ಮ ಹತ್ತಿರದ ಸ್ನೇಹಿತರು ಹಾಗೂ ಮನೆಯಲ್ಲಿರುವವರಿಗೂ ನೋವುಂಟುಮಾಡುತ್ತದೆ.
ಮಕರ
ಪತ್ನಿಯ ವ್ಯವಹಾರಗಳಲ್ಲಿ ಮೂಗು ತೂರಿಸುವುದು ಅವಳಿಗೆ ಕೋಪ ತರಬಹುದಾದ್ದರಿಂದ ಹಾಗೆ ಮಾಡಬೇಡಿ. ನಿಮ್ಮ ಕೆಲಸ ನೋಡಿಕೊಳ್ಳುವುದು ಉತ್ತಮ. ಆದಷ್ಟು ಕಡಿಮೆ ಹಸ್ತಕ್ಷೇಪ ಮಾಡಿ, ಇಲ್ಲದಿದ್ದರೆ ಅದು ಅವಲಂಬನೆಯನ್ನು ಉಂಟುಮಾಡಬಹುದು. ನಿಮ್ಮ ಅಮೂಲ್ಯ ವಸ್ತುಗಳ ಬಗ್ಗೆ ಗಮನ ಹರಿಸಿ ಅವುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಪ್ರೀತಿಯ ಜೀವನವು ಇಂದು ಉತ್ತಮವಾಗಿರುತ್ತದೆ ನೀವು ಸ್ನೇಹಿತರೊಬ್ಬನೊಂದಿಗೆ ಇಂದು ಸಮಯವನ್ನು ಕಳೆಯಬಹುದು ಆದರೆ ಈ ಸಮಯದಲ್ಲಿ ನೀವು ಮದ್ಯಪಾನ ಸೇವಿಸುವುದನ್ನು ತಪ್ಪಿಸಬೇಕು.
ಕುಂಭ
ಬೆಂಬಲ ನೀಡುವ ಸ್ನೇಹಿತರು ನಿಮ್ಮನ್ನು ಸಂತೋಷವಾಗಿರಿಸುತ್ತಾರೆ. ನೀವು ಅತ್ಯಂತ ಅನಿರೀಕ್ಷಿತ ಮೂಲಗಳಿಂದ ಗಳಿಕೆಯ ಸಾಧ್ಯತೆಯನ್ನು ಹೊಂದಿದ್ದೀರಿ. ಸಮಯ ವ್ಯರ್ಥ ಮಾಡದೇ ಜೀವನದ ಪಾಠಗಳನ್ನು ಕಲಿಯಲು ಪ್ರಯತ್ನಿಸಿ. ಹತ್ತಿರದ ಸಂಬಂಧಿಕರು, ಸಹೋದ್ಯೋಗಿಗಳೊಂದಿಗೆ ಹಲವಾರು ಭಿನ್ನಾಭಿಪ್ರಾಯಗಳು ಉದ್ಭವಿಸಬಹುದು. ಹೀಗಾಗಿ ಇಂದು ನಿಮಗೆ ಒತ್ತಡ ತುಂಬಿದ ದಿನ.
ಮೀನ
ಕೆಲವು ಹಿನ್ನಡೆ ಎದುರಿಸುವ ಸಾಧ್ಯತೆಯಿದೆ. ಧೃತಿಗೆಡಬೇಡಿ ಹಾಗೂ ನಿರೀಕ್ಷಿತ ಫಲಿತಾಂಶ ಪಡೆಯಲು ಕಠಿಣ ಪರಿಶ್ರಮಪಡಿ. ಈ ಹಿನ್ನಡೆಗಳು ನಿಮ್ಮ ಯಶಸ್ಸಿನ ಸೋಪಾನಗಳಾಗಿರಲಿ. ಬಿಕ್ಕಟ್ಟಿನ ಸಮಯದಲ್ಲಿ ಸಂಬಂಧಿಗಳೂ ಸಹಾಯ ಮಾಡುತ್ತಾರೆ. ನಿಮ್ಮ ಖರ್ಚುಗಳನ್ನು ನಿಯಂತ್ರಿಸಲು ಮತ್ತು ಕೇವಲ ಅಗತ್ಯವಾದ ವಸ್ತುಗಳ ಮಾತ್ರ ಖರೀದಿಸಲು ಪ್ರಯತ್ನಿಸಿ.
Discussion about this post