ಮೇಷ
ನಿಮ್ಮ ಚೈತನ್ಯ ಕುಸಿದಂತೆ ಭಾಸವಾಗುತ್ತಿದೆ. ಹೀಗಾಗಿ ವಿಶ್ರಾಂತಿ ಪಡೆಯಿರಿ. ನ್ಯಾಯಾಲಯದ ಕಾರ್ಯಗಳಲ್ಲಿ ಜಯ, ಧನ ಲಾಭ. ಕಚೇರಿಯಲ್ಲಿ ಸಂತೋಷದ ಸುದ್ದಿಯೊಂದು ಕೇಳುವಿರಿ. ನಿಮ್ಮ ಸಂಗಾತಿಯ ಪ್ರೀತಿಗಾಗಿ ನೀವು ಹಂಬಲಿಸುತ್ತಿದ್ದಲ್ಲಿ, ಅದು ನಿಮಗೆ ಇಂದು ಲಭಿಸಲಿದೆ
ವೃಷಭ
ಯೋಜಿತ ಕೆಲಸದಲ್ಲಿ ಯಶಸ್ಸು ಸಾಧಿಸಲು ಸುದಿನ. ಅದಕ್ಕಾಗಿ ನಿಮ್ಮ ಆಲೋಚನೆಗಳನ್ನು ಬದಲಾಯಿಸಿಕೊಳ್ಳಿ. ನಿಮ್ಮ ಸ್ನೇಹಿತರೊಬ್ಬರು ಇಂದು ದೊಡ್ಡ ಮೊತ್ತದ ಸಾಲ ಕೇಳಬಹುದು, ಹಣ ಕೊಟ್ಟರೆ, ನೀವು ಆರ್ಥಿಕ ಸಂಕಷ್ಟಕ್ಕೆ ಒಳಗಾಗುವಿರಿ. ಉದ್ಯೋಗದಲ್ಲಿರುವವರು ಕಚೇರಿಯಲ್ಲಿ ಬುದ್ದಿವಂತಿಕೆಯಿಂದ ನಡೆದುಕೊಳ್ಳಿ.
ಮಿಥುನ
ಮದ್ಯಪಾನದ ಅಭ್ಯಾಸವಿದ್ದಲ್ಲಿ ಅದನ್ನು ತ್ಯಜಿಸಿ ಇದರಿಂದ ನಿಮಗೆ ಭವಿಷ್ಯದಲ್ಲಿ ತೊಂದರೆ ಇರಲಿದೆ. ಎಲ್ಲರ ಬೇಡಿಕೆಗಳನ್ನೂ ಪೂರೈಸಲು ಪ್ರಯತ್ನಿಸಿದಲ್ಲಿ ನೀವು ಸೋಲಿನ ಕಡೆ ಮುಖ ಮಾಡುತ್ತೀರಿ. ಪ್ರತಿಯೊಂದು ವಿಷಯದಲ್ಲಿ ಪ್ರೀತಿಯನ್ನು ತೋರಿಸುವುದು ಸರಿಯಿಲ್ಲ. ಇದು ನಿಮ್ಮ ಸಂಬಂಧವನ್ನು ಸುಧಾರಿಸುವ ಬದಲು ಹಾಳುಮಾಡುತ್ತದೆ.
ಕರ್ಕಾಟಕ
ನಿಮ್ಮ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಬ್ಯಾಂಕ್ ವ್ಯವಹರಗಳಲ್ಲಿ ಕಾಳಜಿ ವಹಿಸಿ. ಮಕ್ಕಳೊಂದಿಗೆ ಸಮಯ ಕಳೆಯುವುದು ಮುಖ್ಯ. ಆಸಕ್ತಿದಾಯಕ ಪತ್ರಿಕೆ ಅಥವಾ ಕಾದಂಬರಿಯನ್ನು ಓದುವ ಮೂಲಕ ಇಂದಿನ ದಿನವನ್ನು ನೀವು ಉತ್ತಮವಾಗಿ ಕಳೆಯಿರಿ
ಸಿಂಹ
ನಿಮ್ಮ ಬಗ್ಗೆ ನಿಮಗೆ ಉತ್ತಮ ಅಭಿಪ್ರಾಯ ಬರಲು ಕೆಲಸಗಳನ್ನು ಮಾಡಲು ಇಂದು ಅದ್ಭುತ ದಿನ. ಇತರರ ಮೇಲೆ ಪ್ರಭಾವ ಬೀರಲು ವೆಚ್ಚ ಮಾಡಬೇಡಿ. ಪ್ರೇಮಿಗಳು ಕುಟುಂಬದ ಭಾವನೆಗಳ ಬಗ್ಗೆ ತುಂಬ ಕಾಳಜಿ ಹೊಂದಿರುತ್ತಾರೆ. ಪಾಲುದಾರರು ನಿಮ್ಮ ಹೊಸ ಯೋಜನೆಗಳು ಮತ್ತು ಸಾಹಸಗಳ ಬಗ್ಗೆ ಉತ್ಸಾಹ ತೋರಿಸುತ್ತಾರೆ. ನಿಮ್ಮ ಮನೆಯ ಸದಸ್ಯರು ನಿಮ್ಮ ಏಕಾಗ್ರತೆಗೆ ಭಂಗ ತರಬಹುದು
ಕನ್ಯಾ
ನಿಮ್ಮ ದೈಹಿಕ ಬಲವನ್ನು ವೃದ್ಧಿಸಲು ಕ್ರೀಡೆಯಲ್ಲಿ ನೀವು ಸಮಯ ಕಳೆಯುವ ಅಗತ್ಯವಿದೆ. ಕೊಟ್ಟಿರುವ ಹಣ ಇಂದು ನಿಮಗೆ ಮರಳಿ ಸಿಗಬಹುದು. ಸಕಾರಾತ್ಮಕವಾಗಿರುವ ಮತ್ತು ಬೆಂಬಲ ನೀಡುವ ಸ್ನೇಹಿತರೊಂದಿಗೆ ಕಾಲ ಕಳೆಯುವಿರಿ, ಪ್ರೀತಿಪಾತ್ರರಿಂದ ಉಡುಗೊರೆ ಸಿಗಬಹುದು
ತುಲಾ
ನಿಮ್ಮ ಮನೋಬಲದ ಕೊರತೆ ನಿಮ್ಮನ್ನು ಭಾವನಾತ್ಮಕ ಮತ್ತು ಮಾನಸಿಕವಾಗಿ ಬಲಿಪಶುವನ್ನಾಗಿ ಮಾಡಬಹುದು. ಕುಟುಂಬದ ಸ್ತ್ರೀ ಸದಸ್ಯರ ಆರೋಗ್ಯ ನಿಮ್ಮ ಚಿಂತೆಗೆ ಕಾರಣವಾಗಬಹುದು. ಬಿಡುವಿನ ವೇಳೆಯಲ್ಲಿ ನೀವು ಭವಿಷ್ಯದ ಕೆಲಸಗಳ ಬಗ್ಗೆ ಚಿಂತಿಸಿ. ವೈವಾಹಿಕ ಜೀವನದಲ್ಲಿ ನಿಮಗೆ ಇಂದು ಅತ್ಯುತ್ತಮ ದಿನ
ವೃಶ್ಚಿಕ
ನಿಮ್ಮ ಅತ್ಯಂತ ಪ್ರೀತಿಯ ಕನಸು ನನಸಾಗುತ್ತದೆ. ವಿದೇಶಿ ಸಂಪರ್ಕಗಳನ್ನು ಹೊಂದಿರುವ ವ್ಯಾಪಾರಿಗಳಿಗೆ ಇಂದು ಹಣ ನಷ್ಟವಾಗುವ ಸಾಧ್ಯತೆ. ಇಂದು ನಿಮ್ಮ ಕೆಲಸದ ಸ್ಥಳದಲ್ಲಿ ನಿಮಗೆ ತೊಂದರೆ ಕಟ್ಟಿಟ್ಟಬುತ್ತಿ. ನಿಮ್ಮ ಸಂಗಾತಿ ನಿಜವಾಗಿಯೂ ಒಬ್ಬ ದೇವತೆ. ನಂಬಿಕೆಯಿಲ್ಲವೇ? ಇಂದು ಅದು ನಿಮ್ಮ ಅನುಭವಕ್ಕೆ ಬರಲಿದೆ
ಧನು
ಇಂದು ನಿಮ್ಮ ತಂದೆ ಅಥವಾ ತಾಯಿ ಯಾರಾದರೂ ಒಬ್ಬರು ನೀವು ಹಣವನ್ನು ಸಂಗ್ರಹಿಸುವ ಬಗ್ಗೆ ಉಪನ್ಯಾಸಗಳನ್ನು ನೀಡಬಹುದು, ನೀವು ಅವರ ಮಾತುಗಳನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿದೆ. ಹಗಲುಗನಸು ನಿಮ್ಮ ಪತನಕ್ಕೆ ಕಾರಣವಾಗುತ್ತದೆ. ಇತರರು ನಿಮ್ಮ ಕೆಲಸ ಮಾಡುತ್ತಾರೆಂದು ನಿರೀಕ್ಷಿಸಬೇಡಿ.
ಮಕರ
ಗರ್ಭಿಣಿಯರು ನಡೆದುಕೊಂಡು ಹೋಗುವಾಗ ವಿಶೇಷ ಕಾಳಜಿ ವಹಿಸಬೇಕು. ಧೂಮಪಾನ ಮಾಡುವವರಿಂದ ದೂರವಿರಿ, ಬಾಕಿಯಿರುವ ಮನೆಯ ಕೆಲಸ ಮುಗಿಸಲು ನಿಮ್ಮ ಸಂಗಾತಿಯ ಜೊತೆಗೆ ಸಿದ್ದರಾಗಿ ಈ ರಾಶಿಯ ಹಿರಿಯರು ತಮ್ಮ ಹಳೆಯ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ,
ಕುಂಭ
ಹಳೆಯ ರೋಗ ಇಂದು ನಿಮ್ಮನ್ನು ಕಾಡಬಹುದು. ಇದರ ಕಾರಣದಿಂದ ನೀವು ಆಸ್ಪತ್ರೆಗೂ ಹೋಗಬೇಕಾಗಬಹುದು ಮತ್ತು ನಿಮ್ಮ ಸಾಕಷ್ಟು ಹಣವು ಸಹ ಖರ್ಚು ಆಗಬಹುದು. ಹಠಾತ್ ಪ್ರಣಯ ಪ್ರಸಂಗಗಳು ನಿಮ್ಮನ್ನು ಗೊಂದಲಕ್ಕೀಡು ಮಾಡಬಹುದು. ಜೀವನದಲ್ಲಿ ನಡೆಯುತ್ತಿರುವ ಅಡಚಣೆಗಳ ನಡುವೆ ಇಂದು ನಿಮಗಾಗಿ ನೀವು ಸಮಯ ಮಾಡಿಕೊಲ್ಳಿ. ಸಂಗಾತಿಯೊಂದಿಗಿನ ಅನೇಕ ದಿನಗಳ ಜಗಳಕ್ಕೆ ಇಂದು ಬ್ರೇಕ್ ಬೀಳಲಿದೆ.
ಮೀನ
ಮಕ್ಕಳ ಜೊತೆ ನಿಮ್ಮ ಅಮೂಲ್ಯ ಸಮಯ ಕಳೆಯುತ್ತೀರಿ, ಪ್ರೀತಿಯಲ್ಲಿ ಸಂತೋಷವನ್ನು ಅನುಭವಿಸುತ್ತೀರಿ. ಕೈಗೊಂಡ ಹೊಸ ಕಾರ್ಯಯೋಜನೆಗಳು ನಿಮ್ಮ ನಿರೀಕ್ಷೆಗಳನ್ನು ತಲುಪುವುದಿಲ್ಲ. ಧ್ಯಾನ ಯೋಗವನ್ನು ಮಾಡುವ ಮೂಲಕ ನಿಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ
Discussion about this post