ಹಬ್ಬಗಳು ಕೇವಲ ಸಂತೋಷದಿಂದ ಆಚರಿಸುವ ಕ್ಷಣಗಳಲ್ಲ. ಹಬ್ಬಗಳು ನಮ್ಮ ಅಸ್ತಿತ್ವದ ಬಗ್ಗೆ ನಾವು ಪ್ರತಿಬಿಂಬಿಸಬೇಕಾದ ಕ್ಷಣಗಳಾಗಿವೆ. ಹೀಗಾಗಿ ಭಾರತದಲ್ಲಿ ಆಚರಿಸುವ ಎಲ್ಲಾ ಹಬ್ಬಗಳಿಗೂ ಮಹತ್ವವಿದೆ. ಹೇಳಿ ಕೇಳಿ ಭಾರತ ಆಧ್ಯಾತ್ಮಿಕ ಭೂಮಿ, ಇದೇ ಕಾರಣದಿಂದ ನಾವು ಆಚರಿಸುವ ಹಬ್ಬಗಳು ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ವ್ಯತ್ಯಾಸ ಇರಬಹುದು, Naga temple ಆದರೆ ಅದರೊಳಗಿನ ಸಾರ ಮಾತ್ರ ಒಂದೇ.
ಹಬ್ಬಗಳ ಹೆಬ್ಬಾಗಿಲು ಎಂದು ಕರೆಸಿಕೊಂಡಿರುವ ನಾಗರಪಂಚಮಿ ಇನ್ನಿಲ್ಲದ ಮಹತ್ವವಿದೆ. ಕರ್ನಾಟಕದ ಕರಾವಳಿ ಸೇರಿದಂತೆ ಕೇರಳದಲ್ಲಿ ನಾಗರ ಪಂಚಮಿಯನ್ನು ಹಬ್ಬವಾಗಿ ಆಚರಿಸೋದಿಲ್ಲ. ಇಲ್ಲಿ ಅದು ಆರಾಧನೆಗೆ ಸೀಮಿತ. ಕುಟುಂಬದ ನಾಗ, ಗ್ರಾಮದ ನಾಗ, ಜಾಗದ ನಾಗ ಹೀಗೆ ವಿವಿಧ ರೀತಿಯಲ್ಲಿ ಆರಾಧಿಸಲಾಗುತ್ತದೆ. ಉಳಿದ ಭಾಗಗಳಲ್ಲಿ ನಾಗರಪಂಚಮಿ ಆರಾಧನೆಯೊಂದಿಗೆ (Naga temple )ಹಬ್ಬವಾಗಿ ಆಚರಿಸಲ್ಪಡುತ್ತದೆ.
ಈ ಮಹತ್ವದ ನಡುವೆ ಭಾರತದಲ್ಲಿ ಸರ್ಪಗಳಿಗೆ ಮೀಸಲಾಗಿರುವ ಹಲವಾರು ದೇವಾಲಯಗಳಿಗೆ. (Naga temple ) ಕೆಲವು ದೇವಸ್ಥಾನಗಳು ವಿಶ್ವ ಪ್ರಸಿದ್ಧವಾಗಿದೆ ಕೂಡಾ. ಪುರಾಣಗಳು ನಮಗೆ ಪಕೃತಿ ಆರಾಧನೆಯಲ್ಲಿ ತಿಳಿಸಿಕೊಟ್ಟಿದೆ. ಅದೇ ರೀತಿ ಹಾವುಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಭಾರತದಲ್ಲಿರುವ ಪ್ರಮುಖ ನಾಗ ದೇವಾಲಯಗಳು ಹೀಗಿವೆ.
ಮನ್ನರಸಲ ದೇವಸ್ಥಾನ, ಕೇರಳ
ದೇವರ ನಾಡು ಎಂದು ಕರೆಸಿಕೊಂಡಿರು ಕೇರಳದಲ್ಲಿ ದೇವಸ್ಥಾನಗಳು ಒಂದಕ್ಕಿಂತ ಮತ್ತೊಂದು ಶಕ್ತಿ ಶಾಲಿ. ಅದೇ ರೀತಿ ಕೇರಳದಲ್ಲಿ ಅನೇಕ ಸರ್ಪ ದೇವಾಲಯಗಳಿದೆ. ಅದರಲ್ಲಿ ಪ್ರಮುಖವಾಗಿರುವ ದೇವಾಲಯ ಅಂದ್ರೆ ಮನ್ನರಸಲ ದೇವಸ್ಥಾನ. ಮೂರು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ದೇವಸ್ಥಾನದಲ್ಲಿ 30 ಸಾವಿರ ಕಲ್ಲಿನ ವಿಗ್ರಹಗಳಿದೆ. ಸಂತಾನಭಿವೃದ್ಧಿಗಾಗಿ ಇಲ್ಲಿ ವಿಶೇಷ ಹರಕೆಯನ್ನು ಕಟ್ಟಿಕೊಳ್ಳಲಾಗುತ್ತದೆ. ನಾಗ ರಾಜ ಮತ್ತು ನಾಗಯಕ್ಷಿಯನ್ನು ಪ್ರಸನ್ನಗೊಳಿಸುವ ಸಲುವಾಗಿ ಸರ್ಪ ಬಲಿ ಸೇರಿದಂತೆ ಸರ್ಪ ದೋಷ ಪರಿಹಾರಕ್ಕೆ ವಿಶಿಷ್ಟ ಪೂಜೆಗಳನ್ನು ನಡೆಸಲಾಗುತ್ತದೆ.

ಭುಜಂಗ ನಾಗ ದೇವಾಲಯ, ಗುಜರಾತ್
ಗುಜರಾತ್‌ನ ಹೊರವಲಯದಲ್ಲಿ ಈ ದೇವಸ್ಥಾನವಿದ್ದು, ಭುಜಿಯ ಕೋಟೆಯ ಮೇಲೆ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಯುದ್ಧದಲ್ಲಿ ಮಡಿದ ಕೊನೆಯ ನಾಗ ಕುಲದ ಭುಜಂಗನಿಗೆ ಈ ದೇವಾಲಯ ಸಮರ್ಪಿತವಾಗಿದೆ.ನಾಗ ಕುಲದ ಕೊನೆಯ ರಾಜನ ಹೆಸರಿನಲ್ಲೇ ಈ ಕೋಟೆಯೂ ಕರೆಸಿಕೊಂಡಿದೆ. ಪ್ರತಿ ವರ್ಷ ನಾಗರ ಪಂಚಮಿಯಂದು ದೇವಸ್ಥಾನದಲ್ಲಿ ಜಾತ್ರೆ ನಡೆಯುತ್ತದೆ.ಅದನ್ನು ಹೊರತು ಪಡಿಸಿದರೆ ಇದೊಂದು ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ. ಪ್ರಸ್ತುತ ಈ ಕೋಟೆಯು ಭಾರತೀಯ ಸೇನೆಯ ವಶದಲ್ಲಿದೆ.

ಶೇಷನಾಗ ದೇವಾಲಯ, ಜಮ್ಮು ಮತ್ತು ಕಾಶ್ಮೀರ
ಶೇಷನಾಗ ದೇವಾಲಯ ಮನ್ಸಾರ್ ಸರೋವರದ ಪೂರ್ವ ದಂಡೆಯಲ್ಲಿದೆ. ಪುರಾಣಗಳ ಪ್ರಕಾರ, ಹಾವುಗಳ ರಾಜ ಎಂದು ಕರೆಯಲ್ಪಡುವ ಶೇಷನಾಗನು ಪಹಲ್ಗಾಮ್ ಬಳಿ ಸರೋವರ ನಿರ್ಮಿಸಿದ ಹಾಗೂ ಶೇಷನಾಗನು ಇನ್ನೂ ಇಲ್ಲಿ ವಾಸಿಸುತ್ತಿದ್ದಾನೆ ಅನ್ನುವ ನಂಬಿಕೆಯಿದೆ ಅಮರನಾಥ ಗುಹೆಗೆ ಯಾತ್ರೆ ಕೈಗೊಳ್ಳುವ ಭಕ್ತರು ಈ ಸರೋವರಕ್ಕೆ ಭೇಟಿ ನೀಡಿ ಶೇಷನಾಗನನ್ನು ಪೂಜಿಸುತ್ತಾರೆ.
ನವವಿವಾಹಿತರು ಈ ಶೇಷನಾಗನ ದರ್ಶನ ಪಡೆದು ಅಶೀರ್ವಾದ ಪಡೆದರೆ ಮುಂದಿನ ಜೀವನ ಸಂತೋಷಮಯವಾಗಿರುತ್ತದೆಯಂತೆ. ಹೀಗಾಗಿಯೇ ನವವಿವಾಹಿತ ದಂಪತಿಗಳು ಆಶೀರ್ವಾದ ಪಡೆಯಲು ದೂರದೂರುಗಳಿಂದ ಆಗಮಿಸುತ್ತಾರೆ. ಹೀಗೆ ಬಂದವರು ಮನ್ಸಾರ್ ಸರೋವರದ ಪವಿತ್ರವಾದ ನೀರಿನಲ್ಲಿ ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ಅವರು ಶುದ್ಧಗೊಳ್ಳುತ್ತಾರೆ ಅನ್ನುವ ನಂಬಿಕೆಯೂ ಇದೆ.

ನಾಗನಾಥಸ್ವಾಮಿ ದೇವಸ್ಥಾನ, ತಮಿಳುನಾಡು
ತಮಿಳುನಾಡಿನಲ್ಲಿ ಅನೇಕ ನಾಗ ದೇವಾಲಯಗಳಿದೆ. ಈ ಪೈಕಿ ನಾಲ್ಕು ದೇವಸ್ಥಾನಗಳು ವಿಶ್ವ ಪ್ರಸಿದ್ಧವಾಗಿದೆ. ಈ ನಾಲ್ಕು ದೇವಸ್ಥಾನಗಳು ಸರ್ಪ ದೋಷ ಪರಿಹಾರಕ್ಕೆ ಪ್ರಸಿದ್ಧ ದೇವಾಲಯಗಳು ಅನ್ನಿಸಿಕೊಂಡಿದೆ. ಕುಂಭಕೋಣಂ ನಾಗೇಶ್ವರ, ತಿರುನಾಗೇಶ್ವರ ( ನಾಗನಾಥಸ್ವಾಮಿ ದೇವಾಲಯ ) ತಿರುಪಾಂಬರುಮ್ , ನಾಗೂರ್. ಇವುಗಳ ಜೊತೆಗೆ ಕನ್ಯಾಕುಮಾರಿ ಜಿಲ್ಲೆಯ ನಾಗರಕೊಯಿಲ್ ನಗರದಲ್ಲಿರುವ ನಾಗರಾಜ ಮಂದಿರವು ಹಾವುಗಳ ರಾಜ ವಾಸುಕಿಗೆ ಸಮರ್ಪಿತವಾದ ಮಂದಿರವಾಗಿದೆ.

ಇಷ್ಟು ಮಾತ್ರವಲ್ಲದೆ ಕರ್ನಾಟಕದಲ್ಲೂ ಪ್ರಸಿದ್ಧ ನಾಗ ದೇವಾಲಯಗಳಿದೆ. ಅವುಗಳನ್ನು ಮುಂದಿನ ಲೇಖನದಲ್ಲಿ ಓದಿಕೊಳ್ಳಬಹುದಾಗಿದೆ.

Discussion about this post