ಡೆಂಗ್ಯೂ ಜ್ವರದಿಂದಾಗಿ ಶುಭಮನ್ ಗಿಲ್ ಅವರಲ್ಲಿ ಪ್ಲೇಟ್ ಲೆಟ್ ಕೊರತೆ ಕಂಡು ಬಂದಿತ್ತು. ಹೀಗಾಗಿ ಅವರು ಇಡೀ ವಿಶ್ವಕಪ್ ಟೂರ್ನಿಯಿಂದ ಹೊರಬೀಳಲಿದ್ದಾರೆ ಎಂದು ಹೇಳಲಾಗಿತ್ತು.
ವಿಶ್ವಕಪ್ cricket world cup ಪಂದ್ಯಾವಳಿಯ ಬಹು ನಿರೀಕ್ಷಿತ ಭಾರತ- ಪಾಕಿಸ್ತಾನ ಪಂದ್ಯಕ್ಕೆ ನರೇಂದ್ರ ಮೋದಿ ಸ್ಟೇಡಿಯಂ ಸಜ್ಜಾಗಿದೆ. ಈ ಹಿಂದೆ ಮೊದಲ ಎರಡು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಪ್ರಾರಂಭಿಕ ಆಟಗಾರ ಶುಭಮನ್ ಗಿಲ್ (shubman gill) ಇಂದಿನ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಶುಭಮನ್ ಗಿಲ್ (shubman gill) ಅವರು ಪಾಕಿಸ್ತಾನದ ವಿರುದ್ಧ ಪಂದ್ಯಕ್ಕೆ ಅಲಭ್ಯರಾಗುತ್ತಾರೆ ಅನ್ನಲಾಗಿತ್ತು.
ಡೆಂಗ್ಯೂ ಜ್ವರದಿಂದಾಗಿ ಆಸ್ಟ್ರೇಲಿಯಾ ಮತ್ತು ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಶುಭಮನ್ ಗಿಲ್ ಆಡಿರಲಿಲ್ಲ. ತೀವ್ರ ಜ್ವರದ ಕಾರಣ ಚೆನ್ನೈಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಗಿಲ್ ಒಂದು ದಿನ ಚಿಕಿತ್ಸೆ ಪಡೆದಿದ್ದರು. ಇದೀಗ ಡೆಂಗ್ಯೂ ಜ್ವರದಿಂದ ಚೇತರಿಸಿಕೊಂಡ ಟೀಮ್ ಇಂಡಿಯಾದ ಯುವ ಡ್ಯಾಶಿಂಗ್ ಆಟಗಾರ ಶುಭಮನ್ ಗಿಲ್(shubman gill) ಪಾಕ್ ವಿರುದ್ಧದ ಪಂದ್ಯದಲ್ಲಿ ಆಡಲಿದ್ದಾರೆ. ಈ ಕಾರಣದಿಂದ ಇಶಾನ್ ಕಿಶನ್ ಇಂದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಡೆಂಗ್ಯೂ ಜ್ವರದಿಂದಾಗಿ ಶುಭಮನ್ ಗಿಲ್ ಅವರಲ್ಲಿ ಪ್ಲೇಟ್ ಲೆಟ್ ಕೊರತೆ ಕಂಡು ಬಂದಿತ್ತು. ಹೀಗಾಗಿ ಅವರು ಇಡೀ ವಿಶ್ವಕಪ್ ಟೂರ್ನಿಯಿಂದ ಹೊರಬೀಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಆತ್ಮವಿಶ್ವಾಸದೊಂದಿಗೆ ಡೆಂಗ್ಯೂ ಜ್ವರಕ್ಕೆ ಸೆಡ್ಡು ಹೊಡೆದು ಗಿಲ್ ಮೈದಾನಕ್ಕೆ ಇಳಿದಿದ್ದಾರೆ.
ಕರಾವಳಿಯಲ್ಲಿ ಚಿಗುರಿದ ಕಳ್ಳರ ಗ್ಯಾಂಗ್ ಹೆಡೆಮುರಿ ಕಟ್ಟಿದ ಬಂಟ್ವಾಳ ಪೊಲೀಸರು
ಶುಕ್ರವಾರವಷ್ಟೇ ನಾಯಕ ರೋಹಿತ್ ಶರ್ಮ ಕೂಡ ಗಿಲ್ ಅವರು ಶೇ.90ರಷ್ಟು ಆಡುವ ಸಾಧ್ಯತೆ ಇದೆ ಅಂದಿದ್ದರು. ನಿರೀಕ್ಷೆಯಂತೆ ಶುಭಮನ್ ಗಿಲ್(shubman gill) ಇದೀಗ ಅಬ್ಬರಿಸಲು ಸಿದ್ದವಾಗಿದ್ದಾರೆ.
ಕಳೆದ ವರ್ಷ ಎಲ್ಲ ಮೂರೂ ವಿಧದ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಗಿಲ್ ಗೆ ಇದು ವಿಶ್ವಕಪ್ ಪಂದ್ಯಾವಳಿಯ ಪದಾರ್ಪಣೆ ಪಂದ್ಯವಾಗಲಿದೆ.
Discussion about this post