ಬುಧವಾರ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದ ಎರಡನೇ ಇನ್ನಿಂಗ್ಸ್ ವೇಳೆ ರೋಹಿತ್ ಶರ್ಮಾ ( Rohit sharma) ಬಾರಿಸಿದ ಸಿಕ್ಸರ್ ಬಾಲಕಿಯೊಬ್ಬಳಿಗೆ ಬಡಿದು ಗಾಯಗೊಂಡ ಘಟನೆ ನಡೆದಿದೆ. 5ನೇ ಓವರ್ ನಲ್ಲಿ ಡೇವಿಡ್ ವಿಲ್ಲಿ ಎಸೆದ ಬಾಲ್ ಗೆ ರೋಹಿತ್ ಸಿಕ್ಸರ್ ಬಾರಿಸಿದಾಗ ಈ ಘಟನೆ ನಡೆದಿದೆ.
ರೋಹಿತ್ ಶರ್ಮಾ ( Rohit sharma ) ಬಾರಿಸಿದ ಸಿಕ್ಸರ್ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಬಾಲಕಿಯ ಮೇಲೆ ಬಿದ್ದಿದೆ. ಈ ವೇಳೆ ಬಾಲಕಿ ಜೋರಾಗಿ ಅಳಲು ಪ್ರಾರಂಭಿಸಿದ್ದಾಳೆ. ನೇರ ಪ್ರಸಾರದಲ್ಲಿದ್ದ ಕ್ಯಾಮಾರಗಳು ಈ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದ ವೇಳೆ, ಘಟನೆಯ ಗಂಭೀರತೆಯನ್ನು ಅರಿತ ಆಟಗಾರರ ಚಿಕಿತ್ಸೆಗಾಗಿ ಮೀಸಲಾಗಿದ್ದ ವೈದ್ಯರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಮಾಹಿತಿಗಳ ಪ್ರಕಾರ ಬಾಲಕಿಗೆ ದೊಡ್ಡ ಗಾಯಗಳಾಗಿಲ್ಲ, ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಅನ್ನಲಾಗಿದೆ.
ಇನ್ನು ಇದೇ ಪಂದ್ಯವನ್ನು ಭಾರತ 10 ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿದೆ. ಈ ಮೂಲಕ 1-0 ಅಂಕಗಳ ಮೂಲಕ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
Discussion about this post